ಕೊರೋನಾ ಎಫೆಕ್ಟ್: ಕೌಂಟಿ ಕ್ರಿಕೆಟ್‌ನಿಂದ ಹೊರಬಂದ ಚೇತೇಶ್ವರ್ ಪೂಜಾರ

By Suvarna NewsFirst Published Apr 10, 2020, 6:51 PM IST
Highlights

ಕೊರೋನಾ ವೈರಸ್ ಭೀತಿಯಿಂದಾಗಿ ಚೇತೇಶ್ವರ್ ಪೂಜಾರ ಈ ಬಾರಿಯ ಕೌಂಟಿ ಕ್ರಿಕೆಟ್ ಆಡದಿರಲು ತೀರ್ಮಾನಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.10): ವಿಶ್ವದೆಲ್ಲೆಡೆ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಕೌಂಟಿ ಕ್ರಿಕೆಟ್‌ನಿಂದ ಹೊರಬಂದಿದ್ದಾರೆ.

ಕೊರೋನಾ ಹೋರಾಟಕ್ಕೆ ಸುನಿಲ್‌ ಗವಾಸ್ಕರ್‌ 59 ಲಕ್ಷ ದೇಣಿಗೆ..!

ಹೌದು, ಸೌರಾಷ್ಟ್ರ ಬ್ಯಾಟ್ಸ್‌ಮನ್ ಪೂಜಾರ, ಕೌಂಟಿ ಕ್ರಿಕೆಟ್ ಟೂರ್ನಿಯ ಗ್ಲೌಸೆಸ್ಟರ್‌ಶೈರ್ ತಂಡದ ಮೊದಲ 6 ಪಂದ್ಯಗಳ ಒಪ್ಪಂದಿಂದ ಹಿಂದೆ ಸರಿದಿದ್ದಾರೆ. ಇನ್ನು ಇಂಗ್ಲೆಂಡ್ ಕೂಡಾ ಮೇ 28ರವರೆಗೆ ಎಲ್ಲಾ ವೃತ್ತಿಪರ ಕ್ರಿಕೆಟ್ ಟೂರ್ನಿಗಳನ್ನು ರದ್ದುಗೊಳಿಸಿದೆ. ಪ್ರಸಕ್ತ ಆವೃತ್ತಿಯ ಕೌಂಟಿ ಕ್ರಿಕೆಟ್‌ ಏಪ್ರಿಲ್ 12ರಿಂದ ಆರಂಭವಾಗಬೇಕಿತ್ತು. ಆದರೆ ಕೋವಿಡ್ 19 ಭೀತಿಯಿಂದಾಗಿ ಟೂರ್ನಿ ಮುಂದೂಡಲ್ಪಟ್ಟಿದೆ. ಈ ಮೊದಲು ಚೇತೇಶ್ವರ್ ಪೂಜಾರ ಡರ್ಬಿಶೈರ್, ಯಾರ್ಕ್‌ಶೈರ್ ಹಾಗೂ ನಾಟಿಂಗ್‌ಹ್ಯಾಮ್‌ಶೈರ್ ಕೌಂಟಿ ತಂಡದ ಪರವಾಗಿಯೂ ಕಣಕ್ಕಿಳಿದಿದ್ದರು. 32 ವರ್ಷ ವಯಸ್ಸಿನ ಚೇತೇಶ್ವರ್ ಪೂಜಾರ, ಭಾರತ ಪರ 77 ಟೆಸ್ಟ್ ಪಂದ್ಯಗಳನ್ನಾಡಿ 48.66ರ ಸರಾಸರಿಯಲ್ಲಿ 5,840 ರನ್ ಗಳಿಸಿದ್ದಾರೆ.

#WorkfromHome ಮಾಡಿ ತಲೆ ಕೆಡ್ತಿದೆಯಾ? ಹೀಗ್ ರಿಲ್ಯಾಕ್ಸ್ ಆಗಿ

ಕೋವಿಡ್ 19 ಎನ್ನುವ ಡೆಡ್ಲಿ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು, 16 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇಂಗ್ಲೆಂಡ್‌ನಲ್ಲಿ 65 ಸಾವಿರಕ್ಕೂ ಅಧಿಕ ಮಂದಿ ಕೊರೋನಾ ಜಾಲಕ್ಕೆ ಸಿಲುಕಿದ್ದು 7 ಸಾವಿರಕ್ಕೂ ಹೆಚ್ಚು ಜನ ಕೊನೆಯುಸಿರೆಳೆದಿದ್ದಾರೆ. ಕೊರೋನಾ ವೈರಸ್ ಕೇವಲ ಜನಜೀವನ್ನಷ್ಟೇ ಸ್ತಬ್ಧಗೊಳಿಸಿಲ್ಲ, ಬದಲಾಗಿ ಕ್ರೀಡಾ ಜಗತ್ತಿನ ಮೇಲೂ ವಕ್ರದೃಷ್ಠಿ ಬೀರಿದೆ. ಪರಿಣಾಮ ಟೊಕಿಯೋ ಒಲಿಂಪಿಕ್ಸ್, ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಹಲವು ಟೂರ್ನಿಗಳು ಮುಂದೂಡಲ್ಪಟ್ಟಿವೆ. 

click me!