ಹರಿಣಗಳೆದುರು ಮತ್ತೊಂದು ಗೆಲುವಿನ ಕನವರಿಕೆಯಲ್ಲಿ ಮಿಥಾಲಿ ಪಡೆ

By Suvarna NewsFirst Published Mar 12, 2021, 8:43 AM IST
Highlights

5 ಪಂದ್ಯಗಳ ಏಕದಿನ ಸರಣಿಯಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ತಲಾ 1-1 ಪಂದ್ಯ ಜಯಿಸಿದ್ದು, ಇದೀಗ ಮಿಥಾಲಿ ಪಡೆ ಮತ್ತೊಂದು ಪಂದ್ಯ ಗೆದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಲಖನೌ(ಮಾ.12): ಭಾರತ ಮಹಿಳಾ ಕ್ರಿಕೆಟ್‌ ತಂಡ ಶುಕ್ರವಾರ ಇಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಜಯದ ಲಯ ಉಳಿಸಿಕೊಳ್ಳಲು ಎದುರು ನೋಡುತ್ತಿದೆ. 

5 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಮಿಥಾಲಿ ರಾಜ್‌ ಪಡೆ, 2ನೇ ಪಂದ್ಯದಲ್ಲಿ ಗೆದ್ದು 1-1ರಲ್ಲಿ ಸಮಬಲ ಸಾಧಿಸಿತ್ತು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಭಾರತೀಯ ಆಟಗಾರ್ತಿಯರು ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ತಂಡದ ಮೇಲೆ ಸಹಜವಾಗಿಯೇ ಒತ್ತಡವಿದೆ. ಸರಣಿ ಗೆಲುವಿನ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದೆನಿಸಿದೆ.

Regroup ✅
Train ✅
Get ready ✅ 🇮🇳 all geared up for the 3rd ODI against South Africa 🇿🇦 in Lucknow 😎 pic.twitter.com/uTRGb9HeLf

— BCCI Women (@BCCIWomen)

ಮಹಿಳಾ ಕ್ರಿಕೆಟ್: ಹರಿಣಗಳಿಗೆ ತಿರುಗೇಟು ಕೊಟ್ಟ ಮಿಥಾಲಿ ರಾಜ್‌ ಪಡೆ

ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡ 8 ವಿಕೆಟ್‌ಗಳ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿತ್ತು. ಇನ್ನು ಮಾರ್ಚ್ 9ರಂದು ನಡೆದ ಎರಡನೇ ಪಂದ್ಯದಲ್ಲಿ ಮಿಥಾಲಿ ರಾಜ್‌ ನೇತೃತ್ವದ ಭಾರತ ತಂಡ 9 ವಿಕೆಟ್‌ಗಳ ಗೆಲುವು ದಾಖಲಿಸುವ ಮೂಲಕ ಹರಿಣಗಳ ಪಡೆಗೆ ತಿರುಗೇಟು ನೀಡಿತ್ತು. 

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
 

click me!