ICC ಟೂರ್ನಿಗೆ ಅಪ್‌ಸ್ಟಾಕ್ಸ್ ಪಾಲುದಾರಿಕೆ; ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ ಪಾರ್ಟ್ನರ್‌ಶಿಪ್ ಆರಂಭ!

By Suvarna NewsFirst Published Jun 17, 2021, 2:42 PM IST
Highlights
  • ಅಪ್‍ಸ್ಟಾಕ್ಸ್‍ನ ಅಧಿಕೃತ ಪಾಲುದಾರಿಕೆ ಅನಾವರಣಗೊಳಿಸಿದ ICC
  • ಟೆಸ್ಟ್ ಚಾಂಪಿಯನ್‌‌ಶಿಪ್ ಫೈನಲ್‌ನಿಂದ ಪಾಲುದಾರಿಕೆ ಆರಂಭ
  • 2023ರ ಅಂತ್ಯದವರೆಗೆ ಅಪ್‌ಸ್ಟಾಕ್ಸ್ ಸಹಭಾಗಿತ್ವ
     

ಮುಂಬೈ(ಜೂ.17):  ಕೊರೋನಾ ವೈರಸ್ ನಿಯಂತ್ರಣ ಬರುತ್ತಿದ್ದಂತೆ ಇದೀಗ ಕ್ರಿಕೆಟ್ ಚಟುವಟಿಕೆಗಳು ಗರಿಗೆದರಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC) ಸ್ಥಗಿತಗೊಂಡಿದ್ದ ಕ್ರಿಕೆಟ್ ಟೂರ್ನಿಗಳನ್ನು ಮತ್ತೆ ಆರಂಭಿಸಲು ಮುಂದಾಗಿದೆ. ಇದರ ನಡುವೆ ಐಸಿಸಿ ತನ್ನ ಅಪ್‌ಸ್ಟಾಕ್ಸ್ ಅಧಿಕೃತ ಪಾಲುದಾರಿಕೆಯನ್ನು ಘೋಷಿಸಿದೆ.  

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ 15 ಸದಸ್ಯರ ತಂಡ ಪ್ರಕಟಿಸಿದ ಬಿಸಿಸಿಐ!

ಭಾರತದ ಅತಿದೊಡ್ಡ ಹೂಡಿಕೆ ವೇದಿಕೆಗಳಲ್ಲಿ ಮುಂಚೂಣಿಯಲ್ಲಿರುವ ಅಪ್‍ಸ್ಟಾಕ್ಸ್ (RKSV ಸೆಕ್ಯುರಿಟೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್) ಜೊತೆಗಿನ ದೀರ್ಘಕಾಲೀನ ಸಹಭಾಗಿತ್ವವನ್ನು ಐಸಿಸಿ ಪ್ರಕಟಿಸಿದೆ. ನೂತನ ಪಾಲುದಾರಿಕೆ ಜೂನ್ 18 ರಿಂದ ಆರಂಭಗೊಳ್ಳಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದೊಂದಿಗೆ ಆರಂಭವಾಗಲಿದೆ.  2023ರ ವರೆಗೆ  ಪಾಲುದಾರಿಕೆ ಒಪ್ಪಂದ ಮಾಡಲಾಗಿದೆ. 

ಅಪ್‍ಸ್ಟಾಕ್ಸ್ ವೇಗವಾಗಿ ಬೆಳೆದು ಭಾರತದ ಅತಿದೊಡ್ಡ ಆನ್‍ಲೈನ್ ಹೂಡಿಕೆ ವೇದಿಕೆಗಳಲ್ಲಿ ಒಂದಾಗಿದೆ. ಅಪ್‍ಸ್ಟಾಕ್ಸ್ ಸದ್ಯಕ್ಕೆ 40 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ‘ಐಸಿಸಿ’ ಜೊತೆಗಿನ ಈ ಸಹಯೋಗವು ಅಪ್‍ಸ್ಟಾಕ್ಸ್‍ನ  ಮುಂದಿನ ಹಂತದ ಬೆಳವಣಿಗೆಯನ್ನು ತ್ವರಿತಗೊಳಿಸುವಲ್ಲಿ ಪ್ರಮುಖ  ಪಾತ್ರ ನಿರ್ವಹಿಸಲಿದೆ. ಹೊಸ ತಲೆಮಾರಿನ ಯುವ ಸಮೂಹದ ಜೊತೆ ಸಂವಹನ ಸಾಧಿಸುವುದು ಅಪ್‍ಸ್ಟಾಕ್ಸ್‍ನ ಕಾರ್ಯತಂತ್ರದ ಪ್ರಮುಖ ಉದ್ದೇಶವಾಗಿದೆ.   ಹಣ   ಹೂಡಿಕೆಯನ್ನು ಸುಲಭ, ನ್ಯಾಯಸಮ್ಮತ ಮತ್ತು ಎಲ್ಲರಿಗೂ ಕೈಗೆಟುಕುವಂತೆ ಮಾಡುವ ತನ್ನ ದೂರದೃಷ್ಟಿಯನ್ನು ಕಾರ್ಯಗತಗೊಳಿಸಲು ಅಪ್‍ಸ್ಟಾಕ್ಸ್ ಬ್ರ್ಯಾಂಡ್ ಉದ್ದೇಶಿಸಿದೆ.

ಅಕ್ಟೋಬರ್ 10ರೊಳಗೆ ಐಪಿಎಲ್‌ ಮುಗಿಸಲು ಐಸಿಸಿ ಒತ್ತಡ?

ಐಸಿಸಿಯ ಅಧಿಕೃತ ಪಾಲುದಾರನಾಗಿ ಅಪ್‍ಸ್ಟಾಕ್ಸ್   ಸ್ವಾಗತಿಸುವುದಕ್ಕೆ ಸಂತಸವಾಗುತ್ತಿದೆ.   ನಮ್ಮ ಜತೆಗಿನ ಈ ಸಹಯೋಗವು ಅಪ್‍ಸ್ಟಾಕ್ಸ್‍ಗೆ ತನ್ನ ಸದ್ಯದ ಮತ್ತು ಹೊಸ ಗ್ರಾಹಕರಿಗೆ ಹೂಡಿಕೆ ಕುರಿತು ಮಾರ್ಗದರ್ಶನ ನೀಡಲು ಮತ್ತು ಅವರೊಂದಿಗೆ ಸಂವಹನ ಸಾಧಿಸಲು ಅಪ್ರತಿಮ ವೇದಿಕೆ  ಒದಗಿಸಲಿದೆ. 2021-23ರ ಅವಧಿ ಉದ್ದಕ್ಕೂ ಅಪ್‍ಸ್ಟಾಕ್ಸ್‍ನ ಮುಂದಿನ ಹಂತದ ಬೆಳವಣಿಗೆಗೆ ಅಗತ್ಯ ಬೆಂಬಲ ನೀಡುವುದನ್ನು ನಾವು ಎದುರು ನೋಡುತ್ತಿದ್ದೇವೆ. ಈ ಅವಧಿಯಲ್ಲಿ ಹಿರಿಯ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್‍ಗೆ ಸಂಬಂಧಿಸಿದಂತೆ ಐಸಿಸಿ 5ಕ್ಕೂ ಹೆಚ್ಚು ವಿಶ್ವಕಪ್ ಟೂರ್ನಿ ಆಯೋಜಿಸಲಿದೆ ಎಂದು ಐಸಿಸಿ ಮುಖ್ಯ ವಾಣಿಜ್ಯ ಅಧಿಕಾರಿ ಅನುರಾಗ್ ದಹಿಯಾ ಹೇಳಿದ್ದಾರೆ.

ನಾವು ‘ಐಸಿಸಿ’ಯ ಅಧಿಕೃತ ಪಾಲುದಾರನಾಗಿರುವುದು ನಮ್ಮ ಪಾಲಿಗೆ ತುಂಬ ಸಂತೋಷದ ಸಂಗತಿಯಾಗಿದೆ. ಕ್ರಿಕೆಟ್‍ನ ಮತ್ತು ಹಣ ಹೂಡಿಕೆಯ ವಿವಿಧ ಸಂಗತಿಗಳ ಮಧ್ಯೆ ಹಲವಾರು ಹೋಲಿಕೆಗಳು ಇವೆ. ಕ್ರಿಕೆಟ್‍ನಲ್ಲಿ ಆಟಗಾರರ ಸ್ಥಿರ ಮತ್ತು ದೃಢ ನಿಶ್ಚಯದ ಪ್ರದರ್ಶನವು   ತಂಡದ ಗೆಲುವಿಗೆ ಕಾರಣವಾಗುವಂತೆ, ಹಣ ಹೂಡಿಕೆಯ ವಿಷಯದಲ್ಲಿಯೂ ಇದೇ ಬಗೆಯಲ್ಲಿ ಸ್ಥಿರತೆ ಮತ್ತು ದೃಢ ನಿಶ್ಚಯದ ಮನೋಭಾವಗಳು ಸಶಕ್ತ ಬಗೆಯ ಹೂಡಿಕೆ ಖಾತೆ ರೂಪುಗೊಳ್ಳಲು  ಸಹಾಯ ಮಾಡುತ್ತವೆ.  ಭಾರತದಲ್ಲಿ ಷೇರು ಹೂಡಿಕೆಯ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ. ನಮ್ಮ ತಂತ್ರಜ್ಞಾನ ಆಧಾರಿತ ಮತ್ತು ಅರ್ಥಪೂರ್ಣ ವೇದಿಕೆಯ ನೆರವಿನಿಂದ ಹೂಡಿಕೆಯ ಸಾಮಥ್ರ್ಯವನ್ನು ಹೆಚ್ಚಿಸಲು ನಮ್ಮ ಗ್ರಾಹಕರಿಗೆ ಸಹಾಯ ಮಾಡುವ ಮೂಲಕ ನಾವು ಅವರನ್ನು ಸಬಲೀಕರಣಗೊಳಿಸಲು ಬಯಸುತ್ತೇವೆ ಎಂದು ಅಪ್‍ಸ್ಟಾಕ್ಸ್‍ನ ಸಹ-ಸಂಸ್ಥಾಪಕ ಮತ್ತು ಸಿಇಒ ರವಿ ಕುಮಾರ್ ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಆಯೋಜನೆ: ಜೂನ್‌ 28ರವರೆಗೆ ಗಡುವು ಪಡೆದ ಬಿಸಿಸಿಐ
 
2021ರ ಜೂನ್‍ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಹೊರತಾಗಿ, ಈ ಪಾಲದಾರಿಕೆಯು ಇಲ್ಲಿ ನಮೂದಿಸಿರುವ  ಐಸಿಸಿ ಆಶ್ರಯದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳಿಗೆಲ್ಲ ಅನ್ವಯಿಸಲಿದೆ - ಐಸಿಸಿ ಪುರುಷರ ಟಿ20 ವಿಶ್ವಕಪ್ 2021, ಐಸಿಸಿ 19 ವರ್ಷದ ಒಳಗಿನವರ  ಪುರುಷರ ಕ್ರಿಕೆಟ್ ವಿಶ್ವಕಪ್ 2022, ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2022, ಐಸಿಸಿ ಪುರುಷರ ಟಿ20 ವಿಶ್ವಕಪ್ 2022, ಐಸಿಸಿ ಮಹಿಳಾ ಟಿ20 ವಿಶ್ವ ಕಪ್ 2023. ಇದರ ಜೊತೆಗೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ 2023, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯ 2023 ಮತ್ತು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಆಯೋಜನೆಯಾಗಲಿದೆ. ಈ ಟೂರ್ನಿಗಳು ಅಪ್‌ಸ್ಟಾಕ್ಸ್ ಪಾಲುದಾರಿಕೆ ಇರಲಿದೆ.

click me!