ಬಾಕ್ಸಿಂಗ್ ಡೇ ಟೆಸ್ಟ್: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಟೆಸ್ಟ್‌ ಭವಿಷ್ಯ ಈ ಸರಣಿಯಲ್ಲೇ ನಿರ್ಧಾರ?

Published : Dec 28, 2024, 07:59 AM IST
ಬಾಕ್ಸಿಂಗ್ ಡೇ ಟೆಸ್ಟ್: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಟೆಸ್ಟ್‌ ಭವಿಷ್ಯ ಈ ಸರಣಿಯಲ್ಲೇ ನಿರ್ಧಾರ?

ಸಾರಾಂಶ

ರೋಹಿತ್ ಶರ್ಮಾ ಅವರ ಟೆಸ್ಟ್ ಭವಿಷ್ಯ ಅತಂತ್ರದಲ್ಲಿದೆ. ಕಳಪೆ ಫಾರ್ಮ್ ನಿಂದಾಗಿ ಆಸ್ಟ್ರೇಲಿಯಾ ಸರಣಿಯ ನಂತರ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಸರಣಿಯಲ್ಲಿ ಕೇವಲ 22 ರನ್ ಗಳಿಸಿರುವ ಅವರು, ಆಯ್ಕೆ ಸಮಿತಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪದಿದ್ದರೆ, ಬಿಸಿಸಿಐ ನಿವೃತ್ತಿಗೆ ಒತ್ತಾಯಿಸಬಹುದು.

ಮೆಲ್ಬರ್ನ್‌: ಸತತ ಸೋಲು ಹಾಗೂ ಬ್ಯಾಟಿಂಗ್‌ನಲ್ಲಿ ತೀವ್ರ ವೈಫಲ್ಯ ಎದುರಿಸುತ್ತಿರುವ ಭಾರತದ ನಾಯಕ ರೋಹಿತ್‌ ಶರ್ಮಾರ ಟೆಸ್ಟ್‌ ಕ್ರಿಕೆಟ್‌ ಭವಿಷ್ಯ ಆಸ್ಟ್ರೇಲಿಯಾ ಸರಣಿಯಲ್ಲೇ ನಿರ್ಧಾರಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ರೋಹಿತ್‌ 2024-25ರ 8 ಟೆಸ್ಟ್‌ ಪಂದ್ಯಗಳಲ್ಲಿ 11.07ರ ಸರಾಸರಿಯಲ್ಲಿ ಕೇವಲ 155 ರನ್‌ ಗಳಿಸಿದ್ದಾರೆ. ಆಸೀಸ್‌ ಸರಣಿಯಲ್ಲಿ ಅವರು ಕೇವಲ 19 ರನ್ ಗಳಿಸಿದ್ದು, ಬ್ಯಾಟಿಂಗ್‌ ಜೊತೆ ನಾಯಕತ್ವದಲ್ಲೂ ವಿಫಲರಾಗುತ್ತಿದ್ದಾರೆ. ಹೀಗಾಗಿ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಸರಣಿ ಬಳಿಕ ರೋಹಿತ್‌ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.

ಬಾಕ್ಸಿಂಗ್ ಡೇ ಟೆಸ್ಟ್ ವಿವಾದ: ವಿರಾಟ್ ಕೊಹ್ಲಿ ಜೋಕರ್‌ ಪಟ್ಟ ಕಟ್ಟಿದ ಆಸೀಸ್‌ ಮಾಧ್ಯಮ!

ಒಂದು ವೇಳೆ ಭಾರತ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸದಿದ್ದರೆ, ಆಸೀಸ್‌ ಸರಣಿ ಬಳಿಕ ರೋಹಿತ್‌ಗೆ ನಿವೃತ್ತಿ ಘೋಷಿಸಲು ಬಿಸಿಸಿಐ ಸೂಚಿಸಬಹುದು ಎಂದು ಹೇಳಲಾಗುತ್ತಿದೆ. ಹೀಗಾದರೆ ಆಸೀಸ್‌ ವಿರುದ್ಧ 5ನೇ ಪಂದ್ಯ ಅವರ ಕೊನೆ ಟೆಸ್ಟ್‌ ಆಗಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಆಸ್ಟ್ರೇಲಿಯಾ ಸರಣಿಯಲ್ಲಿ ಬುಮ್ರಾಗೆ 25 ವಿಕೆಟ್‌, ರೋಹಿತ್‌ 22 ರನ್‌!

ಮೆಲ್ಬರ್ನ್‌: ಈ ಬಾರಿ ಆಸ್ಟ್ರೇಲಿಯಾ ಸರಣಿಯಲ್ಲಿ ರೋಹಿತ್‌ ಶರ್ಮಾ ಎಷ್ಟರ ಮಟ್ಟಿಗೆ ವೈಫಲ್ಯ ಅನುಭವಿಸಿದ್ದಾರೆಂದರೆ, ವೇಗಿ ಜಸ್‌ಪ್ರೀತ್‌ ಬೂಮ್ರಾ ಪಡೆದಿರುವ ವಿಕೆಟ್‌ಗಿಂತ ಕಡಿಮೆ ಸಂಖ್ಯೆಯ ರನ್‌ಗಳನ್ನು ರೋಹಿತ್‌ ಕಲೆಹಾಕಿದ್ದಾರೆ. ಬೂಮ್ರಾ ಸರಣಿಯಲ್ಲಿ 4ನೇ ಪಂದ್ಯವಾಡುತ್ತಿದ್ದು, ಒಟ್ಟು 25 ವಿಕೆಟ್‌ ಪಡೆದಿದ್ದಾರೆ. ರೋಹಿತ್‌ ಸರಣಿಯಲ್ಲಿ 3ನೇ ಟೆಸ್ಟ್‌ ಆಡುತ್ತಿದ್ದು, 4 ಇನ್ನಿಂಗ್ಸ್‌ಗಳಲ್ಲಿ ಕೇವಲ 22 ರನ್‌ ಗಳಿಸಿದ್ದಾರೆ. ಅವರು ಕ್ರಮವಾಗಿ 3, 6, 10, 3 ರನ್‌ ಗಳಿಸಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್: ಫಾಲೋ ಆನ್‌ ಭೀತಿಗೆ ಸಿಲುಕಿದ ಟೀಂ ಇಂಡಿಯಾ!

ರೋಹಿತ್‌ ಮತ್ತೆ ರುಸ್: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆ ಪಂದ್ಯದಲ್ಲಿ ತಂಡದ ನಾಯಕತ್ವ ವಹಿಸಿದ್ದ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಪರ್ತ್ ಟೆಸ್ಟ್‌ನಲ್ಲಿ ಗೆಲುವು ತಂದುಕೊಟ್ಟಿದ್ದರು. ಇನ್ನು ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ಗೆ ರೋಹಿತ್ ಶರ್ಮಾ ಭಾರತ ತಂಡವನ್ನು ಕೂಡಿಕೊಂಡಿದ್ದರು. ಆದರೆ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತ ತಂಡವು 10 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿತ್ತು. ಇನ್ನು ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಪ್ರಯಾಸದ ಡ್ರಾ ಮಾಡಿಕೊಂಡಿತ್ತು. ಎರಡು ಹಾಗೂ ಮೂರನೇ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದರಾದರೂ ಬ್ಯಾಟಿಂಗ್‌ನಲ್ಲಿ ವೈಪಲ್ಯ ಅನುಭವಿಸಿದ್ದರು. ದೀರ್ಘ ಕಾಲದಿಂದ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಈ ಪಂದ್ಯದಲ್ಲೂ ಠುಸ್ ಆದರು. ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಅಗ್ರಕ್ರಮಾಂಕದಲ್ಲಿ ಆಡಿದ ಅವರು ಕೇವಲ 3 ರನ್‌ಗೆ ವಿಕೆಟ್ ಒಪ್ಪಿಸಿದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್