IPL 2021; ಗೆದ್ದು ಬೀಗಿದ ಡೆಲ್ಲಿಗೆ ಮತ್ತೆ ಅಗ್ರ ಸ್ಥಾನ, ನಾಯಕ ಬದಲಾದರೂ ತಪ್ಪದ ಸೋಲು!

Published : Sep 22, 2021, 11:05 PM ISTUpdated : Sep 22, 2021, 11:34 PM IST
IPL 2021; ಗೆದ್ದು ಬೀಗಿದ ಡೆಲ್ಲಿಗೆ ಮತ್ತೆ ಅಗ್ರ ಸ್ಥಾನ, ನಾಯಕ ಬದಲಾದರೂ ತಪ್ಪದ ಸೋಲು!

ಸಾರಾಂಶ

* ಹೈದರಾಬಾದ್ ವಿರುದ್ಧ ಡೆಲ್ಲಿ ಹುಡುಗರಿಗೆ ಅಧಿಕಾರಯುತ ಜಯ * ಸಾಧಾರಣ ಗುರಿಯನ್ನು ಸಲೀಸಾಗಿ ಮುಟ್ಟಿದ ಪಂತ್ ತಂಡ * ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ

ದುಬೈ, (ಸೆ.22): ಭಾರತವಾದರೇನು? ದುಬೈ ಆದರೆ ಏನು? ಎಂದು ಪ್ರಶ್ನೆ ಮಾಡುವಂತೆ ಆಡಿದ ಡೆಲ್ಲಿ ಹುಡುಗರು ತಮ್ಮ ಗೆಲುವಿನ ಅಭಿಯಾನ ಮುಂದುವರಿಸಿದ್ದಾರೆ.  ಸನ್‌ರೈಸರ್ಸ್‌ ಹೈದರಾಬಾದ್‌(Sunrisers Hyderabad)  ವಿರುದ್ಧ ಎಂಟು ವಿಕೆಟ್‌ಗಳ ಅಧಿಕಾರಯುತ ಜಯ ದಾಖಲಿಸಿಕೊಂಡು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.

ಪಂಜಾಬ್‌ನಿಂದ ಮ್ಯಾಚ್ ಕಸಿದ ತ್ಯಾಗಿಗೆ ಹೊಗಳಿಕೆ ಸುರಿಮಳೆ

ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ​  ಶಿಸ್ತುಬದ್ಧ ಬೌಲಿಂಗ್ ದಾಳಿಗೆ  ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ರನ್‌ಗಳಿಸಲು ತಿಣುಕಾಡಿದ್ದು, 135ರನ್‌ಗಳ ಸಾಧಾರಣ ಗುರಿ ನೀಡಿತ್ತು. 

ಬ್ಯಾಟಿಂಗ್ ಆರಂಭಿಸಿದ ಡೆಲ್ಲಿಗೆ ಶಿಖರ್ ಧವನ್ ನೆರವಾದರು. ಅತಿ ಹೆಚ್ಚು ರನ್ ಗಳಿಕೆ ಶ್ರೇಯದ ಜತೆ ಕ್ಯಾಪ್ ತಮ್ಮದಾಗಿಸಿಕೊಂಡರು. ಹೈದರಾಬಾದ್ ನಾಯಕನ ಬದಲಾವಣೆ ಮಾಡಿಕೊಂಡು ಕಣಕ್ಕೆ ಇಳಿದರೂ ಯಾವ ಪ್ರಯೋಜನ ಆಗಲಿಲ್ಲ. ಶಿಖರ್ ಧವನ್ ಕೊಡುಗೆ ನಂತರ ಶ್ರೇಯಸ್ ಅಯ್ಯರ್ ಮತ್ತು ಪಂತ್ ಆಟ ಮುಂದುವರಿಸಿದರು. ಯಾವ ಹಂತದಲ್ಲಿಯೂ ಹೈದರಾಬಾದ್‌ಗೆ ಗೆಲುವಿನ ಆಸೆ ಚಿಗುರಲೇ ಬಿಡಲಿಲ್ಲ. 

ಹೈದಾಬಾದ್ ತಂಡ ಸಾಧಾರಣ ಮೊತ್ತ ಕಲೆಹಾಕಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು. ಯಾವ ಬೌಲರ್‌ಗಳಿಂದಲೂ ಮಾರಕ ಪ್ರದರ್ಶನ ಕಂಡುಬರಲೇ ಇಲ್ಲ. ಶಿಖರ್ ಧವನ್, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಸರಿಯಾಗಿಯೇ ಬಳಸಿಕೊಂಡರು. 

ಈ ಬಗ್ಗೆ ಮಾತನಾಡಿದ ನಾಯಕ ಕೇನ್ ವಿಲಿಯಮ್ಸನ್ , ನಾವು ಒಂದು ಮೂವತ್ತು ರನ್ ಕಡಿಮೆ ಕಲೆ ಹಾಕಿದೆವು. ಡೆಲ್ಲಿ ಹುಡುಗರು ಅದ್ಭುತ ಆಟ ಪ್ರದರ್ಶನ ಮಾಡಿದರು ಎಂದರು. ಆರೆಂಜ್ ಕಗ್ಯಾಪ್ ಪಡೆದುಕೊಂಡ ಶಿಖರ್ ಧವನ್ ಇದೆ ಆಟವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.

ವಾರ್ನರ್ ವಿಕೆಟ್ ಟರ್ನಿಂಗ್ ಪಾಯಿಂಟ್: ಬಿಗಿ ಬೌಲಿಂಗ್ ದಾಳಿಯಿಂದ ಡೆಲ್ಲಿ ಕ್ಯಾಪಿಟಲ್ಸ್​ ಬೌಲರುಗಳು ಸನ್​ರೈಸರ್ಸ್​ ಹೈದರಾಬಾದ್​ ತಂಡದ ರನ್ ವೇಗವನ್ನು ನಿಯಂತ್ರಿಸಿದ್ದರು.  ಡೇವಿಡ್ ವಾರ್ನರ್ ಅವರ ವಿಕೆಟ್ ಈ ಮ್ಯಾಚ್‌ ನ ಟರ್ನಿಂಗ್ ಪಾಯಿಂಟ್.  ರಬಾಡಾ ಬೌಲಿಂಗ್ ಗೆಲುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿತು. 
 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Good News for RCB Fans: ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ? KSCA-BCCI ಮಾತುಕತೆ
Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!