
ಲಂಡನ್(ಜು.03): ವಿಶ್ವದ ಶ್ರೀಮಂತ ಫುಟ್ಬಾಲಿಗ, ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ಇನ್‌ಸ್ಟಾಗ್ರಾಂನಲ್ಲಿ ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ ಬರೋಬ್ಬರಿ 12 ಕೋಟಿ ರು. ಗಳಿಸಲಿದ್ದಾರೆ. ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ರೊನಾಲ್ಡೋ ರಾಯಭಾರಿಯಾಗಿದ್ದಾರೆ. ಅಲ್ಲದೇ ಇನ್ನೂ ಅನೇಕ ಬ್ರ್ಯಾಂಡ್‌ಗಳ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪ್ರಚಾರ ಮಾಡಿದ್ದಾರೆ.
ಜಾಗತಿಕ ಮಟ್ಟದ ಸೆಲಿಬ್ರಿಟಿಗಳ ಪೈಕಿ ರೊನಾಲ್ಡೋ ನಂ.1 ಸ್ಥಾನದಲ್ಲಿದ್ದಾರೆ. ಇದೇ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಹ ಇದ್ದು, ಕೊಹ್ಲಿ ಮಾಡುವ ಪ್ರತಿ ಪ್ರಯೋಜಿತ ಪೋಸ್ಟ್‌ಗೆ 5.08 ಕೋಟಿ ಹಣ ಗಳಿಸಲಿದ್ದಾರೆ. ಕೊಹ್ಲಿ ಜಾಗತಿಕ ಸೆಲಿಬ್ರಿಟಿಗಳ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ 132 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿಗೆ 4ನೇ ಸ್ಥಾನ ಸಿಕ್ಕಿದೆ. 2ನೇ ಸ್ಥಾನದಲ್ಲಿ ಲಿಯೋನೆಲ್ ಮೆಸ್ಸಿ (8.66 ಕೋಟಿ ರು.), 3ನೇ ಸ್ಥಾನದಲ್ಲಿ ನೇಯ್ಮಾರ್ (6.12 ಕೋಟಿ ರು.) ಇದ್ದಾರೆ.
ಆಯ್ದ ಆಟಗಾರರನ್ನೊಳಗೊಂಡ ಕೌಂಟಿ ತಂಡದ ಜತೆ ಟೀಂ ಇಂಡಿಯಾ ಅಭ್ಯಾಸ ಪಂದ್ಯ
ಇನ್ನು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಜೋನ್ಸ್ 67 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ ಬರೋಬ್ಬರಿ 3 ಕೋಟಿ ರುಪಾಯಿ ಪಡೆಯುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.