ಜೋಸ್‌ ಹೇಜಲ್‌ವುಡ್‌ ಬದಲಿಗೆ ಸಿಎಸ್‌ಕೆಗೆ ಬೌಲ​ರ್ಸ್‌ ಸಿಗ್ತಿಲ್ಲ!

Suvarna News   | Asianet News
Published : Apr 06, 2021, 04:25 PM IST
ಜೋಸ್‌ ಹೇಜಲ್‌ವುಡ್‌ ಬದಲಿಗೆ ಸಿಎಸ್‌ಕೆಗೆ ಬೌಲ​ರ್ಸ್‌ ಸಿಗ್ತಿಲ್ಲ!

ಸಾರಾಂಶ

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಚೆನ್ನೈ ಇಂಡಿಯನ್ಸ್‌ ವೇಗಿ ಜೋಸ್‌ ಹೇಜಲ್‌ವುಡ್‌ ಅವರ ಬದಲಿಗೆ ಹೊಸ ವಿದೇಶಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಧೋನಿ ಪಡೆ ಪರದಾಡುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮುಂಬೈ(ಏ.06): ವೈಯಕ್ತಿಕ ಕಾರಣ ನೀಡಿ ಈ ವರ್ಷದ ಐಪಿಎಲ್‌ನಿಂದ ಹಿಂದೆ ಸರಿದ ಆಸ್ಪ್ರೇಲಿಯಾದ ವೇಗದ ಬೌಲರ್‌ ಜೋಸ್ ಹೇಜಲ್‌ವುಡ್‌ ಬದಲಿಗೆ ಬೇರೆ ಬೌಲರ್‌ ಸೇರ್ಪಡೆಗೊಳಿಸಿಕೊಳ್ಳಲು ಚೆನ್ನೈ ಸೂಪರ್‌ ಕಿಂಗ್ಸ್‌ ಪರದಾಡುತ್ತಿದೆ. 

ಕೋವಿಡ್‌ ಭೀತಿಯಿಂದ ಮುಂಬೈನಲ್ಲಿ ಆಡಲು ವಿದೇಶಿ ವೇಗಿಗಳು ಹಿಂದೇಟು ಹಾಕುತ್ತಿದ್ದಾರೆ. ಧೋನಿ ನೇತೃತ್ವದ ತಂಡ ತನ್ನ ಮೊದಲ 5 ಪಂದ್ಯಗಳನ್ನು ಮುಂಬೈನಲ್ಲಿ ಆಡಲಿದೆ. ಚೆನ್ನೈ ತಂಡದ ಪ್ರಸ್ತಾಪವನ್ನು ಆಸ್ಪ್ರೇಲಿಯಾದ ವೇಗಿ ಬಿಲ್ಲಿ ಸ್ಟ್ಯಾನ್‌ಲೇಕ್‌, ಇಂಗ್ಲೆಂಡ್‌ ವೇಗಿ ರೀಸ್‌ ಟಾಪ್ಲೆ ಸೇರಿ ಇನ್ನೂ ಕೆಲ ವಿದೇಶಿ ಬೌಲರ್‌ಗಳು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಸದ್ಯಕ್ಕೆ ಬದಲಿ ಆಟಗಾರನ ಹುಡುಕಾಟವನ್ನು ನಿಲ್ಲಿಸಲು ತಂಡ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

IPL 2021: ಸಿಎಸ್‌ಕೆ ತಂಡಕ್ಕೆ ಆಘಾತ, ಕೊನೇ ಕ್ಷಣದಲ್ಲಿ ಧೋನಿ ಟೀಂ ತೊರೆದ ಸ್ಟಾರ್ ವೇಗಿ..!

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಏಪ್ರಿಲ್ 09ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕಾದಾಡಲಿವೆ. ಇನ್ನು ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಏಪ್ರಿಲ್‌ 10ರಂದು ಡೆಲ್ಲಿ ಕ್ಯಾಪಿಟಲ್‌ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!