ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಜಿಂಕ್ಯ ರಹಾನೆಗೆ ಬಿಸಿಸಿಐನಿಂದ ಪ್ರತಿ ತಿಂಗಳು ಸಿಗುವ ಪೆನ್ಷನ್ ಎಷ್ಟು?

Published : Aug 02, 2026, 12:04 PM IST
Ajinkya Rahane

ಸಾರಾಂಶ

ಟೀಂ ಇಂಡಿಯಾದ ಅನುಭವಿ ಕ್ರಿಕೆಟಿಗ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ, 85 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು ಬಿಸಿಸಿಐನ ಪರಿಷ್ಕೃತ ಪಿಂಚಣಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ₹70,000 ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ.

ಬೆಂಗಳೂರು: ವಿದೇಶಿ ನೆಲಗಳಲ್ಲಿ ದಿಟ್ಟ ಹೋರಾಟ ತೋರುತ್ತಿದ್ದ ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಅಜಿಂಕ್ಯ ರಹಾನೆ ಇತ್ತೀಚೆಗಷ್ಟೇ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಕಳೆದ ಜುಲೈ 30ರಂದು ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಾಕುವ ಮೂಲಕ ತಮ್ಮ ವರ್ಣರಂಜಿತ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ರಹಾನೆ ಗುಡ್ ಬೈ ಹೇಳಿದ್ದರು.

2020-21ನೇ ಸಾಲಿನ ಆಸೀಸ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕನಾಗಿ ಅಜಿಂಕ್ಯ ರಹಾನೆ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿದ್ದು, ಅಪ್ಪಟ ಕ್ರಿಕೆಟ್ ಅಭಿಮಾನಿಗಳಿ ಮರೆಯಲು ಸಾಧ್ಯವೇ ಇಲ್ಲ. ರಾಹುಲ್ ದ್ರಾವಿಡ್, ವಿವಿಎಸ್‌ ಲಕ್ಷ್ಮಣ್ ಬಳಿಕ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ನಂಬಿಗಸ್ಥ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಎನಿಸಿಕೊಂಡಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಅಜಿಂಕ್ಯ ರಹಾನೆ ಬಿಸಿಸಿಐನಿಂದ ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಪಿಂಚಣಿ ಮೊತ್ತ ಹೆಚ್ಚಿಸಿರುವ ಬಿಸಿಸಿಐ!

2022ರಲ್ಲಿ ಬಿಸಿಸಿಐ ತಮ್ಮ ಮಾಜಿ ಆಟಗಾರರಿಗೆ ನೀಡಲಾಗುತ್ತಿದ್ದ ಪಿಂಚಣಿ ಮೊತ್ತವನ್ನು ಪರಿಷ್ಕರಿಸಲಾಗಿದ್ದು, ಪಿಂಚಣಿ ಮೊತ್ತವನ್ನು ಹೆಚ್ಚಿಸಿದೆ. ಭಾರತ ಪರ 85 ಟೆಸ್ಟ್ ಪಂದ್ಯಗಳನ್ನಾಡಿರುವ ಅಜಿಂಕ್ಯ ರಹಾನೆ ಬಿಸಿಸಿಐನಿಂದ ಟಾಪ್ ಸ್ಲಾಟ್‌ನ ಪಿಂಚಣಿ ಪಡೆಯುವ ಆಟಗಾರರ ಶ್ರೇಣಿಯಲ್ಲಿದ್ದಾರೆ. ಈ ಮೊದಲು ಟಾಪ್ ಸ್ಲಾಟ್‌ನಲ್ಲಿರುವ ಆಟಗಾರರು ಪ್ರತಿ ತಿಂಗಳು 50 ಸಾವಿರ ರುಪಾಯಿ ಬಿಸಿಸಿಐನಿಂದ ಪಿಂಚಣಿ ಪಡೆಯುತ್ತಿದ್ದರು. 2022ರಿಂದೀಚೆಗೆ ಆ ಆಟಗಾರರು ಪ್ರತಿ ತಿಂಗಳು ₹70,000 ಪಿಂಚಣಿ ಪಡೆಯಲಿದ್ದಾರೆ.

ಅಜಿಂಕ್ಯ ರಹಾನೆಗೆ ಬಿಸಿಸಿಐನಿಂದ ಪ್ರತಿ ತಿಂಗಳು ಸಿಗುವ ಪೆನ್ಷನ್ ಎಷ್ಟು?

ಜಗತ್ತಿನ ಶ್ರೀಮಂತ ಕ್ರಿಕೆಟ್ ಬೋರ್ಡ್ ಎಂದು ಕರೆಸಿಕೊಳ್ಳುವ ಬಿಸಿಸಿಐ, ಇದೀಗ ಮಾಜಿ ಆಟಗಾರರ ಕ್ಷೇಮಾಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಕೈತುಂಬಾ ಪಿಂಚಣಿ ನೀಡುತ್ತಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ಮಾಜಿ ಆಟಗಾರರ ಪಿಂಚಣಿ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದ್ದರು. ಇದೀಗ ಭಾರತ ಪರ 80ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿರುವ ರಹಾನೆ ಪ್ರತಿ ತಿಂಗಳು 70,000 ರುಪಾಯಿ ಪೆನ್ಷನ್ ಜೇಬಿಗಿಳಿಸಿಕೊಳ್ಳಲಿದ್ದಾರೆ.

ಬಿಸಿಸಿಐ ಹೊಸ ಪೆನ್ಷನ್‌ ವಿಭಾಗ ಹೇಗಿದೆ?

ಭಾರತ ಪರ 25ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿರುವ ಆಟಗಾರರಿಗೆ ಗರಿಷ್ಠ ತಿಂಗಳಿಗೆ 70,000 ರುಪಾಯಿ ಪಿಂಚಣಿ ಪಡೆಯುತ್ತಾರೆ. ಇನ್ನು 25ರಿಂದ 49 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಕ್ರಿಕೆಟಿಗರು ತಿಂಗಳಿಗೆ 30,000 ರುಪಾಯಿ ಹಾಗೂ 75+ ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಕ್ರಿಕೆಟಿಗರು ತಿಂಗಳಿಗೆ 45,000 ರುಪಾಯಿ ಪಿಂಚಣಿ ಪಡೆಯುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: ಬಾತ್‌ರೂಮ್‌ಗೆ ಹೋಗಿ ಬಿಕ್ಕಿ ಬಿಕ್ಕಿ ಅಳ್ತೀನಿ!; ಕಣ್ಣೀರಿಡುತ್ತಲೇ ಮನದಾಳದ ಸತ್ಯ ಒಪ್ಪಿಕೊಂಡ ಸ್ಮೃತಿ ಮಂಧನಾ
Cricket: ಬೀದಿಯಲ್ಲಿದ್ದವನನ್ನು ಬೆಳೆಸಿ ಕ್ರಿಕೆಟ್ ಹೀರೋ ಮಾಡಿದ; ಕೊನೆಗೆ ಅದೇ ಆಟಗಾರನಿಂದ ಸಿಕ್ಕಿದ್ದೇನು ಗೊತ್ತಾ?