ಕೊರಿಯಾದಲ್ಲಿ ಭಾರತ ಶೂಟರ್‌ಗಳ ದುರ್ವರ್ತನೆ..! ಪುರುಷ ಶೂಟರ್‌ಗಳ ಕೊಠಡಿಯಲ್ಲಿ ಇಬ್ಬರು ಮಹಿಳಾ ಶೂಟರ್‌?

By Suvarna NewsFirst Published Jul 31, 2023, 12:59 PM IST
Highlights

ಸಾಕಷ್ಟು ಚರ್ಚೆಗೆ ಗ್ರಾಸವಾದ ಭಾರತೀಯ ಶೂಟರ್‌ಗಳ ನಡೆ
ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಶೂಟರ್‌ಗಳ ದುರ್ವರ್ತನೆ?
ಪುರುಷ ಶೂಟರ್‌ಗಳ ಕೊಠಡಿಯಲ್ಲಿ ಇಬ್ಬರು ಮಹಿಳಾ ಶೂಟರ್‌ ಪತ್ತೆ?

ನವದೆಹಲಿ(ಜು.31): ಶೂಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಕೊರಿಯಾಗೆ ತೆರಳಿದ್ದ ಭಾರತ ಕಿರಿಯರ ಶೂಟಿಂಗ್ ತಂಡದ ಕೆಲ ಸದಸ್ಯರ ವಿರುದ್ಧ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ದೆಹಲಿ, ಉತ್ತರ ಪ್ರದೇಶದ ಇಬ್ಬರು ಮಹಿಳಾ ಶೂಟರ್‌ಗಳು ಹೋಟೆಲ್‌ನಲ್ಲಿ ಪುರುಷ ಶೂಟರ್‌ಗಳ ಕೊಠಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ನು ರೂಂನಲ್ಲಿ ತಡರಾತ್ರಿವರೆಗೂ ಪಾರ್ಟಿ ಮಾಡಿ, ಜೋರಾಗಿ ಹಾಡು ಹಾಕಿ ಗಲಾಟೆ ಮಾಡಿದ್ದಾಗಿಯೂ ಹೋಟೆಲ್ ಸಿಬ್ಬಂದಿ ಆರೋಪಿಸಿದ್ದು, ಇನ್ಮುಂದೆ ಭಾರತೀಯರಿಗೆ ಕೊಠಡಿ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಿದೆ ಎನ್ನಲಾಗಿದೆ.

ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆದ ಮೂರನೇ ಆವೃತ್ತಿಯ ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್‌ ಜರುಗಿತ್ತು. ಈ ಸಂದರ್ಭದಲ್ಲಿ ಭಾರತೀಯ ಶೂಟರ್‌ಗಳು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಕುರಿತಂತೆ ಪಿಟಿಐಗೆ ಪ್ರತಿಕ್ರಿಯೆ ನೀಡಿರುವ ಈ ಪ್ರವಾಸದಲ್ಲಿದ್ದ ಭಾರತೀಯ ಅಧಿಕಾರಿಗಳು, ಪುರುಷ ಶೂಟರ್‌ಗಳಿದ್ದ ಹೋಟೆಲ್‌ಗೆ ಮಹಿಳಾ ಶೂಟರ್‌ಗಳು ಹೋಗಿರುವ ಕುರಿತಂತೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಯಾರೊಬ್ಬರು ಪುರುಷ ಶೂಟರ್‌ಗಳಿದ್ದ ಕೊಠಡಿಗೆ ಹೋಗಿದ್ದಾಗಲಿ ಅಥವಾ ಅಲ್ಲಿಂದ ವಾಪಾಸ್‌ ಬಂದಿದ್ದಾಗಲಿ ಕಂಡು ಬಂದಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಹೋಟೆಲ್‌ನ ಕೆಲವು ಉಪಕರಣಗಳನ್ನು ಹಾಳಾಗಿರುವ ಕುರಿತಂತೆ ಹೋಟೆಲ್‌ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಆದರೆ ಈ ತಪ್ಪಿಗೆ ಪರಿಹಾರ ನೀಡಿಯೇ ಅಲ್ಲಿಂದ ಚೆಕ್‌ ಔಟ್‌ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Ashes 2023: ಆಸೀಸ್‌ಗೆ ಗೆಲ್ಲಲು 249 ರನ್‌, ಇಂಗ್ಲೆಂಡ್‌ಗೆ 10 ವಿಕೆಟ್ ಬೇಕು..!

ಮೂರನೇ ಆವೃತ್ತಿಯ ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ದೊಡ್ಡ ಸಂಖ್ಯೆಯ ಶೂಟರ್‌ಗಳನ್ನು ಕೂರಿಯಾಗೆ ಕಳಿಸಿಕೊಟ್ಟಿತ್ತು. ಈ ಸ್ಪರ್ಧೆಯಲ್ಲಿ 44 ದೇಶಗಳ 550ಕ್ಕೂ ಅಧಿಕ ಶೂಟರ್‌ಗಳು ಪಾಲ್ಗೊಂಡಿದ್ದರು. ಭಾರತ ಈ ಸ್ಪರ್ಧೆಯಲ್ಲಿ 6 ಚಿನ್ನ, 6 ಬೆಳ್ಳಿ ಹಾಗೂ 5 ಕಂಚಿನ ಪದಕ ಸಹಿತ 17 ಪದಕಗಳನ್ನು ಜಯಿಸುವ ಮೂಲಕ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿತ್ತು. ಇನ್ನು ಇನ್ನು ಚೀನಾ 12 ಚಿನ್ನ ಸಹಿತ 28 ಪದಕ ಜಯಿಸುವ ಮೂಲಕ ಪದಕ ಪಟ್ಟಿಯಲ್ಲಿ ನಂ.1 ಸ್ಥಾನದೊಂದಿಗೆ ತನ್ನ ಅಭಿಯಾನ ಮುಗಿಸಿತ್ತು. 

ಸ್ಪೇನ್‌ ಹಾಕಿ ಪಂದ್ಯಾವಳಿ ಗೆದ್ದ ಭಾರತ ವನಿತೆಯರು

ಬಾರ್ಸಿಲೋನಾ: ಸ್ಪ್ಯಾನಿಶ್‌ ಹಾಕಿ ಫೆಡರೇಶನ್‌ ಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ತಂಡ ಮೊದಲ ಸ್ಥಾನ ಪಡೆದಿದೆ. ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಆತಿಥೇಯ ಸ್ಪೇನ್‌ ವಿರುದ್ಧ 3-0 ಗೋಲುಗಳ ಗೆಲುವು ಸಾಧಿಸಿತು. 22ನೇ ನಿಮಿಷದಲ್ಲಿ ವಂದನಾ, 48ನೇ ನಿಮಿಷದಲ್ಲಿ ಮೋನಿಯಾ, 58ನೇ ನಿಮಿಷದಲ್ಲಿ ಉದಿತಾ ಗೋಲು ಬಾರಿಸಿದರು. ತಂಡ ಟೂರ್ನಿಯಲ್ಲಿ ಅಜೇಯವಾಗಿ ಉಳಿಯಿತು. ಇದೇ ವೇಳೆ ಪುರುಷರ ತಂಡ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ 2-1 ಗೋಲುಗಳ ಜಯ ಸಾಧಿಸಿತು.

ಧೋನಿ ಕೇವಲ ಹೆಸರಲ್ಲ, ಎಮೋಷನ್‌..! ಮಹಿ ವಿಮಾನದಲ್ಲಿ ನಿದ್ರಿಸುವಾಗ ವಿಡಿಯೋ ಮಾಡಿದ ಗಗನ ಸಖಿ..! ವಿಡಿಯೋ ವೈರಲ್

22 ರಾಜ್ಯ ಸಂಸ್ಥೆಗಳ ಜೊತೆ ಬ್ರಿಜ್‌ಭೂಷಣ್‌ ಸಭೆ!

ನವದೆಹಲಿ: ಅ.12ರಂದು ನಡೆಯಲಿರುವ ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ಭಾನುವಾರ ಕರೆದಿದ್ದ ಸಭೆಯಲ್ಲಿ 22 ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ‘25 ರಾಜ್ಯ ಸಂಸ್ಥೆಗಳ ಪೈಕಿ 22 ಸಂಸ್ಥೆಗಳ ಸದಸ್ಯರು ಸಭೆಗೆ ಆಗಮಿಸಿದ್ದರು. ನಮ್ಮ ಕಡೆಯಿಂದ ಯಾವ್ಯಾವ ಹುದ್ದೆಗೆ ಯಾರ್‍ಯಾರನ್ನು ಕಣಕ್ಕಿಳಿಸಬೇಕು ಎಂದು ಚರ್ಚಿಸಿದೆವು. ಸೋಮವಾರ ಮತ್ತೊಂದು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಬ್ರಿಜ್‌ಭೂಷಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಲು ಸೋಮವಾರ(ಜು.31) ಕೊನೆ ದಿನವಾಗಿದೆ.

click me!