IPL 2021; ದೊಡ್ಡ ಜಯ ದಕ್ಕಿಸಿಕೊಂಡು ಮೇಲೆರಿದ KKR, ಇನ್ನೊಂದು  ಪಂದ್ಯವಿದೆ ಮುಂಬೈಗೆ!

Published : Oct 07, 2021, 11:13 PM ISTUpdated : Oct 07, 2021, 11:26 PM IST
IPL 2021;  ದೊಡ್ಡ ಜಯ ದಕ್ಕಿಸಿಕೊಂಡು  ಮೇಲೆರಿದ KKR, ಇನ್ನೊಂದು  ಪಂದ್ಯವಿದೆ ಮುಂಬೈಗೆ!

ಸಾರಾಂಶ

* ಪಾಯಿಂಟ್ ಟೆನಲ್ ನಲ್ಲಿ ಮೇಲಕ್ಕೇರಿದ ಕೆಕೆಆರ್ * ಮುಂಬೈ ಇಂಡಿಯನ್ಸ್ ಗೆ ದೊಡ್ಡ ಸವಾಳು * ಉಪಾಂತ್ಯದ ಪಟ್ಟಿ ಬಹುತೇಕ ಫೈನಲ್ * ಎರಡನೇ ಹಂತದಲ್ಲಿ ಕೆಕೆಆರ್ ಅದ್ಭುತ ಪ್ರದರ್ಶನ

ಅಬುದಾಬಿ(ಅ. 07)   ರಾಜಸ್ಥಾನ ರಾಯಲ್ಸ್ ತಂಡದ  ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಜಯ ದಾಖಲಿಸಿಕೊಂಡು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ಐಪಿಎಲ್ ಸೆಕೆಂಡ್ ಹಾಫ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೋಲ್ಕತ್ತಾ ತನಗೆ ಪೈಪೋಟಿ ನೀಡುತ್ತಿರುವ ಮುಂಬೈ ಇಂಡಿಯನ್ಸ್ ಗಿಂತ ರನ್ ರೇಟ್ ನಲ್ಲಿ ಮುಂದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 171  ರನ್ ಗಳ ಬೃಹತ್ ಮೊತ್ತ ಕಲೆಹಾಕಿತ್ತು.  ಇದನ್ನು ಚೇಸ್ ಮಾಡಲು ಇಳಿದ ರಾಜಸ್ಥಾನಕ್ಕೆ ಆಘಾತದ ಮೇಲೆ ಆಘಾತ ನೀಡಿತು. ಅತ್ಯುತ್ತಮ  ಬೌಲಿಂಗ್ ಸಂಘಟನೆ ಮಾಡಿದ ಕೆಕೆಆರ್ ರಾಜಸ್ಥಾನವನ್ನು ಕೇವಲ 85 ರನ್ ಗೆ ಅಲೌಟ್ ಮಾಡಿ ಭರ್ಜರಿ ಜಯ ಸಂಪಾದನೆ ಮಾಡಿಕೊಂಡಿತು. ಶಿವಂ ಮಾವಿ ಬೌಲಿಂಗ್ ಗೆ ರಾಜಸ್ಥಾನದ ಬಳಿ ಉತ್ತರವೇ ಇರಲಿಲ್ಲ.

ಪಂದ್ಯ ಸೋತರೂ ಪ್ರೀತಿ ಗೆದ್ದಿತು ಎಂದ ದೀಪಕ್ ಚಹಾರ್.. ಕ್ಯೂಟ್ ಪ್ರಪೋಸಲ್

ಡೆಲ್ಲಿ, ಸಿಎಸ್‌ಕೆ ಮತ್ತು ಆರ್‌ ಸಿಬಿ ತಂಡ ಈಗಾಗಲೇ ಉಪಾಂತ್ಯಕ್ಕೆ ಪ್ರವೇಶ ಪಡೆದುಕೊಂಡಿವೆ. ಈಗ ಇನ್ನೊಂದು ಪಂದ್ಯ ಬಾಕಿ ಉಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಮತ್ತು ಗೆದ್ದು ಬೀಗಿರುವ ಕೆಕೆಆರ್ ಉಪಾಂತ್ಯಕ್ಕೆ ಪ್ರವೇಶ ಮಾಡಲು ಪೈಪೋಟಿ ನಡೆಸಬೇಕಾಗಿದೆ. 

ಮುಂಬೈನ ಇಂಡಿಯನ್ಸ್ ಶುಕ್ರವಾರ ಆರ್ ಸಿಬಿಯನ್ನು ಮಣಿಸಿರುವ ಆದರೆ ಪಂದ್ಯಾವಳಿಯಿಂದ ಹೊರಗೆ ಬಿದ್ದಿರುವ ಸನ್ ರೈಸರ್ಸ್ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದರೆ ಮತ್ತೆ ಲೆಕ್ಕಾಚಾರ ಹಾಕಬಹುದು.

ರಾಜಸ್ಥಾನ ರಾಯಲ್ಸ್ ಪರ ಯಾವ ದಾಂಢಿಗರು ಬ್ಯಾಟ್ ಬೀಸಲೇ ಇಲ್ಲ. ಹದಿನಾರು ಓವರ್ ಗಳಲ್ಲಿಯೇ ತಂಡ ಆಲೌಟ್ ಆಯಿತು. ಮೂರು ಓವರ್ ನಲ್ಲಿ ನಾಲ್ಕು ವಿಕೆಟ್ ಕಿತ್ತ ಶಿವಂ ಮಾವಿ ಕೋಲ್ಕತ್ತಾಕ್ಕೆ ಸುಲಭವಾಗಿ ಮತ್ತೊಂದು ಗೆಲುವು ದಕ್ಕಿಸಿಕೊಟ್ಟರು .

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಎದುರು ಹೀನಾಯ ಸೋಲಿಗೆ ಅಚ್ಚರಿ ಕಾರಣ ಬಿಚ್ಚಿಟ್ಟ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಮಾರ್ಕ್‌ರಮ್!
IPL 2026: ಮಿನಿ ಹರಾಜಿಗೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ 'ವೈಲ್ಡ್ ಕಾರ್ಡ್' ಎಂಟ್ರಿ!