ಬಿಸಿಸಿಐ ರೆಸ್ಟ್ ತಗೋಳಿ ಅನ್ನುತ್ತೆ, ಸೆಲೆಕ್ಟರ್ಸ್ ಬೇಡ ಅಂತಾರೆ
ಪ್ಲೇಯರ್ಸ್ಗೆ ರೆಸ್ಟ್ ನೀಡೋದ್ರಿಂದ ಆಗ್ತಿದೆಯಾ ತೊಂದರೆ..?
ಕೆಲವರಿಗೆ ರೆಸ್ಟ್ ತೆಗೆದುಕೊಳ್ಳೋದು ಅಡ್ವಾಂಟೇಜ್ ಆಗಿದೆಯಾ..?
ಮುಂಬೈ(ಜು.11): ಟೀಂ ಇಂಡಿಯಾ ವಿಶ್ವ ಕ್ರಿಕೆಟ್ನ ಮೋಸ್ಟ್ ಬ್ಯುಸಿ ಟೀಂ. ಬಿಡುವಿಲ್ಲದೇ ಒಂದಾದ ಮೇಲೊಂದರಂತೆ ಸರಣಿಗಳನ್ನ ಆಡುತ್ತೆ. ಇದರಿಂದ ಪ್ಲೇಯರ್ಸ್ ಫಿಸಿಕಲಿ ಮತ್ತು ಮೆಂಟಲಿ ಬಳಲುತ್ತಾರೆ. ಈ ವರ್ಕ್ಲೋಡ್ ತಪ್ಪಿಸಲು ಬಿಸಿಸಿಐ ಆಟಗಾರರಿಗೆ ವಿಶ್ರಾಂತಿ ಪಡೆಯಲು ಸೂಚಿಸಿತ್ತು. ಅದರಂತೆ ಕೆಲ ಪ್ರಮುಖ ಸರಣಿಗಳಿಂದ ಆಟಗಾರರಿಗೆ ರೆಸ್ಟ್ ನೀಡಲಾಗ್ತಿದೆ. ಸದ್ಯ ಇದೇ ವಿಶ್ರಾಂತಿ ವಿಚಾರಕ್ಕೆ ಸೆಲೆಕ್ಟರ್ಸ್ ಕೆಂಡಾಮಂಡಲವಾಗಿದ್ದಾರೆ. ಟೀಂ ಇಂಡಿಯಾದ ಕೆಲವು ಅನುಭವಿ ಆಟಗಾರರು ಪದೇ ಪದೇ ವಿಶ್ರಾಂತಿ ಪಡೆಯುತ್ತಿರುವುದು ಬಿಸಿಸಿಐ ಹಾಗೂ ಆಯ್ಕೆ ಸಮಿತಿಯ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.
ರೆಸ್ಟ್ ಬಯಸೋ ಪ್ಲೇಯರ್ಸ್ ವಿರುದ್ಧ ಸೆಲೆಕ್ಟರ್ಸ್ ಗರಂ:
ಹೌದು, ಸೆಲೆಕ್ಟರ್ಸ್ ಟೀಂ ಇಂಡಿಯಾದ ಸೀನಿಯರ್ ಪ್ಲೇಯರ್ಸ್ ವಿರುದ್ಧ ಅಸಾಮಾಧಾನ ಹೊರಹಾಕಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹಾಗೂ ಮೊಹಮ್ಮದ್ ಶಮಿ ಪದೇ ಪದೇ ರೆಸ್ಟ್ ಪಡೆಯುತ್ತಿದ್ದಾರೆ. ಈ ವರ್ಷದಲ್ಲಿ ನಾಲ್ವರು ಆಟಗಾರರು ಸತತ ಸರಣಿಗಳನ್ನ ಆಡಿಲ್ಲ. ಒಂದು ಸರಣಿ ಆಡಿದ್ರೆ ಎರಡು ಸಿರೀಸ್ಗಳಿಂದ ಹೊರಗುಳಿಯುತ್ತಿದ್ದಾರೆ. ಸೀನಿಯರ್ ಆಟಗಾರರು ಹೀಗೆ ಪದೇ ಪದೇ ರೆಸ್ಟ್ ಪಡೆಯೋದು ಸೆಲೆಕ್ಟರ್ಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿಗೆ ರೆಸ್ಟ್ ನೀಡಿದಾಗಲೆಲ್ಲಾ ಇವರ ಬದಲಿಗೆ ಹೊಸಬರಿಗೆ ಮಣೆ ಹಾಕಬೇಕಾಗುತ್ತೆ. ಇದರಿಂದ ಪರ್ಫೆಕ್ಟ್ ತಂಡ ಕಟ್ಟಲು ಕಷ್ಟವಾಗ್ತಿದೆ. ಅಲ್ಲದೇ ಪ್ರಸಾರ ವಾಹಿನಿಗೆ ದೊಡ್ಡ ನಷ್ಟವಾಗ್ತಿದೆ. ಆಟಗಾರರ ಕಾಂಟ್ರ್ಯಾಕ್ಟ್ ಲಿಸ್ಟ್ ಕೂಡ ತಯಾರಿಸೋದು ಕಠಿಣವೆನಿಸಿದೆ. ಈ ವರ್ಷದಲ್ಲಿ ರೋಹಿತ್ ಬರೀ 14 ಪಂದ್ಯಗಳನ್ನಾಡಿದ್ರೆ ಕೊಹ್ಲಿ 13 ಪಂದ್ಯಗಳನ್ನಾಡಿದ್ದಾರೆ. ರಿಷಭ್ ಪಂತ್ ಒಬ್ಬರೇ ಮೂರು ಫಾಮ್ಯಾಟ್ನಲ್ಲಿ ಹೆಚ್ಚು ಪಂದ್ಯಗಳನ್ನಾಡಿದ್ದಾರೆ. ಹೀಗೆ ಸತತ ರೆಸ್ಟ್ ಪಡೆಯೋ ಆಟಗಾರರ ವಿರುದ್ಧವೇ ಸದ್ಯ ಸೆಲೆಕ್ಟರ್ಸ್ ಗುಡುಗಿದ್ದಾರೆ.
Virat Kohli ಕಳಪೆ ಫಾರ್ಮ್ ಬಗ್ಗೆ ಮತ್ತೆ ತುಟಿ ಬಿಚ್ಚಿದ ನಾಯಕ ರೋಹಿತ್ ಶರ್ಮಾ..!
ಆಯ್ಕೆ ಸಮಿತಿ ವಿರುದ್ಧ ಗುಡುಗಿದ ಫ್ಯಾನ್ಸ್:
ಆಟಗಾರರಿಗೆ ಕೇಳಿದಾಗಲೆಲ್ಲಾ ರೆಸ್ಟ್ ನೀಡ್ತಿರೋ ಆಯ್ಕೆ ಸಮಿತಿ ವಿರುದ್ಧ ಫ್ಯಾನ್ಸ್ ಕಿಡಿಕಾರಿದ್ದಾರೆ. ಕೊಹ್ಲಿ, ರೋಹಿತ್ ಹಾಗೂ ಬುಮ್ರಾ ಜಸ್ಟ್ ಒಂದು ಟೆಸ್ಟ್ ಪಂದ್ಯವಾಡಿದ್ದಾರೆ. ಇವರಿಗೆಲ್ಲಾ ಮತ್ತೇಕೆ ವಿಂಡೀಸ್ ಏಕದಿನ ಸರಣಿಗೆ ರೆಸ್ಟ್ ನೀಡಬೇಕಿತ್ತು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಐಪಿಎಲ್‌ನಲ್ಲಿ ಸತತ 14 ಪಂದ್ಯಗಳನ್ನಾಡೋ ಪ್ಲೇಯರ್ಸ್, ಇಲ್ಲಿ ಒಂದು ಸರಣಿ ಆಡಿ ರೆಸ್ಟ್ ತೆಗೆದುಕೊಳ್ಳೋದು ಎಷ್ಟು ಸರಿ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಬಿಸಿಸಿಐ ಆಟಗಾರರಿಗೆ ಅನಗತ್ಯವಾಗಿ ರೆಸ್ಟ್ ನೀಡೋದನ್ನ ನಿಲ್ಲಿಸಬೇಕಿದೆ.