2020ರ ಆವೃತ್ತಿಯ ಆಟಗಾರರ ಹರಾಜಿಗೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡವು 11 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ತಂಡದಲ್ಲಿ ಶ್ರೇಯಸ್ ಗೋಪಾಲ್ ಸ್ಥಾನ ಉಳಿಸಿಕೊಂಡ ಏಕೈಕ ಕನ್ನಡಿಗ ಎನಿಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಬೆಂಗಳೂರು[ನ.15]: ಇಂಡಿಯನ್ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಆ ಬಳಿಕ ಮತ್ತೊಮ್ಮೆ ಕಪ್ ಗೆಲ್ಲುವಲ್ಲಿ ಪದೇ ಪದೇ ಎಡವುತ್ತಿದೆ. ಇದೀಗ 2020ರ ಆವೃತ್ತಿಯಲ್ಲಿ ಬಲಿಷ್ಠ ತಂಡವನ್ನು ಕಟ್ಟುವ ಉದ್ದೇಶದಿಂದ ರಾಜಸ್ಥಾನ ರಾಯಲ್ಸ್ ತಂಡವು 11 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.
IPL 2020; 6 ಸ್ಟಾರ್ ಕ್ರಿಕೆಟಿಗರಿಗೆ ಕೊಕ್ ನೀಡಿದ CSK!
ರಾಜಸ್ಥಾನ ತಂಡವು ದುಬಾರಿ ಆಟಗಾರ ಜಯದೇವ್ ಉನಾದ್ಕತ್ ಅವರನ್ನು ಕೈಬಿಡಲಾಗಿದೆ. ಕಳೆದ ಆವೃತ್ತಿಯಲ್ಲಿ ಸೌರಾಷ್ಟ್ರ ಎಡಗೈ ವೇಗಿಯನ್ನು 11.5 ಕೋಟಿ ನೀಡಿ ರಾಜಸ್ಥಾನ ತಂಡ ಖರೀದಿಸಿತ್ತು. ಆದರೆ ಉನಾದ್ಕತ್ 11 ಪಂದ್ಯಗಳಿಂದ ಕೇವಲ 10 ವಿಕೆಟ್ ಮಾತ್ರ ಪಡೆದಿದ್ದರು. ಇನ್ನುಳಿದಂತೆ ಆಸ್ಟನ್ ಟರ್ನರ್, ಓಶಾನೆ ಥಾಮಸ್, ಲಿಯಾಮ್ ಲಿವಿಂಗ್’ಸ್ಟೋನ್, ಸ್ಟುವರ್ಟ್ ಬಿನ್ನಿ ಸೇರಿದಂತೆ 11 ಆಟಗಾರರಿಗೆ ರಾಜಸ್ಥಾನ ರಾಯಲ್ಸ್ ತಂಡದಿಂದ ಕೊಕ್ ನೀಡಲಾಗಿದೆ.
IPL 2020: ಕನ್ನಡಿಗರ ತಂಡವಾಗಿ ಬದಲಾದ ಕಿಂಗ್ಸ್ ಇಲೆವನ್ ಪಂಜಾಬ್..!
ತಂಡದಲ್ಲಿ ಸ್ಥಾನ ಉಳಿಸಿಕೊಂಡ ಏಕೈಕ ಕನ್ನಡಿಗ ಗೋಪಾಲ್: ರಾಜಸ್ಥಾನ ರಾಯಲ್ಸ್ ತಂಡವು ಈ ಮೊದಲು ಕೆ. ಗೌತಮ್ ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್‌ಗೆ ಬಿಟ್ಟುಕೊಟ್ಟಿತ್ತು. ಇದೀಗ ಸ್ಟುವರ್ಟ್ ಬಿನ್ನಿಯನ್ನು ತಂಡದಿಂದ ಕೈಬಿಡಲಾಗಿದೆ. ಹೀಗಾಗಿ ರಾಜಸ್ಥಾನ ತಂಡದಲ್ಲಿ ಕನ್ನಡಿಗ ಶ್ರೇಯಸ್ ಗೋಪಾಲ್ ಮಾತ್ರ ಸ್ಥಾನ ಉಳಿಸಿಕೊಂಡಂತಾಗಿದೆ.
RR ತಂಡದಿಂದ ಗೇಟ್ ಪಾಸ್ ಪಡೆದ ಆಟಗಾರರಿವರು:
1. ಆರ್ಯಮನ್ ಬಿರ್ಲಾ
2. ಆಸ್ಟನ್ ಟರ್ನರ್
3. ಇಶ್ ಸೋದಿ
4. ಜಯದೇವ್ ಉನಾದ್ಕತ್
5. ಲಿಯಾಮ್ ಲಿವಿಂಗ್’ಸ್ಟೋನ್
6. ಓಶಾನೆ ಥಾಮಸ್
7. ಪ್ರಶಾಂತ್ ಛೋಪ್ರಾ
8. ರಾಹುಲ್ ತ್ರಿಪಾಠಿ
9. ಶುಭಂ ರಂಜನೆ
10. ಸ್ಟುವರ್ಟ್ ಬಿನ್ನಿ
11. ಸುದೇಶನ್ ಮಿದುನ್