ಆಸ್ಟ್ರೇಲಿಯಾಗೆ ಸಾಧ್ಯವಾಗದ್ದು, ಟೀಂ ಇಂಡಿಯಾ ಮಾಡುತ್ತಿದೆ; ಭಾರತ ಪ್ರಶಂಸಿದ ಇನ್ಜಮಾಮ್ !

By Suvarna NewsFirst Published May 20, 2021, 8:38 PM IST
Highlights
  • ಭಾರತವನ್ನು ಪ್ರಶಂಸಿದ ಪಾಕಿಸ್ತಾನ ಮಾಜಿ ನಾಯಕ ಇನ್ಜಮಾಮ್
  • ಆಸ್ಟ್ರೇಲಿಯಾಗೆ ಸಾಧ್ಯವಾಗದೇ ಇರುವುದು ಭಾರತ ಮಾಡುತ್ತಿದೆ
  • ಪ್ರತಿಭೆಗಳಿಗೆ ಪೋತ್ಸಾಹ ನೀಡಿ ಅಂತಾರಾಷ್ಟ್ರೀಯ ಕ್ರಿಕೆಟಿಗನ್ನಾಗಿ ಮಾಡುತ್ತಿದೆ ಭಾರತ

ಲಾಹೋರ್(ಮೇ.20):  ಟೀಂ ಇಂಡಿಯಾ ಇದೀಗ ಒಂದೇ ಸಮಯದಲ್ಲಿ ಎರಡೂ ಟೂರ್ನಿ ಆಡಲು ಸಜ್ಜಾಗಿದೆ. ಒಂದು ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಗೆ ಇಂಗ್ಲೆಂಡ್ ತೆರಳಿದರೆ, ಮತ್ತೊಂದು ತಂಡ ಶ್ರೀಲಂಕಾ ವಿರುದ್ಧದ ನಿಗದಿತ ಓವರ್ ಸರಣಿಗೆ ತೆರಳಲಿದೆ. ಅಂತಾರಾಷ್ಟ್ರೀಯ ತಂಡವೊಂದು ಎರಡು ದೇಶದ ವಿರುದ್ಧ ಆಡತ್ತಿರುವುದು ಇದೇ ಮೊದಲು. ಇದಕ್ಕೆ ಕಾರಣ ಭಾರತದಲ್ಲಿರುವ ಪ್ರತಿಭಾನ್ವಿತ ಕ್ರಿಕೆಟಿಗರು ಹಾಗೂ ಬಿಸಿಸಿಐ. ಇದೀಗ ಟೀಂ ಇಂಡಿಯಾದ ಈ ಸಾಮರ್ಥ್ಯವನ್ನು ಪಾಕಿಸ್ತಾನ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಆಯ್ಕೆ

ಟೀಂ ಇಂಡಿಯಾ ಪ್ರತಿನಿಧಿಸಲು 50ಕ್ಕೂ ಹೆಚ್ಚು ಪ್ರತಿಭಾನ್ವಿತ ಕ್ರಿಕೆಟಿಗರು ಭಾರತದಲ್ಲಿದ್ದಾರೆ. ಎರಡಲ್ಲ, ಟೀಂ ಇಂಡಿಯಾದ 4 ತಂಡಗಳು ಒಂದೇ ಸಮಯದಲ್ಲಿ 4 ದೇಶದ ತಂಡದ ವಿರುದ್ದ ಆಡುವ ಸಾಮರ್ಥ್ಯ ಹೊಂದಿದೆ ಎಂದು ಹಕ್ ಹೇಳಿದ್ದಾರೆ. 2000ನೇ ಇಸವಿಯ ವೇಳೆ ಆಸ್ಟ್ರೇಲಿಯಾ ಬಲಿಷ್ಠ ತಂಡವಾಗಿ ಹೊರಹೊಮ್ಮಿತ್ತು. ಈ ವೇಳೆ ಆಸ್ಟ್ರೇಲಿಯಾ ಪ್ರತಿಭೆಗಳನ್ನು ಹುಡುಕಿ ಪ್ರೋತ್ಸಾಹ ನೀಡುವ ಕೆಲಸ ಆಸೀಸ್ ಮಾಡಿಲ್ಲ. ಆದರೆ ಭಾರತ ಮಾಡುತ್ತಿದೆ ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

ಟೆಸ್ಟ್‌ ವಿಶ್ವಕಪ್‌ ಫೈನಲ್‌ ಡ್ರಾ ಆದರೆ ಕಪ್‌ ಯಾರ ಪಾಲಾಗುತ್ತೆ?...

ಆಸ್ಟ್ರೇಲಿಯಾ ತಂಡ ಉತ್ತುಂಗದಲ್ಲಿದ್ದಾರೆ ಆಸ್ಟ್ರೇಲಿಯಾ ಎ ಹಾಗೂ ಆಸ್ಟ್ರೇಲಿಯಾ ಬಿ ಎಂಬ ಎರಡು ತಂಡದ ಪ್ರಯತ್ನಕ್ಕೆ ಕೈಹಾಕಿದ್ದರು. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗೆ ಒಂದೆಡೆ ಅನುಮತಿ ಸಿಗಲಿಲ್ಲ, ಇತ್ತ ಬ್ಯಾಕ್ ಅಪ್ ಆಟಗಾರರ ಕೊರತೆ ಕೂಡ ಪ್ರಮುಖವಾಗಿ ಕಾಡಿತ್ತು. ಆದರೆ ಭಾರತ ಎಲ್ಲಾ ಸಮಸ್ಯೆಗಳನ್ನ ನಿವಾರಿಸಿ ಈ ಸಾಧನೆ ಮಾಡಿದೆ ಎಂದಿದ್ದಾರೆ. 

click me!