
ದುಬೈ(ಅ.08): 14ನೇ ಆವೃತ್ತಿಯ ಐಪಿಎಲ್ (IPL 2021) ಲೀಗ್ ಹಂತದ ಕೊನೆಯ 2 ಪಂದ್ಯಗಳು ಶುಕ್ರವಾರ ಏಕಕಾಲಕ್ಕೆ ನಡೆಯಲಿದೆ. ಐಪಿಎಲ್‌ನಲ್ಲಿ ಈ ರೀತಿ ಒಟ್ಟಿಗೆ 2 ಪಂದ್ಯಗಳು ನಡೆಯುತ್ತಿರುವುದು ಇದೇ ಮೊದಲು.
ಪ್ಲೇ-ಆಫ್ ಲೆಕ್ಕಾಚಾರವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ತಂಡ ಲಾಭ ಪಡೆಯಬಾರದು ಎನ್ನುವ ಉದ್ದೇಶದಿಂದ ಒಟ್ಟಿಗೆ 2 ಪಂದ್ಯ ನಡೆಸುತ್ತಿರುವುದಾಗಿ ಬಿಸಿಸಿಐ (BCCI) ಹೇಳಿಕೊಂಡಿದೆ. ಇದರ ಜೊತೆಗೆ ಮುಂದಿನ ಆವೃತ್ತಿಯಲ್ಲಿ 2 ಹೊಸ ತಂಡಗಳು ಸೇರ್ಪಡೆಗೊಳ್ಳಲಿರುವ ಕಾರಣ ಪಂದ್ಯಗಳ ಸಂಖ್ಯೆ ಹೆಚ್ಚಾಗಲಿದೆ. ಇರುವ ಸಮಯದಲ್ಲೇ ಹೆಚ್ಚು ಪಂದ್ಯಗಳನ್ನು ನಡೆಸಬೇಕು ಎಂದರೆ ಬಹುತೇಕ ದಿನಗಳಂದು 2 ಪಂದ್ಯ ನಡೆಸಬೇಕಾಗುತ್ತದೆ.
ಪಂದ್ಯ ಸೋತರೂ ಪ್ರೀತಿ ಗೆದ್ದ ಸಿಎಸ್‌ಕೆ ಬೌಲರ್.. ಮೈದಾನದ ಹೊರಗೊಂದು ಕ್ಯೂಟ್ ಲವ್ ಸ್ಟೋರಿ!
ವಾರದ ದಿನಗಳಲ್ಲಿ ಮಧ್ಯಾಹ್ನ ಪಂದ್ಯ ನಡೆಸಿದರೆ ವೀಕ್ಷಕರ ಸಂಖ್ಯೆ ಕಡಿಮೆ. ಹೀಗಾಗಿ, ಬಿಸಿಸಿಐ ಹಾಗೂ ಸ್ಟಾರ್ ಸ್ಪೋರ್ಟ್ಸ್ (Star Sports) ವಾಹಿನಿ ಸಂಜೆ ವೇಳೆ ಒಟ್ಟಿಗೆ 2 ಪಂದ್ಯ ನಡೆಸಿದರೆ ಏನಾಗಲಿದೆ ಎನ್ನುವುದನ್ನು ಅರಿಯಲು ಈ ಪ್ರಯೋಗ ನಡೆಸುತ್ತಿವೆ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ತಂಡಗಳಿಗೆ ಒಂದು ದಿನ ವಿಶ್ರಾಂತಿ ಸಿಗಲಿದೆ. ಹೀಗಾಗಿ ಒಂದೇ ದಿನ ಏಕಕಾಲದಲ್ಲಿ ಎರಡು ಪಂದ್ಯಗಳು ಆಯೋಜನೆಗೊಂಡಿವೆ.
IPL 2021 ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ..! ಏಕಕಾಲದಲ್ಲಿ ನಡೆಯಲಿವೆ 2 ಪಂದ್ಯ.!
ಇಂದು ಸಂಜೆ 7.30ಕ್ಕೆ ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಮುಖಾಮುಖಿಯಾಗಲಿವೆ. ಸನ್‌ರೈಸರ್ಸ್ ಹೈದರಾಬಾದ್ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದ್ದರೇ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶಿಸಲು ಪವಾಡವೇ ನಡೆಯಬೇಕಿದೆ. ಇದೇ ವೇಳೆಯಲ್ಲಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಗಳು ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಸೆಣಸಾಟ ನಡೆಸಲಿವೆ. ಈಗಾಗಲೇ ಈ ಎರಡು ತಂಡಗಳು ಪ್ಲೇ ಆಫ್ ಪ್ರವೇಶಿಸಿದ್ದು, ಅಗ್ರ 2ರಲ್ಲಿ ಆರ್‌ಸಿಬಿ ಸ್ಥಾನ ಪಡೆಯಬೇಕಾದರೆ ಡೆಲ್ಲಿ ಎದುರು ಭಾರೀ ಅಂತರದ ಗೆಲುವು ಸಾಧಿಸಬೇಕು.
ಯಾವ್ಯಾವ ಚಾನೆಲ್‌ನಲ್ಲಿ ಪ್ರಸಾರ:
SRH vs MI: ಸ್ಟಾರ್ ಸ್ಪೋರ್ಟ್ಸ್ 2 , ಸ್ಟಾರ್ ಸ್ಪೋರ್ಟ್ಸ್ 3, ಸ್ಟಾರ್ ಗೋಲ್ಡ್ 2, ಸ್ಟಾರ್ ಸುವರ್ಣ ಪ್ಲಸ್ ಹಾಗೂ ಮೊಬೈಲ್‌ನಲ್ಲಿ ಡಿಸ್ನಿ ಹಾಟ್‌ಸ್ಟಾರ್
RCB vs DC: ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಹಾಗೂ ಮೊಬೈಲ್‌ನಲ್ಲಿ ಡಿಸ್ನಿ ಹಾಟ್‌ಸ್ಟಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.