IPL 2021 CSK vs DC ಕ್ರಿಕೆಟ್‌ನಲ್ಲಿ ಮೊದಲ ಬಾರಿ 360 ಡಿಗ್ರಿ ಕ್ಯಾಮೆರಾ ಬಳಕೆ!

By Suvarna NewsFirst Published Oct 11, 2021, 11:48 AM IST
Highlights

* ಕ್ರಿಕೆಟ್‌ನಲ್ಲಿ ಹೊಸ ಅನುಭವಕ್ಕೆ ಸಾಕ್ಷಿಯಾದ ಮೊದಲ ಕ್ವಾಲಿಫೈಯರ್ ಪಂದ್ಯ

* ಮೊದಲ ಬಾರಿಗೆ 360 ಡಿಗ್ರಿ ಕ್ಯಾಮರಾ ಬಳಕೆ

* ಸ್ವತಃ ಬಿಸಿಸಿಐನಿಂದ ಅಧಿಕೃತ ಮಾಹಿತಿ

ದುಬೈ(ಅ.11) : ತಂತ್ರಜ್ಞಾನ ಬಳಕೆ ಕ್ರಿಕೆಟ್‌ ಆಟದ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತಿದ್ದು, ಟೀವಿ ವೀಕ್ಷಕರಿಗೆ ಹೊಸ ಅನುಭವ ನೀಡುವ ಉದ್ದೇಶದಿಂದಾಗಿ ಮೊದಲ ಬಾರಿಗೆ 360 ಡಿಗ್ರಿ ಕ್ಯಾಮೆರಾಗಳನ್ನು ಐಪಿಎಲ್‌ (IPL 2021) ಕ್ವಾಲಿಫೈಯರ್‌-1 ಪಂದ್ಯದ ವೇಳೆ ಬಳಕೆ ಮಾಡಲಾಯಿತು. 

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಮೇಲ್ಛಾವಣಿ ಮೇಲೆ 100ಕ್ಕೂ ಹೆಚ್ಚು 4ಕೆ ಗುಣಮಟ್ಟದಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಬಲ್ಲ 360 ಡಿಗ್ರಿ ತಿರುಗುವ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕ್ರಿಕೆಟ್‌(Cricket) ನಲ್ಲಿ ಇದು ಮೊದಲ ಪ್ರಯೋಗ ಎಂದು ಸ್ವತಃ ಬಿಸಿಸಿಐ (BCCI) ತಿಳಿಸಿದೆ. ಭಾರತದ ಪ್ರಮುಖ ಕ್ರಿಕೆಟ್‌ ಕ್ರೀಡಾಂಗಣಗಳಲ್ಲೂ ಇಂತಹ ಕ್ಯಾಮೆರಾಗಳನ್ನು ಅಳವಡಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

WATCH - First time in cricket: 360° vision of action 👌👌

📹📹https://t.co/dbLJdWuN2n

— IndianPremierLeague (@IPL)

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಹಾಗೂ ನಾಯಕ ರಿಷಭ್ ಪಂತ್ (Rishabh Pant) ಬಾರಿಸಿದ ಸಮಯೋಚಿತ ಅರ್ಧಶತಕಗಳ ನೆರವಿನಿಂದ 5 ವಿಕೆಟ್‌ ಕಳೆದುಕೊಂಡು 172 ರನ್‌ ಕಲೆಹಾಕುವ ಮೂಲಕ ಚೆನ್ನೈ ತಂಡಕ್ಕೆ ಸವಾಲಿನ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಸಿಎಸ್‌ಕೆ ಆರಂಭದಲ್ಲೇ ಫಾಫ್‌ ಡು ಪ್ಲೆಸಿಸ್ ವಿಕೆಟ್ ಕಳೆದುಕೊಂಡಿತಾದರೂ, ಇದಾದ ಬಳಿಕ ಋತುರಾಜ್ ಗಾಯಕ್ವಾಡ್ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ ಬಾರಿಸಿದ ಅಕರ್ಷಕ ಅರ್ಧಶತಕಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಟಿ20 ವಿಶ್ವಕಪ್ ಟೂರ್ನಿಗೆ ಹೊಸ ನಿಯಮ ಸೇರ್ಪಡೆ:

 ಬರೋಬ್ಬರಿ 5 ವರ್ಷಗಳ ಬಳಿಕ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗುತ್ತಿದೆ. 2016ರಲ್ಲಿ ಭಾರತದಲ್ಲಿ ಕಡೆಯ ಬಾರಿಗೆ ಟಿ20  ವಿಶ್ವಕಪ್ ಟೂರ್ನಿಯು ಜರುಗಿತ್ತು. ಇದೇ ಅಕ್ಟೋಬರ್‌ 17ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ  ಪಂದ್ಯಗಳ ಗುಣಮಟ್ಟ ಹೆಚ್ಚಿಸಲು ಐಸಿಸಿ (ICC) ಹೊಸ ನಿಯಮಗಳನ್ನು ಪರಿಚಯಿಸಿದೆ. 

IPL 2021: ಡೆಲ್ಲಿ ವಿರುದ್ಧ ಧೋನಿ ಸ್ಫೋಟ ಕಂಡ ಕೊಹ್ಲಿ ಹೇಳಿದ್ದು ಒಂದೇ ಮಾತು!

ಹೌದು, ಟಿ20ವಿಶ್ವಕಪ್‌ (T20 World Cup) ನಲ್ಲಿ ಇದೇ ಮೊದಲ ಬಾರಿಗೆ ಡಿಆರ್‌ಎಸ್‌ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ. ಪ್ರತೀ ತಂಡವು ಒಂದು ಇನ್ನಿಂಗ್ಸ್‌ನಲ್ಲಿ ಗರಿಷ್ಠ ಎರಡು ಡಿಆರ್‌ಎಸ್‌ ತೆಗೆದುಕೊಳ್ಳಬಹುದಾಗಿದೆ. ಇದಕ್ಕೂ ಮೊದಲು ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ಡಿಆರ್‌ಎಸ್‌ ನಿಯಮ ಬಳಸುತ್ತಿರಲಿಲ್ಲ. ಜೊತೆಗೆ ಐಪಿಎಲ್‌ ಮಾದರಿಯಲ್ಲಿ ಇನ್ನಿಂಗ್ಸ್‌ ನಡುವೆ 2 ಬಾರಿ ಎರಡೂವರೆ ನಿಮಿಷಗಳ ಟೈಮ್‌ ಔಟ್‌ ಇರಲಿದೆ.

ಇನ್ನು ಪಂದ್ಯಕ್ಕೆ ಮಳೆ ಹಾಗೂ ಇನ್ನಿತರೆ ಕಾರಣಗಳಿಂದ ರದ್ದಾಗುವ ಹಂತಕ್ಕೆ ಬಂದರೆ ಫಲಿತಾಂಶಕ್ಕಾಗಿ ಡೆಕ್ವರ್ಥ್ ಲೂಯಿಸ್ ನಿಯಮದ ಮೊರೆ ಹೋಗಲಾಗುತ್ತದೆ. ಸಾಮಾನ್ಯ ಟಿ20 ಕ್ರಿಕೆಟ್‌ನಲ್ಲಿ ಡೆಕ್ವರ್ಥ್ ಲೂಯಿಸ್ ನಿಯಮ ಅಳವಡಿಸಲು ಎರಡನೇ ಇನಿಂಗ್ಸ್‌ನಲ್ಲಿ ಕನಿಷ್ಠ 5 ಓವರ್‌ಗಳಾದರೂ ನಡೆದಿರಬೇಕು. ಆದರೆ ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯ ನಾಕೌಟ್ ಪಂದ್ಯಗಳಿಗೆ ಈ ನಿಯಮವನ್ನು ಪರಿಷ್ಕರಿಸಲಾಗಿದೆ. ಸೆಮಿಫೈನಲ್‌ ಹಾಗೂ ಫೈನಲ್‌ನಲ್ಲಿ 2 ತಂಡಗಳು ಕನಿಷ್ಠ 10 ಓವರ್‌ ಆಡಿದ ನಂತರ ಡೆಕ್ವರ್ಥ್ ಲೂಯಿಸ್ ನಿಯಮ ಅಳವಡಿಸಲು ತೀರ್ಮಾನಿಸಲಾಗಿದೆ
 

click me!