ಇಂಗ್ಲೆಂಡ್‌ನಲ್ಲಿ 3 ದಿನ ಭಾರತ ಕ್ರಿಕೆಟಿಗರ ಪರಸ್ಪರ ಭೇಟಿಗೆ ನಿಷೇಧ

By Suvarna NewsFirst Published Jun 5, 2021, 11:54 AM IST
Highlights

* ಇಂಗ್ಲೆಂಡ್‌ಗೆ ಬಂದಿಳಿದಿರುವ ಟೀಂ ಇಂಡಿಯಾ

* ಸೌಥಾಂಪ್ಟನ್‌ನಲ್ಲಿ ಕಠಿಣ ಕ್ವಾರಂಟೈನ್‌ಗೆ ಒಳಪಟ್ಟಿದೆ ಭಾರತ ಕ್ರಿಕೆಟ್ ತಂಡ

* ಇಂಗ್ಲೆಂಡ್‌ನಲ್ಲಿ ದೀರ್ಘಕಾಲಿಕ ಕ್ರಿಕೆಟ್ ಸರಣಿ ಆಡಲಿರುವ ಭಾರತ ತಂಡ

ಸೌಥಾಂಪ್ಟನ್(ಜೂ.05)‌: ನ್ಯೂಜಿಲೆಂಡ್‌ ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಆಡಲು ಇಂಗ್ಲೆಂಡ್‌ಗೆ ಆಗಮಿಸಿರುವ ಭಾರತ ಕ್ರಿಕೆಟ್‌ ತಂಡವನ್ನು ಬಿಗಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 

ಬುಧವಾರವಷ್ಟೇ ಇಂಗ್ಲೆಂಡ್‌ಗೆ ಆಗಮಿಸಿದ್ದ ತಂಡದ ಸದಸ್ಯರು 3 ದಿನಗಳ ಕಾಲ ಪರಸ್ಪರ ಭೇಟಿ ಆಗದಂತೆ ಸೂಚಿಸಲಾಗಿದೆ ಎಂದು ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಹೇಳಿದ್ದಾರೆ. ಇಂಗ್ಲೆಂಡ್‌ಗೆ ತೆರಳುವ ಮುನ್ನವೂ ಭಾರತ ತಂಡ ಮುಂಬೈನಲ್ಲೂ 14 ದಿನ ಕ್ವಾರಂಟೈನ್‌ಗೆ ಒಳಪಟ್ಟಿತ್ತು. ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಜೂನ್ 18ರಿಂದ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಸೌಥಾಂಪ್ಟನ್‌ ಆತಿಥ್ಯ ವಹಿಸಲಿದೆ.

🇮🇳 ✈️ 🏴󠁧󠁢󠁥󠁮󠁧󠁿

Excitement is building up as arrive in England 🙌 👌 pic.twitter.com/FIOA2hoNuJ

— BCCI (@BCCI)

ಕ್ವಾರಂಟೈನ್‌ನಲ್ಲಿ ಒಳ್ಳೆ ನಿದ್ರೆ ಮಾಡುವ ಆಲೋಚನೆ ಇದೆ. ಕ್ವಾರಂಟೈನ್‌ ಅವಧಿಯಲ್ಲಿ ಮೂರು ದಿನಗಳ ಕಾಲ ಆಟಗಾರರು ಪರಸ್ಪರ ಭೇಟಿ ಆಗದಂತೆ ತಿಳಿಸಲಾಗಿದೆ ಎಂದು ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ಅಕ್ಷರ್ ಪಟೇಲ್ ತಿಳಿಸಿದ್ದಾರೆ.

ನಾವೀಗ ಸೌಥಾಂಪ್ಟನ್‌ನಲ್ಲಿದ್ದೇವೆಂದು ಪೋಸ್ ಕೊಟ್ಟ ರೋಹಿತ್-ಪಂತ್

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್ ಬಳಿಕ ಇಂಗ್ಲೆಂಡ್ ವಿರುದ್ದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಮತ್ತೊಂದೆಡೆ ಭಾರತ ಮಹಿಳಾ ಕ್ರಿಕೆಟ್ ತಂಡವು ಒಂದು ಟೆಸ್ಟ್‌, ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಿದೆ.

click me!