IPL 2021: ಹೈದರಾಬಾದ್ ವಿರುದ್ಧ ಗೆಲುವು, KKR ಪ್ಲೇ ಆಫ್ ಕನಸಿಗೆ ಮತ್ತಷ್ಟು ಜೀವ!

By Suvarna NewsFirst Published Oct 3, 2021, 11:03 PM IST
Highlights
  • ಹೈದರಾಬಾದ್ ವಿರುದ್ಧ ಕೆಕೆಆರ್ ತಂಡಕ್ಕೆ 6 ವಿಕೆಟ್ ಗೆಲುವು
  • ಗಿಲ್ ಹಾಫ್ ಸೆಂಚುರಿ, 25 ರನ್ ಕಾಣಿಕೆ ನೀಡಿದ ರಾಣಾ 
  • ಅಂತಿಮ ಹಂತದಲ್ಲಿ ತಿಣುಕಾಡಿದ ಕೋಲ್ಕತಾ ನೈಟ್ ರೈಡರ್ಸ್

ದುಬೈ(ಅ.03):  ಸನ್‌ರೈಸರ್ಸ್ ಹೈದರಾಬಾದ್(SRH) ವಿರುದ್ಧ  ಶುಭಮನ್ ಗಿಲ್ ಹಾಫ್ ಸೆಂಚುರಿ, ನಿತೀಶ್ ರಾಣಾ ಹಾಗೂ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್)KKR) 6 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ಪ್ಲೇ ಆಫ್(playoffs) ಕನಸಿಗೆ ಮತ್ತಷ್ಟು ಜೀವ ನೀಡಿದೆ. 

IPL 2021: ಪಂಜಾಬ್‌ ಮಣಿಸಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ನಮ್ಮ ಆರ್‌ಸಿಬಿ

ಕೋಲ್ಕತಾ ನೈಟ್ ರೈಡರ್ಸ್(Kolkata Knight Riders) ತಂಡಕ್ಕೆ ಅತ್ಯಂತ ಮುಖ್ಯ ಪಂದ್ಯ ಇದಾಗಿತ್ತು. ಈ ಮಹತ್ವದ ಪಂದ್ಯದಲ್ಲಿ ಕೆಕೆಆರ್ ಬೌಲರ್‌ಗಳ ಅದ್ಬುತ ಪ್ರದರ್ಶನದಿಂದ 116 ರನ್ ಸುಲಭ ಟಾರ್ಗೆಟ್ ಪಡೆಯಿತು. ಯಾವುದೇ ಆತಂಕವಿಲ್ಲದೆ ಕಣಕ್ಕಿಳಿದ ಕೆಕೆಆರ್ ತಂಡಕ್ಕೆ ಆರಂಭದಲ್ಲಿ ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ಶಾಕ್ ನೀಡಿತು. ಉತ್ತಮ ಫಾರ್ಮ್‌ನಲ್ಲಿದ್ದ ವೆಂಕಟೇಶ್ ಅಯ್ಯರ್ ಕೇವಲ 8 ರನ್ ಸಿಡಿಸಿ ಔಟಾದರು.

ಅಯ್ಯರ್ ಬೆನ್ನಲ್ಲೇ ರಾಹುಲ್ ತ್ರಿಪಾಠಿ ವಿಕೆಟ್ ಪತನಗೊಂಡಿತು. 38 ರನ್‌ಗೆ ಕೋಲ್ಕತಾ 2 ವಿಕೆಟ್ ಕಳೆದುಕೊಂಡಿತು. ಆದರೆ ಶುಭಮನ್ ಗಿಲ್ ಹೋರಾಟದಿಂದ ಕೆಕೆಆರ್ ತಂಡ ಯಾವುದೇ ಆತಂಕಕ್ಕೆ ಒಳಗಾಗಲಿಲ್ಲ. ನಿತೀಶ್ ರಾಣಾ ಜೊತೆ ಸೇರಿದ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

IPL 2021:ರುತುರಾಜ್ ಸೆಂಚುರಿ, ಚೆನ್ನೈ ಹೋರಾಟ ವ್ಯರ್ಥ; ಧೋನಿ ಸೈನ್ಯ ಮಣಿಸಿದ ರಾಜಸ್ಥಾನ!

ದಿಟ್ಟ ಹೋರಾಟ ನೀಡಿದ ಗಿಲ್(Shubman Gill) ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಶುಭಮನ್‌ ಗಿಲ್ IPL 2021ರಲ್ಲಿ ಮೊದಲ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಇತ್ತ ನಿತೀಶ್ ರಾಣಾ ನಿಧಾನಗತಿಯ ಬ್ಯಾಟಿಂಗ್ ಕೆಕೆಆರ್ ಅಭಿಮಾನಿಗಳಲ್ಲಿ ಕೊಂಚ ಆತಂಕಕ್ಕೆ ಕಾರಣವಾಯಿತು. 

ಅಂತಿಮ 24 ಎಸೆತದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಗೆಲುವಿಗೆ 24 ರನ್ ಅವಶ್ಯಕತೆ ಇತ್ತು. ಆದರೆ ಸಿದ್ದಾರ್ಥ್ ಕೌಲ್ ಕೆಕೆಆರ್ ತಂಡಕ್ಕೆ ಶಾಕ್ ನೀಡಿದರು. 57 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದ ಗಿಲ್ ಕೌಲ್ ಎಸೆತದಲ್ಲಿ ಹೋಲ್ಡರ್‌ಗೆ ಕ್ಯಾಚ್ ನೀಡಿ ಹೊರನಡೆದರು. ನಿರಾಯಾಸದ ಗೆಲುವಿನ ಕನವರಿಕೆಯಲ್ಲಿದ್ದ ಕೆಕೆಆರ್‌ಗೆ ತಂಡದಲ್ಲಿ ಆತಂಕ ಕಾಣತೊಡಗಿತು.

IPL 2021 ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ..! ಏಕಕಾಲದಲ್ಲಿ ನಡೆಯಲಿವೆ 2 ಪಂದ್ಯ.!

ದಿನೇಶ್ ಕಾರ್ತಿಕ್ ಹಾಗೂ ನಿತೀಶ್ ರಾಣಾ ಜೊತೆಯಾಟ ಕೆಕೆಆರ್ ತಂಡಕ್ಕೆ ಕೊಂಚ ಸಮಾಧಾನ ತಂದಿತ್ತು. ಅಷ್ಟರಲ್ಲೇ ರಾಣಾ 25 ರನ್ ಸಿಡಿಸಿ ಔಟಾದರು. ಸುಲಭ ಗೆಲುವು ಚೇಸ್ ಮಾಡಲು ಕೋಲ್ಕತಾ ನೈಟ್ ರೈಡರ್ಸ್ ಅಂತಿಮ ಹಂತದಲ್ಲಿ ಗಲಿಬಿಲಿಗೊಂಡಿತು. ಇತ್ತ ದಿನೇಶ್ ಕಾರ್ತಿಕ್ ಹೋರಾಟ ಮುಂದುವರಿಸಿದರು. ಬೌಂಡರಿ ಸಿಡಿಸಿ ಆತಂಕ ದೂರ ಮಾಡಿದರು.

ಅಂತಿಮ 6 ಎಸೆತದಲ್ಲಿ ಕೆಕೆಆರ್ ಗೆಲುವಿಗೆ 3 ರನ್ ಬೇಕಿತ್ತು.  ನಾಯಕ ಇಯಾನ್ ಮಾರ್ಗನ್ ಜೊತೆ ಸೇರಿದ ದಿನೇಶ್ ಕಾರ್ತಿಕ್ ಕೆಕೆಆರ್ ತಂಡಕ್ಕೆ ಗೆಲುವು ತಂದುಕೊಟ್ಟರು. ಕೋಲ್ಕತಾ ನೈಟ್ ರೈಡರ್ಸ್ 19.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕಾರ್ತಿಕ್ ಅಜೇಯ 18 ರನ್ ಸಿಡಿಸಿದರು.  6 ವಿಕೆಟ್ ಗೆಲುವು ದಾಖಲಿಸಿದ ಕೆಕೆಆರ್ ತಂಡದ ಪ್ಲೇ ಆಫ್ ಕನಸು ಜೀವಂತವಾಗಿದೆ. 

ಪ್ಲೇ ಆಫ್ ಹೋರಾಟ:
IPL 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ತಂಡವಾಗಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 18 ಅಂಕದ ಮೂಲಕ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 16 ಅಂಕ ಪಡೆದು ಪ್ಲೇ ಆಫ್ ಸ್ಥಾನ ಖಚಿತಪಡಿಸಿದೆ. ಈ ಮೂರು ತಂಡಗಳಿಗೆ ಇನ್ನು 2 ಪಂದ್ಯಗಳು ಬಾಕಿ ಇವೆ. ಸದ್ಯ ಇರುವ ಒಂದು ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದೆ. ಇದೀಗ ಕೋಲ್ಕತಾ ನೈಟ್ ರೈಡರ್ಸ್ ಈ ಗೆಲುವಿನೊಂದಿಗೆ 12 ಅಂಕ ಸಂಪಾದಿಸಿ ಪ್ಲೇ ಆಫ್ ನತ್ತ ಹೆಜ್ಜೆ ಹಾಕುತ್ತಿದೆ. ಅಂತಿಮ ಪಂದ್ಯದಲ್ಲಿ ಕೆಕೆಆರ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ದ ಹೋರಾಟ ನಡೆಸಲಿದೆ. ಈ ಪಂದ್ಯದಲ್ಲಿ ಕೆಕೆಆರ್ ಗೆಲುವು ಸಾಧಿಸಿದರೆ 4ನೇ ತಂಡವಾಗಿ ಪ್ಲೇ ಆಫ್‌ಗೆ ಎಂಟ್ರಿಕೊಡಲಿದೆ.

click me!