ಏಷ್ಯಾಕಪ್ 2026 ಮಹಿಳಾ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ, ಕನ್ನಡಿಗರಿಗೆ ಇದೆಯಾ ಸ್ಥಾನ?

Published : Aug 02, 2026, 08:05 PM IST
India Women

ಸಾರಾಂಶ

ಏಷ್ಯಾಕಪ್ 2026ರ ಮಹಿಳಾ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ? ಕನ್ನಡತಿ ಶ್ರೇಯಾಂಕ ಪಾಟೀಲ್‌ಗೆ ಸ್ಥಾನವಿದೆಯಾ?

ನವದೆಹಲಿ (ಆ.02) ಬಹುನಿರೀಕ್ಷಿತ ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. ಹರ್ಮನ್ ಪ್ರೀತ್ ನಾಯಕತ್ವದ ಮಹಿಳಾ ತಂಡದಲ್ಲಿ ಹಲವು ಬದಲಾವಣೆಗಳಾಗಿದೆ. 18 ವರ್ಷದ ಜಿ ಕಮಲಿನಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಯಾಸ್ತಿಕಾ ಭಾಟಿಯಾ ತಂಡದಿಂದ ಹೊರಬಿದ್ದಿದ್ದಾರೆ. ಲಾರ್ಡ್ಸ್ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ ಯಾಸ್ತಿಕಾ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಚೇತರಿಸಿಕೊಳ್ಳದ ಶ್ರೇಯಾಂಕಾ ಪಾಟೀಲ್‌ಗೆ ನಿರಾಸೆ

ಶ್ರೇಯಾಂಕ ಪಾಟೀಲ್ ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಗಾಯಗೊಂಡು ಹೊರಬಿದ್ದ ಬಳಿಕ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಏಷ್ಯಾಕಪ್ ಟೂರ್ನಿಯಿಂದ ಶ್ರೇಯಾಂಕಾ ಪಾಟೀಲ್ ಕೈಬಿಡಲಾಗಿದೆ. ಏಷ್ಯನ್ ಗೇಮ್ಸ್‌ಗೆ ಆಯ್ಕೆ ಮಾಡಿದ ತಂಡದಲ್ಲಿ ಶ್ರೇಯಾಂಕ ಪಾಟೀಲ್ ಆಯ್ಕೆಯಾಗಿದ್ದರು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡದಿಂದ ಹೊರಬಿದ್ದ ಶ್ರೇಯಾಂಕಾ ಪಾಟೀಲ್ ಬದಲು ಲೆಗ್ ಸ್ಪಿನ್ ಆಲ್ರೌಂಡರ್ ಪ್ರೇಮಾ ರಾವತ್ ಸ್ಥಾನ ಪಡೆದಿದ್ದರು.ಇದೀಗ ಏಷ್ಯಾಕಪ್ ಟೂರ್ನಿಯಲ್ಲಿ ಶ್ರೇಯಾಂಕ ಬದಲು ಪ್ರೇಮಾ ರಾವತ್ ಸ್ಥಾನ ಪಡೆದಿದ್ದಾರೆ.

ಏಷ್ಯಾಕಪ್ ಮಹಿಳಾ ಟೂರ್ನಿಗೆ ಭಾರತ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನಾ, ಶೆಫಾಲಿ ವರ್ಮಾ, ಜೇಮಿಯ ರೋಡ್ರಿಗಸ್, ಭಾರತಿ ಫುಲ್ಮಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಜಿ ಕಮಲಿನಿ, ಅರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ಶಅರೀ ಚರ್ನಿ, ರೇನುಕಾ ಛಠಾಕೂರ್, ನಂದಿನಿ ಶರ್ಮಾ, ಕ್ರಾಂತಿ ಗೌಡ್

ಮೀಸಲು ಪ್ಲೇಯರ್ಸ್

ಪ್ರತಿಕಾ ರಾವಲ್, ಉಮಾ ಚೆಟ್ರಿ, ವೈಶ್ನವಿ ಶರ್ಮಾ, ಸಯಾಲಿ ಸಾಟ್ಘಾರೆ, ಮಿನ್ನು ಮಣಿ

ಯಾವಾಗ ಮಹಿಳಾ ಏಷ್ಯಾಕಪ್ ಟೂರ್ನಿ

ಮಹಿಳಾ ಏಷ್ಯಕಪ್ ಟೂರ್ನಿ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಆಗಸ್ಟ್ ತಿಂಗಳ ಅಂತ್ಯದಿಂದ ಸೆಪ್ಟೆಂಬರ್ ಮೊದಲೆರಡು ವಾರಗಳಲ್ಲಿ ನಡೆಯಲಿದೆ. ಏಷ್ಯಾಕಪ್ ಟೂರ್ನಿ ಭಾರತ ತಂಡದಕ್ಕೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ತಯಾರಿಗೆ ಪ್ರಮುಖವಾಗಿದೆ. ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 17 ರಿಂದ 22ರ ವರೆಗೆ ನಡೆಯಲಿದೆ.

ಸದ್ಯ ಭಾರತ ಮಹಿಳಾ ತಂಡದ ಪ್ರಮುಖ ಆಟಗಾರ್ತಿಯರು ಇಂಗ್ಲೆಂಡ್‌ನಲ್ಲಿನ ದಿ ಹಂಡ್ರೆಡ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಸ್ಮೃತಿ ಮಂಧನಾ, ಜೇಮಿಯ ರೋಡ್ರಿಗಸ್, ದೀಪ್ತಿ ಶರ್ಮಾ ಹಾಗೂ ರಿಚಾ ಘೋಷ್ ಫ್ರಾಂಚೈಸಿ ಲೀಗ್ ಟೂರ್ನಿಯಲ್ಲಿ ಬ್ಯೂಸಿಯಾಗಿದ್ದಾರೆ. ಏಷ್ಯಾಕಪ್ ಮೂಲಕ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ಮರಳಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟೀಂ ಇಂಡಿಯಾದ ಈ ಅಪರೂಪದ T20I ದಾಖಲೆ ಇನ್ನೂ ಅವರ ಹೆಸರಲ್ಲೇ
ಲಂಕಾ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದಲ್ಲಿ ತಳಮಳ, ಸ್ಟಾರ್ ಕ್ರಿಕೆಟಿಗ ಔಟ್