ICC Women's World Cup: ಅತಿಹೆಚ್ಚು ವಿಕೆಟ್‌ ದಾಖಲೆ ಸರಿಗಟ್ಟಿದ ಜೂಲನ್‌ ಗೋಸ್ವಾಮಿ

Suvarna News   | stockphoto
Published : Mar 11, 2022, 08:51 AM ISTUpdated : Mar 11, 2022, 09:58 AM IST
ICC Women's World Cup: ಅತಿಹೆಚ್ಚು ವಿಕೆಟ್‌ ದಾಖಲೆ ಸರಿಗಟ್ಟಿದ ಜೂಲನ್‌ ಗೋಸ್ವಾಮಿ

ಸಾರಾಂಶ

* ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ವಿಶ್ವದಾಖಲೆ ಸರಿಗಟ್ಟಿದ ಜೂಲನ್ ಗೋಸ್ವಾಮಿ * ನ್ಯೂಜಿಲೆಂಡ್ ವಿರುದ್ದ 1 ವಿಕೆಟ್ ಪಡೆದು ದಾಖಲೆ ಬರೆದ ಅನುಭವಿ * ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ ಗೋಸ್ವಾಮಿ

ಹ್ಯಾಮಿಲ್ಟನ್(ಮಾ.11)‌: ಭಾರತದ ಹಿರಿಯ ವೇಗಿ ಜೂಲನ್‌ ಗೋಸ್ವಾಮಿ (Jhulan Goswami) ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿದ್ದಾರೆ. ನ್ಯೂಜಿಲೆಂಡ್‌ನ ವಿಕೆಟ್ ಕೀಪರ್ ಬ್ಯಾಟರ್ ಕೆಟ್ಟಿ ಮಾರ್ಟಿನ್ ವಿಕೆಟ್‌ ಕಬಳಿಸುತ್ತಿದ್ದಂತೆಯೇ ಜೂಲನ್ ಈ ಸಾಧನೆ ಮಾಡಿದರು. ಆಸ್ಪ್ರೇಲಿಯಾದ ಮಾಜಿ ಸ್ಪಿನ್ನರ್‌ ಲಿನ್‌ ಫುಲ್ಸ್‌ಟನ್‌ರ (Lyn Fullston) 39 ವಿಕೆಟ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. 5ನೇ ವಿಶ್ವಕಪ್‌ನಲ್ಲಿ ಆಡುತ್ತಿರುವ ಜೂಲನ್‌ ತಮ್ಮ 30ನೇ ಪಂದ್ಯದಲ್ಲಿ ಈ ದಾಖಲೆ ಬರೆದರು. 1982ರಿಂದ 88ರ ವರೆಗೂ ವಿಶ್ವಕಪ್‌ನಲ್ಲಿ ಆಡಿದ್ದ ಲಿನ್‌, 20 ಪಂದ್ಯಗಳಲ್ಲಿ 39 ವಿಕೆಟ್‌ ಕಿತ್ತಿದ್ದರು.

ಕಿವೀಸ್‌ಗೆ ಶರಣಾದ ಟೀಂ ಇಂಡಿಯಾ..!

ಹ್ಯಾಮಿಲ್ಟನ್‌: ಕಳಪೆ ಬ್ಯಾಟಿಂಗ್‌ ಪರಿಣಾಮ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ (ICC Women's World Cup) ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತ 62 ರನ್‌ ಸೋಲು ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ್ದ ಭಾರತಕ್ಕೆ ಈ ಸೋಲು ಆಘಾತ ತಂದಿದೆ. ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿಯನ್ನು 1-4ರಲ್ಲಿ ಸೋತಿದ್ದ ಭಾರತ, ಮತ್ತೊಮ್ಮೆ ಕಿವೀಸ್‌ ಪಡೆಗೆ ಶರಣಾಗಿದೆ. ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 50 ಓವರಲ್ಲಿ 9 ವಿಕೆಟ್‌ಗೆ 260 ರನ್‌ ಕಲೆಹಾಕಿತು. ದೊಡ್ಡ ಮೊತ್ತ ಬೆನ್ನತ್ತಿದ ಭಾರತ, 46.4 ಓವರಲ್ಲಿ ಕೇವಲ 198 ರನ್‌ಗೆ ಆಲೌಟ್‌ ಆಯಿತು.

ಬೌಲಿಂಗ್‌ನಲ್ಲಿ ಪೂಜಾ ವಸ್ತ್ರಾಕರ್‌ (10 ಓವರಲ್ಲಿ 34 ರನ್‌ಗೆ 4 ವಿಕೆಟ್‌) ಹಾಗೂ ಬ್ಯಾಟಿಂಗ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ (62 ಎಸೆತಗಳಲ್ಲಿ 71 ರನ್‌) ಗಮನಾರ್ಹ ಪ್ರದರ್ಶನ ತೋರಿದ್ದರು. ಅಮೇಲಿಯಾ ಕೆರ್ರ್ (50 ರನ್‌ ಹಾಗೂ 9 ಓವರಲ್ಲಿ 56ಕ್ಕೆ 3 ವಿಕೆಟ್‌) ಆಲ್ರೌಂಡ್‌ ಆಟ ನ್ಯೂಜಿಲೆಂಡ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ICC Women's World Cup: ಪಾಕ್ ಬಗ್ಗುಬಡಿದು ಶುಭಾರಂಭ ಮಾಡಿದ ಭಾರತ

ಮಾರ್ಚ್‌ 12ರಂದು ವಿಂಡೀಸ್‌ ವಿರುದ್ಧ ಪಂದ್ಯ: ಭಾರತ ತನ್ನ 3ನೇ ಪಂದ್ಯವನ್ನು ಶನಿವಾರ (ಮಾ.12) ವೆಸ್ಟ್‌ಇಂಡೀಸ್‌ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ ಎನಿಸಿದೆ. ಈ ಪಂದ್ಯ ಸೋತರೆ, ತಂಡದ ಸೆಮಿಫೈನಲ್‌ ಹಾದಿ ಕಠಿಣಗೊಳ್ಳಲಿದೆ. ಮಿಥಾಲಿ ರಾಜ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.

ಸ್ಕೋರ್‌: 
ನ್ಯೂಜಿಲೆಂಡ್‌ 50 ಓವರಲ್ಲಿ 260/9 (ಸ್ಯಾಥರ್‌ವೈಟ್‌ 75, ಕೆರ್ರ್ 50, ಪೂಜಾ 4-34 
ಭಾರತ 46.4 ಓವರಲ್ಲಿ 198/10 (ಹರ್ಮನ್‌ಪ್ರೀತ್‌ 71, ಮಿಥಾಲಿ 31, ತಹುಹು 3-17, ಕೆರ್ರ್ 3-56)

ಟೆಸ್ಟ್: ಇಂಗ್ಲೆಂಡ್ ವಿರುದ್ದ ವೆಸ್ಟ್ ಇಂಡೀಸ್ ಮೇಲುಗೈ

ಸೇಂಟ್ ಜಾನ್ಸ್‌: ಎನ್‌ರುಕ್ಮಾ ಬೋನರ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಬಲಿಷ್ಠ ಇಂಗ್ಲೆಂಡ್ ಎದುರು ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಗಳಿಸಿದ 311 ರನ್‌ಗಳಿಗೆ ಪ್ರತ್ಯುತ್ತರವಾಗಿ ವೆಸ್ಟ್ ಇಂಡೀಸ್ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ 9 ವಿಕೆಟ್‌ ಕಳೆದುಕೊಂಡು 373 ರನ್ ಬಾರಿಸಿದ್ದು, ಒಟ್ಟಾರೆ 62 ರನ್‌ಗಳ ಮುನ್ನಡೆ ಪಡೆದಿದೆ. 

ಸಾಕಷ್ಟು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಎನ್‌ರುಕ್ಮಾ ಬೋನರ್ 355 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಆಕರ್ಷಕ 123 ರನ್‌ ಬಾರಿಸಿದರು. ಇವರಿಗೆ ಆಲ್ರೌಂಡರ್ ಜೇಸನ್ ಹೋಲ್ಡರ್ 45 ರನ್ ಬಾರಿಸುವ ಮೂಲಕ ಉತ್ತಮ ಸಾಥ್ ನೀಡಿದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!