ಕೋವಿಡ್‌ ಸ್ಥಿತಿ ಹೀಗೇ ಇದ್ದರೆ ಒಟ್ಟಿಗೆ 2 ಸರಣಿ ಆಯೋಜನೆ..!

By Suvarna NewsFirst Published Jun 17, 2021, 11:56 AM IST
Highlights

* ಮುಂದಿನ ದಿನಗಳಲ್ಲಿ ಏಕಕಾಲದಲ್ಲಿ ಎರಡೆರಡು ಟೂರ್ನಿ ಆಯೋಜಿಸಲು ಬಿಸಿಸಿಐ ಚಿಂತನೆ

* ಸದ್ಯ ಭಾರತ ಎರಡು ತಂಡಗಳು ಲಂಕಾ ಹಾಗೂ ಇಂಗ್ಲೆಂಡ್‌ನಲ್ಲಿ ಸರಣಿಯನ್ನಾಡಲಿದೆ

* ಕೋವಿಡ್ ಪರಿಸ್ಥಿತಿ ಹೀಗೇ ಇದ್ದರೆ ಒಟ್ಟಿಗೆ 2 ಸರಣಿ ಆಯೋಜನೆ ಆಯೋಜನೆಗೆ ಬಿಸಿಸಿಐ ಒಲವು

ನವದೆಹಲಿ(ಜೂ.17): ಮುಂಬರುವ ದಿನಗಳಲ್ಲೂ ಕೋವಿಡ್‌ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಒಂದೇ ಸಮಯದಲ್ಲಿ 2 ಸರಣಿಗಳನ್ನು ಆಯೋಜಿಸುವ ಯೋಜನೆಯನ್ನು ಮುಂದುವರಿಸಲಾಗುತ್ತದೆ ಎಂದು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ತಿಳಿಸಿದ್ದಾರೆ. 

ಭಾರತ ಟೆಸ್ಟ್‌ ತಂಡ ಇಂಗ್ಲೆಂಡ್‌ನಲ್ಲಿರುವಾಗ, ಮತ್ತೊಂದು ತಂಡ ಶ್ರೀಲಂಕಾ ಪ್ರವಾಸಕ್ಕೆ ತೆರಳಿ ಏಕದಿನ ಹಾಗೂ ಟಿ20 ಸರಣಿಗಳನ್ನು ಆಡಲಿದೆ. ‘ಎಲ್ಲಾ ಮೂರು ಮಾದರಿಗಳಲ್ಲಿ ಆಡುವ ಆಟಗಾರರಿಗೆ ಬಯೋ ಬಬಲ್‌, ಕ್ವಾರಂಟೈನ್‌ನಿಂದ ತಕ್ಕಮಟ್ಟಿಗೆ ವಿನಾಯಿತಿ ಸಿಗುವಂತೆ ಮಾಡುವ ಉದ್ದೇಶ ಈ ಯೋಜನೆಯದ್ದಾಗಿದೆ. ಅಲ್ಲದೇ ಹೀಗೆ ಮಾಡುವುದರಿಂದ ಹೆಚ್ಚು ದ್ವಿಪಕ್ಷೀಯ ಸರಣಿಗಳನ್ನು ನಡೆಸಲು ಸಾಧ್ಯ’ ಎಂದು ಧುಮಾಲ್‌ ಹೇಳಿದ್ದಾರೆ.

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತ, ಕಿವೀಸ್ ಸಿದ್ದತೆ ಹೇಗಿದೆ?

ಒಂದು ಕಡೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದರೆ, ಮತ್ತೊಂದೆಡೆ ಶಿಖರ್ ಧವನ್ ನೇತೃತ್ವದ ಭಾರತದ ಮತ್ತೊಂದು ತಂಡ ಸೀಮಿತ ಓವರ್‌ಗಳ ಸರಣಿಯನ್ನಾಡಲು ಲಂಕಾ ಪ್ರವಾಸಕ್ಕೆ ತೆರಳಿದೆ. ಎರಡು ತಂಡಗಳು ಸಾಕಷ್ಟು ಬಲಿಷ್ಠವಾಗಿದ್ದು, ಉತ್ತಮ ಬೆಂಚ್ ಸ್ಟ್ರೆಂಥ್ ಹೊಂದಿವೆ. ಎರಡು ತಂಡಗಳು ಮುಂಬರುವ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ, ಮುಂದಿನ ದಿನಗಳಲ್ಲಿ ಏಕಕಾಲದಲ್ಲಿ ಎರಡು ತಂಡಗಳು ದ್ವಿಪಕ್ಷೀಯ ಸರಣಿ ಆಡಿಸಬಹುದಾಗಿದೆ ಎಂದು  ಧುಮಾಲ್‌ ಹೇಳಿದ್ದಾರೆ.
 

click me!