IPL 2021: ಡೆಲ್ಲಿ ಕ್ಯಾಪಿಟಲ್ಸ್​ಗೆ ಸಾಧಾರಣ ಗುರಿ ನೀಡಿದ ಸನ್‌ರೈಸರ್ಸ್‌

Published : Sep 22, 2021, 09:33 PM ISTUpdated : Sep 22, 2021, 09:42 PM IST
IPL 2021: ಡೆಲ್ಲಿ ಕ್ಯಾಪಿಟಲ್ಸ್​ಗೆ ಸಾಧಾರಣ ಗುರಿ ನೀಡಿದ ಸನ್‌ರೈಸರ್ಸ್‌

ಸಾರಾಂಶ

IPL 2021 ದ್ವಿತೀಯಾರ್ಧದ ನಾಲ್ಕನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್​ಗೆ ಸಾಧಾರಣ ನೀಡಿದ ಸನ್‌ರೈಸರ್ಸ್‌ ಡೆಲ್ಲಿ ಬೌಲರ್‌ಗಳ ದಾಳಿಗೆ ರನ್‌ಗಳಿಸಲು ತಿಣುಕಾಡಿದ ಹೈದರಾಬಾದ್ 

ದುಬೈ, (ಸೆ.22): ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ​  ಶಿಸ್ತುಬದ್ಧ ಬೌಲಿಂಗ್ ದಾಳಿಗೆ  ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ರನ್‌ಗಳಿಸಲು ತಿಣುಕಾಡಿದ್ದು, 135ರನ್‌ಗಳ ಸಾಧಾರಣ ಗುರಿ ನೀಡಿದೆ.

IPL 2021: ಟಿ ನಟರಾಜನ್‌ ಸೇರಿ ಸನ್‌ರೈಸರ್ಸ್‌ನ 6 ಆಟಗಾರರಿಗೆ ಕೋವಿಡ್ ಪಾಸಿಟಿವ್..!

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) ದ್ವಿತೀಯಾರ್ಧದ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ (Sunrisers Hyderabad), 20 ಓವರ್‌ಗಳಲ್ಲಿ 134 ರನ್‌ಗಳಿಸಷ್ಟೇ ಶಕ್ತವಾಯ್ತು. 

ಅನ್ರಿಕ್ ನೋಕಿಯ ಮೊದಲ ಓವರ್​ನ 3ನೇ ಎಸೆತದಲ್ಲಿ ಡೇವಿಡ್ ವಾರ್ನರ್ (0) ವಿಕೆಟ್ ಪಡೆದು ಸನ್‌ರೈಸರ್ಸ್‌ಗೆ ಆರಂಭಿಕ ಆಘಾತ ನೀಡಿದರು. ಇನ್ನು  ವೃದ್ದಿಮಾನ್ ಸಾಹ 18 ರನ್‌ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಕೇನ್ ವಿಲಿಯಮ್ಸನ್ (18), ಮನೀಷ್ ಪಾಂಡೆ 17 ರನ್ ಮಾಡಿ ಬೇಗನೆ ನಿರ್ಗಮಿಸಿದರು.

ಬಿಗಿ ಬೌಲಿಂಗ್ ದಾಳಿಯಿಂದ ಡೆಲ್ಲಿ ಕ್ಯಾಪಿಟಲ್ಸ್​ ಬೌಲರುಗಳು ಸನ್​ರೈಸರ್ಸ್​ ಹೈದರಾಬಾದ್​ ತಂಡದ ರನ್ ವೇಗವನ್ನು ನಿಯಂತ್ರಿಸಿದರು. 
 ಅಂತಿಮ ಹಂತದಲ್ಲಿ ಅಬ್ದುಲ್ ಸಮದ್ 21 ಎಸೆತಗಳಲ್ಲಿ 28 ರನ್ ಬಾರಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. 

ಇನ್ನೊಂದೆಡೆ ರಶೀದ್ ಖಾನ್ 22 ರನ್​ಗಳ ಕಾಣಿಕೆ ನೀಡುವುದರೊಂದಿಗೆ ಸನ್​ರೈಸರ್ಸ್​ ಹೈದರಾಬಾದ್ ಮೊತ್ತ 9 ವಿಕೆಟ್ ನಷ್ಟಕ್ಕೆ 134ಕ್ಕೆ ಬಂದು ನಿಂತಿತು. ಡೆಲ್ಲಿ ಪರ 4 ಓವರ್​ನಲ್ಲಿ 37 ರನ್​ ನೀಡಿ ಕಗಿಸೋ ರಬಾಡ 3 ಪ್ರಮುಖ ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Good News for RCB Fans: ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ? KSCA-BCCI ಮಾತುಕತೆ
Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!