ಭಾರತ ಮಹಿಳಾ ತಂಡಕ್ಕೆ 3 ವರ್ಷಗಳ ಬಳಿಕ ಟೆಸ್ಟ್‌: ಇಂಗ್ಲೆಂಡ್ ಎದುರು ಆರಂಭಿಕ ಆಘಾತ

By Naveen Kodase  |  First Published Dec 14, 2023, 10:34 AM IST

ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಸ್ಮೃತಿ ಮಂಧನಾ ಸ್ಪೋಟಕ ಆರಂಭ ಒದಗಿಸುವ ಯತ್ನದಲ್ಲಿ ವಿಕೆಟ್ ಕೈಚೆಲ್ಲಿದರು. ಮಂಧನಾ ಕೇವಲ 12 ಎಸೆತಗಳಲ್ಲಿ ಮೂರು ಬೌಂಡರಿ ಸಹಿತ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆಟಗಾರ್ತಿ ಶಫಾಲಿ ವರ್ಮಾ ಬ್ಯಾಟಿಂಗ್ ಕೇವಲ 19 ರನ್‌ಗಳಿಗೆ ಸೀಮಿತವಾಯಿತು.


ನವಿ ಮುಂಬೈ(ಡಿ.14): 2021ರ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಪಂದ್ಯವೊಂದನ್ನು ಆಡಿದ್ದ ಭಾರತ ಮಹಿಳಾ ಕ್ರಿಕೆಟ್‌ ತಂಡ, 3 ವರ್ಷಗಳ ಬಳಿಕ ಮತ್ತೊಮ್ಮೆ ಕ್ರಿಕೆಟ್‌ನ ಸಾಂಪ್ರಾದಾಯಿಕ ಮಾದರಿಯಲ್ಲಿ ಕಣಕ್ಕಿಳಿದಿದೆ. ಇಲ್ಲಿನ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ಗುರುವಾರದಿಂದ ಇಂಗ್ಲೆಂಡ್‌ ವಿರುದ್ಧದ ಏಕೈಕ ಟೆಸ್ಟ್‌ (4 ದಿನಗಳ ಪಂದ್ಯ) ಆರಂಭಗೊಂಡಿದ್ದು, ಇದೇ ಮೊದಲ ಬಾರಿಗೆ ಹರ್ಮನ್‌ಪ್ರೀತ್‌ ಕೌರ್‌ ಈ ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದು ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾರತ 50 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದಾರೆ.

ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಸ್ಮೃತಿ ಮಂಧನಾ ಸ್ಪೋಟಕ ಆರಂಭ ಒದಗಿಸುವ ಯತ್ನದಲ್ಲಿ ವಿಕೆಟ್ ಕೈಚೆಲ್ಲಿದರು. ಮಂಧನಾ ಕೇವಲ 12 ಎಸೆತಗಳಲ್ಲಿ ಮೂರು ಬೌಂಡರಿ ಸಹಿತ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆಟಗಾರ್ತಿ ಶಫಾಲಿ ವರ್ಮಾ ಬ್ಯಾಟಿಂಗ್ ಕೇವಲ 19 ರನ್‌ಗಳಿಗೆ ಸೀಮಿತವಾಯಿತು. ಭಾರತ ತಂಡ 47 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಸದ್ಯ 11 ಓವರ್ ಅಂತ್ಯದ ವೇಳೆಗೆ ಭಾರತ 2 ವಿಕೆಟ್ ಕಳೆದುಕೊಂಡು 56 ರನ್ ಬಾರಿಸಿದ್ದು, ಶುಭ ಸತೀಷ್(18) ಹಾಗೂ ಜೆಮಿಯಾ ರೋಡ್ರಿಗ್ಸ್‌(01) ಕ್ರೀಸ್‌ನಲ್ಲಿದ್ದಾರೆ.

Latest Videos

undefined

KCC ಕ್ರಿಕೆಟ್ ಟೂರ್ನಿಗೂ ಮುನ್ನ ಕಿಚ್ಚ ಸುದೀಪ್‌ಗೆ ಖಡಕ್ ವಾರ್ನಿಂಗ್ ಕೊಟ್ಟ ರಾಬಿನ್ ಉತ್ತಪ್ಪ..!

ಇಂಗ್ಲೆಂಡ್ ಎದುರು ಭಾರತ ಉತ್ತಮ ಟ್ರ್ಯಾಕ್ ರೆಕಾರ್ಡ್:

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ನಲ್ಲಿ ಭಾರತ ಅತ್ಯುತ್ತಮ ದಾಖಲೆ ಹೊಂದಿದ್ದು, 1986ರಿಂದ ಈ ವರೆಗೂ ಆಡಿರುವ 14 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಸೋತಿದೆ. ಭಾರತ ತನ್ನ ಸ್ಪಿನ್‌ ದಾಳಿಯ ಮೂಲಕ ಇಂಗ್ಲೆಂಡ್‌ ವಿರುದ್ದದ ದಾಖಲೆಯನ್ನು ಮುಂದುವರಿಸಲು ಎದುರು ನೋಡುತ್ತಿದೆ. ಉಭಯ ತಂಡಗಳು ಕೊನೆಯ ಬಾರಿಗೆ 2021ರ ಜೂನ್‌ನಲ್ಲ ಬ್ರಿಸ್ಟಲ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.

ಕರ್ನಾಟಕದ ಯುವ ಆರಂಭಿಕ ಆಟಗಾರ್ತಿ ಶುಭಾ ಸತೀಶ್‌ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಹಿರಿಯ ಸ್ಪಿನ್ನರ್‌ ರಾಜೇಶ್ವರಿ ಗಾಯಕ್ವಾಡ್‌ ಸಹ ತಂಡದಲ್ಲಿದ್ದಾರೆ. ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್‌, ದೀಪ್ತಿ ಶರ್ಮಾರಂತಹ ಅನುಭವಿಗಳ ಬಲ ಭಾರತಕ್ಕಿದೆ.

ನೇರ ಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ

click me!