ಮಾಲ್ಡೀವ್ಸ್‌ ರೆಸಾರ್ಟ್‌ನಲ್ಲಿ ವಾರ್ನರ್‌-ಸ್ಲೇಟರ್‌ ಫೈಟ್‌?

Published : May 10, 2021, 07:49 AM IST
ಮಾಲ್ಡೀವ್ಸ್‌ ರೆಸಾರ್ಟ್‌ನಲ್ಲಿ ವಾರ್ನರ್‌-ಸ್ಲೇಟರ್‌ ಫೈಟ್‌?

ಸಾರಾಂಶ

* ಕೋವಿಡ್‌ ಕಾರಣದಿಂದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆ * ಮಾಲ್ಡೀವ್ಸ್‌ನಿಂದ ಆಸ್ಟ್ರೇಲಿಯಾ ವಿಮಾನ ವೇರಲು ಸಜ್ಜಾಗಿರುವ ಕಾಂಗರೂ ನಾಡಿನ ಆಟಗಾರರರು ಹಾಗೂ ಸಿಬ್ಬಂದಿ * ಆಸೀಸ್‌ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್ ಹಾಗೂ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌ ನಡುವೆ ಫೈಟ್‌ ನಡೆದಿದೆ ಎನ್ನುವ ಆರೋಪ

ಮಾಲೆ(ಮೇ.10): ಆಸ್ಪ್ರೇಲಿಯಾದ ತಾರಾ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಹಾಗೂ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಮೈಕಲ್‌ ಸ್ಲೇಟರ್‌ ಇಲ್ಲಿನ ರೆಸಾರ್ಟ್‌ನ ಬಾರ್‌ನಲ್ಲಿ ಕುಡಿದ ಮತ್ತಿನಲ್ಲಿ ಹೊಡೆದಾಡಿರುವುದಾಗಿ ಆಸ್ಪ್ರೇಲಿಯನ್‌ ಮಾಧ್ಯಮವೊಂದು ಸುದ್ದಿ ಮಾಡಿದೆ. ಆದರೆ ಈ ಸುದ್ದಿಯನ್ನು ಇಬ್ಬರೂ ಕ್ರಿಕೆಟಿಗರು ಅಲ್ಲಗಳೆದಿದ್ದಾರೆ.

ಡೇವಿಡ್‌ ವಾರ್ನರ್ ಹಾಗೂ ನಾನು ಉತ್ತಮ ಸ್ನೇಹಿತರು. ನಾವಿಬ್ಬರು ಗಲಾಟೆ ಮಾಡುವ ಪ್ರಶ್ನೆಯೇ ಇಲ್ಲ. ಇದೊಂದು ರೀತಿಯ ಆಧಾರ ರಹಿತ ಗಾಳಿಸುದ್ದಿಯಷ್ಟೇ ಎಂದು ಮಿಲ್ ಬಜ್‌ ಪತ್ರಿಕೆಗೆ ಆಸ್ಟ್ರೇಲಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಸ್ಲೇಟರ್ ಸ್ಪಷ್ಟಪಡಿಸಿದ್ದಾರೆ. 

ಇನ್ನು ಡೇವಿಡ್ ವಾರ್ನರ್ ಕೂಡಾ ಇದೇ ಮಾತನ್ನು ಪುನರುಚ್ಚರಿಸಿದ್ದು, ಇವೆಲ್ಲಾ ಗಾಳಿಸುದ್ದಿಗಳು ಎಲ್ಲಿಂದ ಶುರುವಾಗುತ್ತದೆಯೋ ಗೊತ್ತಿಲ್ಲ. ನೀವು ಅಲ್ಲಿರದೇ ಅಥವಾ ಸೂಕ್ತ ಸಾಕ್ಷಿಯಿಲ್ಲದೇ ಏನೇನನ್ನೋ ಬರೆಯಬಾರದು. ಅಂತಹದ್ದೇನು ಘಟನೆ ನಡೆದಿಲ್ಲ ಎಂದು ಸನ್‌ರೈಸರ್ಸ್‌ ಹೈದರಾಬಾದ್ ಮಾಜಿ ನಾಯಕ ವಾರ್ನರ್ ತಿಳಿಸಿದ್ದಾರೆ.

ಇನ್ನುಳಿದ ಐಪಿಎಲ್‌ ಪಂದ್ಯಗಳಿಗೆ ಆತಿಥ್ಯ ನೀಡಲು ಒಲವು ತೋರಿದ ಶ್ರೀಲಂಕಾ

ಐಪಿಎಲ್‌ ಮುಂದೂಡಿಕೆಯಾದ ಕಾರಣ, ಆಸ್ಪ್ರೇಲಿಯಾದ ಆಟಗಾರರು, ಕೋಚ್‌ಗಳು, ವೀಕ್ಷಕ ವಿವರಣೆಗಾರರು ಸೇರಿ ಒಟ್ಟು 39 ಮಂದಿ ಮಾಲ್ಡೀವ್ಸ್‌ಗೆ ತೆರಳಿ, ಅಲ್ಲಿಂದ ಆಸ್ಪ್ರೇಲಿಯಾಗೆ ಪ್ರಯಾಣಿಸಲು ಕಾಯುತ್ತಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಚ್‌ನಲ್ಲಿ ಕೂತು ಬೇರೆಯವರ ಆಟ ನೋಡೋದು ಸುಲಭ ಅಲ್ಲ -ಒಂದೂವರೆ ವರ್ಷದ ತಪ್ಪಸ್ಸಿಗೆ ಪಡಿಕ್ಕಲ್ ಭಾವುಕ
ಮಹಾತ್ಮನಿಗೆ ಐಸಿಸಿ ವಿಶೇಷ ಗೌರವ.. 2027ರ ಏಕದಿನ ವಿಶ್ವಕಪ್‌ಗೆ ದಿನಾಂಕ ನಿಗದಿ..!