ಇಂದು ಚೆನ್ನೈ vs ರಾಜಸ್ಥಾನ ಕದನ: ಎರಡೂ ತಂಡಗಳಿಗೆ ಜಯದ ಲಯ ಕಾಯ್ದುಕೊಳ್ಳುವ ಗುರಿ!

By Kannadaprabha NewsFirst Published Apr 19, 2021, 12:01 PM IST
Highlights

ಇಂದು ಚೆನ್ನೈ vs ರಾಜಸ್ಥಾನ ಕದನ| ಕಳೆದ ಪಂದ್ಯದಲ್ಲಿ ಗೆದ್ದಿದ್ದ ಎರಡೂ ತಂಡಗಳಿಗೆ ಜಯದ ಲಯ ಕಾಯ್ದುಕೊಳ್ಳುವ ಗುರಿ

ಮುಂಬೈ(ಏ.19): 14ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡದ ಪಯಣ ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಸೋತಿದ್ದ ತಂಡಗಳು, 2ನೇ ಪಂದ್ಯದಲ್ಲಿ ಗೆದ್ದು ಖಾತೆ ತೆರೆದಿವೆ. ಸೋಮವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿರುವ ಚೆನ್ನೈ ಹಾಗೂ ರಾಜಸ್ಥಾನ, ಗೆಲುವಿನ ಲಯ ಉಳಿಸಿಕೊಳ್ಳುವ ಗುರಿ ಹೊಂದಿವೆ.

ಧೋನಿ ನೇತೃತ್ವದ ಚೆನ್ನೈ, ಕಳೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಸುಲಭ ಗೆಲುವು ಸಾಧಿಸಿದರೆ, ಸ್ಯಾಮ್ಸನ್‌ ನೇತೃತ್ವದ ರಾಜಸ್ಥಾನ, ಡೆಲ್ಲಿ ವಿರುದ್ಧ ಕೊನೆ ಓವರಲ್ಲಿ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಚೆನ್ನೈ ಬೌಲರ್‌ಗಳು ಹಾಗೂ ರಾಜಸ್ಥಾನ ಬ್ಯಾಟ್ಸ್‌ಮನ್‌ಗಳ ನಡುವೆ ಭರ್ಜರಿ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.

ಚೆನ್ನೈನ ದೀಪಕ್‌ ಚಹರ್‌, ಶಾರ್ದೂಲ್‌ ಠಾಕೂರ್‌, ಸ್ಯಾಮ್‌ ಕರ್ರನ್‌, ರವೀಂದ್ರ ಜಡೇಜಾ, ಡ್ವೇನ್‌ ಬ್ರಾವೋ, ಮೋಯಿನ್‌ ಅಲಿ, ರಾಜಸ್ಥಾನದ ಸಂಜು ಸ್ಯಾಮ್ಸನ್‌, ಜೋಸ್‌ ಬಟ್ಲರ್‌, ಡೇವಿಡ್‌ ಮಿಲ್ಲರ್‌, ಕ್ರಿಸ್‌ ಮೋರಿಸ್‌ರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಬೇಕಿದೆ.

ರಾಯಲ್ಸ್‌ನಷ್ಟು ಅಪಾಯಕಾರಿಯಾಗಿ ತೋರದಿದ್ದರೂ, ಚೆನ್ನೈನ ಬ್ಯಾಟಿಂಗ್‌ ಪಡೆ ಸಹ ಬಲಿಷ್ಠವಾಗಿದೆ. ಡುಪ್ಲೆಸಿ, ರೈನಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಒಟ್ಟು ಮುಖಾಮುಖಿ: 23

ಚೆನ್ನೈ: 14

ರಾಜಸ್ಥಾನ: 09

ಸಂಭವನೀಯ ಆಟಗಾರರ ಪಟ್ಟಿ

* ಚೆನ್ನೈ: ಫಾಫ್‌ ಡು ಪ್ಲೆಸಿ, ಋುತುರಾಜ್‌/ರಾಬಿನ್‌, ಮೋಯಿನ್‌ ಅಲಿ, ಸುರೇಶ್‌ ರೈನಾ, ಅಂಬಟಿ ರಾಯುಡು, ಸ್ಯಾಮ್‌ ಕರ್ರನ್‌, ಎಂ.ಎಸ್‌.ಧೋನಿ(ನಾಯಕ), ರವೀಂದ್ರ ಜಡೇಜಾ, ಡ್ವೇನ್‌ ಬ್ರಾವೋ, ಶಾರ್ದೂಲ್‌ ಠಾಕೂರ್‌, ದೀಪಕ್‌ ಚಹರ್‌.

* ರಾಜಸ್ಥಾನ: ಜೋಸ್‌ ಬಟ್ಲರ್‌, ವೋಹ್ರಾ/ಜೈಸ್ವಾಲ್‌, ಸಂಜು ಸ್ಯಾಮ್ಸನ್‌(ನಾಯಕ), ದುಬೆ/ಶ್ರೇಯಸ್‌ , ಡೇವಿಡ್‌ ಮಿಲ್ಲರ್‌, ರಿಯಾನ್‌ ಪರಾಗ್‌, ರಾಹುಲ್‌ ತೆವಾಟಿಯಾ, ಕ್ರಿಸ್‌ ಮೋರಿಸ್‌, ಉನಾದ್ಕತ್‌, ಚೇತನ್‌ ಸಕಾರಿಯಾ, ಮುಸ್ತಾಫಿಜುರ್‌.

ಸ್ಥಳ: ಮುಂಬೈ, ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍

ಪ್ರಾಬಲ್ಯ

ಲಯ ಕಂಡುಕೊಂಡಿರುವ ಡು ಪ್ಲೆಸಿ

ಮೋಯಿನ್‌ ಅಲಿ ಆಲ್ರೌಂಡ್‌ ಆಟ

ದೀಪಕ್‌ ಚಹರ್‌ ಉತ್ತಮ ಬೌಲಿಂಗ್‌

ಉತ್ತಮ ಲಯದಲ್ಲಿ ಡೇವಿಡ್‌ ಮಿಲ್ಲರ್‌

ಕ್ರಿಸ್‌ ಮೋರಿಸ್‌ ಆಲ್ರೌಂಡ್‌ ಆಟದ ಬಲ

ಭರವಸೆ ಮೂಡಿಸಿರುವ ಉನಾದ್ಕತ್‌, ಚೇತನ್‌

ದೌರ್ಬಲ್ಯ

ಲಯ ಕಳೆದುಕೊಂಡಿರುವ ಋುತುರಾಜ್‌

ಡೆತ್‌ ಓವ​ರ್‍ಸ್ನಲ್ಲಿ ಬ್ರಾವೋ ದುಬಾರಿ

ಕಾಡಲಿದೆ ಲೆಗ್‌ ಸ್ಪಿನ್ನರ್‌ ಕೊರತೆ

ವೋಹ್ರಾ ಕಳಪೆ ಬ್ಯಾಟಿಂಗ್‌ ಪ್ರದರ್ಶನ

ತಂಡಕ್ಕೆ ಕಾಡುತ್ತಿದೆ ಅನುಭವಿ ಸ್ಪಿನ್ನರ್‌ ಕೊರತೆ

ಸ್ಥಿರ ಪ್ರದರ್ಶನ ತೋರದ ಸ್ಯಾಮ್ಸನ್‌

ಪಿಚ್‌ ರಿಪೋರ್ಟ್‌

ವಾಂಖೇಡೆ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿ ಎನಿಸಿದ್ದು, ಇಲ್ಲಿ ದೊಡ್ಡ ಮೊತ್ತಗಳು ದಾಖಲಾಗಿವೆ. ಸಂಜೆ ಬಳಿಕ ಇಬ್ಬನಿ ಬೀಳುವ ಕಾರಣ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡುವುದು ಸಹಜ. ಹೀಗಾಗಿ ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

ಐಪಿಎಲ್ ಪಂದ್ಯ, ಫಲಿತಾಂಶ, ಸುದ್ದಿ, ಪಾಯಿಂಟ್ಸ್ ಟೇಬಲ್ಲಿಗೆ ಇಲ್ಲಿ ಕ್ಲಿಕ್ ಮಾಡಿ.

click me!