* ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿಗೆ ಮತ್ತೊಮ್ಮೆ ಕೋವಿಡ್ ಪಾಸಿಟಿವ್
* ಚೆನ್ನೈನಲ್ಲೇ ಐಸೋಲೇಷನ್‌ಗೆ ಒಳಗಾಗಿರುವ ಮೈಕ್ ಹಸ್ಸಿ
* ಕೋವಿಡ್ ಕಾರಣದಿಂದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಚೆನ್ನೈ(ಮೇ.11): ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ, ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿಗೆ ಮತ್ತೊಮ್ಮೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ. ಕಳೆದ ಶುಕ್ರವಾರ ನಡೆಸಿದ ಕೋವಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ಬಂದಿತ್ತು. ಆದರೆ ಮತ್ತೊಂದು ಟೆಸ್ಟ್‌ನಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹಸ್ಸಿ ಸದ್ಯ ಭಾರತದಲ್ಲೇ ಉಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ.
ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್ ಲಕ್ಷ್ಮಿಪತಿ ಬಾಲಾಜಿ, ಬಸ್ ಸಿಬ್ಬಂದಿ ಹಾಗೂ ಹಸ್ಸಿಗೆ ಕೋವಿಡ್ ದೃಢಪಟ್ಟಿತ್ತು. ಈ ಮೂಲಕ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋವಿಡ್‌ಗೆ ಒಳಗಾದ ಮೊದಲ ವಿದೇಶಿ ವ್ಯಕ್ತಿ ಎನ್ನುವ ಅಪಖ್ಯಾತಿಗೆ ಹಸ್ಸಿ ಪಾತ್ರರಾಗಿದ್ದರು. ಕೋವಿಡ್‌ಗೆ ಹಸ್ಸಿಗೆ ಯಾವುದೇ ಸೋಂಕಿನ ಲಕ್ಷಣಗಳಿರಲಿಲ್ಲ. ಹೀಗಿದ್ದೂ ಆಸೀಸ್ ಎಡಗೈ ಬ್ಯಾಟ್ಸ್‌ಮನ್ ಐಸೋಲೇಷನ್‌ಗೆ ಒಳಗಾಗಿದ್ದರು.
undefined
ನಾವು ಇಂದು ಮೈಕ್ ಹಸ್ಸಿ ಜತೆ ಮಾತನಾಡಿದ್ದೇವೆ. ಅವರೊಬ್ಬ ಸ್ಪೂರ್ತಿಯ ಚಿಲುಮೆ. ಅವರಲ್ಲಿ ಸದ್ಯ ಮಂದವಾದ ಕೋವಿಡ್ ಲಕ್ಷಣಗಳಿವೆ. ಸದ್ಯ ಹೋಟೆಲ್‌ನಲ್ಲಿಯೇ ಹಸ್ಸಿ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಅವರಿಗೆ ಉತ್ತಮ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಟ್ರೇಲಿಯನ್ ಕ್ರಿಕೆಟ್ ಅಸೋಸಿಯೇಷನ್ ಕಾರ್ಯನಿರ್ವಾಹಕ ಟೋಡ್ ಗ್ರೀನ್ ಬರ್ಗ್ ತಿಳಿಸಿದ್ದಾರೆ.
ಐಪಿಎಲ್ 2021: ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿಗೆ ಕೋವಿಡ್ 19 ದೃಢ..!
ಬಯೋ ಬಬಲ್‌ನೊಳಗಿದ್ದ ಕೆಕೆಆರ್ ತಂಡದ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್‌ಗೆ ಮೊದಲು ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಇದಾದ ಬಳಿಕ ಮರುದಿನ ಅಮಿತ್ ಮಿಶ್ರಾ ಹಾಗೂ ವೃದ್ದಿಮಾನ್ ಸಾಹಗೆ ಕೋವಿಡ್ ಸೋಂಕು ಪತ್ತೆಯಾಗುತ್ತಿದ್ದಂತೆಯೇ ಮೇ 04ರಂದು ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಭಾರತದಿಂದ ಆಸ್ಟ್ರೇಲಿಯಾಗೆ ವಿಮಾನ ಹಾರಾಟವನ್ನು ನಿರ್ಬಂಧಿಸಿದ್ದು, ಸದ್ಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳು ಮಾಲ್ಡೀವ್ಸ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. 10 ದಿನಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿ ಮೇ.15ರಂದು ಎಲ್ಲರೂ ಮಾಲ್ಡೀವ್ಸ್‌ನಿಂದ ಆಸ್ಟ್ರೇಲಿಯಾಗೆ ವಿಮಾನ ಏರಲಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona