ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಸ್ಯಾಮ್ ಕಾನ್‌ಸ್ಟಾಸ್‌ಗೆ ಭುಜ ತಾಗಿಸಿದ ಘಟನೆಗೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾ ಮಾಧ್ಯಮವೊಂದು 'ಜೋಕರ್' ಎಂದು ಕರೆದು ಅವಹೇಳನ ಮಾಡಿದೆ. ಕೊಹ್ಲಿಗೆ ಐಸಿಸಿ ದಂಡ ವಿಧಿಸಿದ್ದು, ಕಾನ್‌ಸ್ಟಾಸ್‌ಗೆ ಕೊಹ್ಲಿಯೇ ನೆಚ್ಚಿನ ಆಟಗಾರ ಎಂಬುದು ವಿಪರ್ಯಾಸ.
ಮೆಲ್ಬರ್ನ್: ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಸ್ಯಾಮ್ ಕಾನ್‌ಸ್ಟಾಸ್‌ಗೆ ಭುಜ ತಾಗಿಸಿದ ಘಟನೆಗೆ ಸಂಬಂಧಿಸಿದಂತೆ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾ ಮಾಧ್ಯಮವೊಂದು ಜೋಕರ್ ಎಂದು ಕರೆದು ಅವಹೇಳನ ಮಾಡಿದೆ.
ಶುಕ್ರವಾರದ ‘ದಿ ವೆಸ್ಟ್ ಆಸ್ಟ್ರೇಲಿಯನ್’ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿಯ ಫೋಟೋಗೆ ಜೋಕರ್ ರೀತಿ ಮೂಗನ್ನು ಜೋಡಿಸಲಾಗಿದೆ. ಅಲ್ಲದೆ ಜೋಕರ್ ಕೊಹ್ಲಿ ಎಂದು ದೊಡ್ಡದಾಗಿ ಬರೆಯಲಾಗಿದೆ. ಇದರ ಕೆಳಗೆ 19 ವರ್ಷದ ಕಾನ್‌ಸ್ಟಾಸ್‌ಗೆ ಕೊಹ್ಲಿ ಭುಜ ತಾಗಿಸಿದ ಘಟನೆಯನ್ನೂ ಉಲ್ಲೇಖಿಸಲಾಗಿದೆ. ಈ ಬಗ್ಗೆ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ, ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
An Australian Newspaper showed Virat Kohli as a clown pic.twitter.com/AuTX15qKPo
— CricFit (@CricFit)undefined
ಈ ಬಾರಿ ಸರಣಿಗೂ ಮುನ್ನ ಕೊಹ್ಲಿ ಬಗ್ಗೆ ಆಸ್ಟ್ರೇಲಿಯಾದ ಬಹುತೇಕ ಮಾಧ್ಯಮಗಳು ಕಿಂಗ್, ರನ್ ಮೆಷಿನ್ ಎಂದು ವರದಿಗಳನ್ನು ಪ್ರಕಟಿಸಿದ್ದವು.
ಸ್ಯಾಮ್ ಕಾನ್ಸ್‌ಟಾಸ್ ಜೊತೆ ಕಿರಿಕ್, ಕೊಹ್ಲಿಗೆ ಭಾರೀ ದಂಡ ವಿಧಿಸಿದ ಐಸಿಸಿ!
ಕಾನ್‌ಸ್ಟಾಸ್ ಭುಜಕ್ಕೆ ಡಿಕ್ಕಿ ಹೊಡೆದ ಕೊಹ್ಲಿಗೆ ₹3 ಲಕ್ಷ ದಂಡ!
ಮೆಲ್ಬರ್ನ್: 4ನೇ ಟೆಸ್ಟ್‌ನ ಮೊದಲ ದಿನ ಅಬ್ಬರದ ಆಟವಾಡುತ್ತಿದ್ದ ಆಸ್ಟ್ರೇಲಿಯಾದ 19 ವರ್ಷದ ಯುವ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾಸ್‌ರನ್ನು ಕೆಣಕಿದ ವಿರಾಟ್ ಕೊಹ್ಲಿ, ಆತನ ಭುಜಕ್ಕೆ ಡಿಕ್ಕಿ ಹೊಡೆದ ಘಟನೆ ನಡೆಯಿತು.
10ನೇ ಓವರ್ ವೇಳೆ ಕ್ರೀಸ್ ಬಳಿ ಕಾನ್‌ಸ್ಟಾಸ್ ನಡೆದುಕೊಂಡು ಹೋಗುತ್ತಿದ್ದಾಗ ಕೊಹ್ಲಿ ಭುಜ ತಾಗಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಇಬ್ಬರನ್ನು ಮತ್ತೋರ್ವ ಬ್ಯಾಟರ್ ಖವಾಜ ಹಾಗೂ ಅಂಪೈರ್‌ಗಳು ಸಮಾಧಾನ ಪಡಿಸಿದರು.
ಬಾಕ್ಸಿಂಗ್ ಡೇ ಟೆಸ್ಟ್: ಫಾಲೋ ಆನ್ ಭೀತಿಗೆ ಸಿಲುಕಿದ ಟೀಂ ಇಂಡಿಯಾ!
ಕೊಹ್ಲಿ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ, ಪಂದ್ಯದ ಸಂಭಾವನೆಯ ಶೇ.20ರಷ್ಟು(₹3 ಲಕ್ಷ ) ದಂಡ ವಿಧಿಸಿ, 1 ಋಣಾತ್ಮಕ ಅಂಕ ನೀಡಿದೆ. ಇದು 2019ರ ಬಳಿಕ ಕೊಹ್ಲಿ ಸಿಕ್ಕ ಮೊದಲ ಋಣಾತ್ಮಕ ಅಂಕ. 2 ವರ್ಷದ ಅವಧಿಯಲ್ಲಿ 4 ಋಣಾತ್ಮಕ ಅಂಕ ಲಭಿಸಿದರೆ, ಅವರಿಗೆ ಒಂದು ಪಂದ್ಯ ನಿಷೇಧ ಹೇರಲಾಗುತ್ತದೆ.
ಕಾನ್‌ಸ್ಟಾಸ್‌ರ ನೆಚ್ಚಿನ ಕ್ರಿಕೆಟಿಗ ವಿರಾಟ್!
ಕಾನ್‌ಸ್ಟಾಸ್‌ಗೆ ಕೊಹ್ಲಿಯೇ ತಮ್ಮ ನೆಚ್ಚಿನ ಆಟಗಾರ. ನಿಮ್ಮ ಮೊಬೈಲ್‌ಗೆ ಯಾವುದಾದರೂ 3 ಜನ ಸಂದೇಶ ಕಳುಹಿಸುವುದಾದರೆ ಅವರು ಯಾರಾಗಿರಲು ಬಯಸುತ್ತೀರಿ ಎಂದು ಇತ್ತೀಚೆಗಷ್ಟೇಕಾನ್‌ಸ್ಟಾಸ್‌ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಕಾನ್‌ಸ್ಟಾಸ್, ‘ಶೇನ್ ವಾಟ್ಸನ್, ತಮ್ಮ ತಂದೆ ಹಾಗೂ ವಿರಾಟ್ ಕೊಹ್ಲಿ’ ಎಂದು ಉತ್ತರಿಸಿದ್ದರು. ಅಲ್ಲದೆ, ಭಾರತೀಯರಲ್ಲಿ ನಿಮ್ಮ ನೆಚ್ಚಿನ ಆಟಗಾರ ಯಾರು ಎಂದು ಪ್ರಶ್ನಿಸಿದ್ದಕ್ಕೂ, ಕೊಹ್ಲಿ ಎಂದೆ ಕಾನ್‌ಸ್ಟಾಸ್ ಉತ್ತರ ನೀಡಿದ್ದರು.