
ಕೋಲ್ಕತಾ(ಫೆ.20); ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಕ್ಲೀನ್ ಸ್ವೀಪ್ ಬಳಿಕ ಇದೀಗ 3 ಪಂದ್ಯಗಳ ಟಿ20 ಸರಣಿಯಲ್ಲೂ ಕ್ಲೀನ್ ಸ್ವೀಪ್ ಗೆಲುವ ಸಾಧಿಸಿದೆ. ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಟೀಂ ಇಂಡಿಯಾ ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಿಂದ ಕೈವಶ ಮಾಡಿದೆ.
185 ರನ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭದಲ್ಲೇ ಟೀಂ ಇಂಡಿಯಾ ಶಾಕ್ ನೀಡಿತು. ಆರಂಭಿಕರಾದ ಕೈಲ್ ಮೇಯರ್ಸ್, ಶೈ ಹೋಪ್ ಜೊತೆಯಾಟ ಕೇವಲ 6 ರನ್‌ಗೆ ಅಂತ್ಯವಾಯಿತು. ಮೇಯರ್ಸ್ 6 ರನ್ ಸಿಡಿಸಿದರೆ ಇತ್ತ ಶೈ ಹೋಪ್ 8 ರನ್ ಸಿಡಿಸಿ ಔಟಾದರು. ಕುಸಿದ ತಂಡಕ್ಕೆ ನಿಕೋಲಸ್ ಪೂರನ್ ಆಸರೆಯಾದರು.
IPL 2022: ಐಪಿಎಲ್ ಟೂರ್ನಿಯು ಈ ದಿನಾಂಕದಿಂದ 6 ಸ್ಟೇಡಿಯಂನಲ್ಲಿ ಆರಂಭ..?
ಪೂರನ್‌ಗೆ ರೋವ್ಮೆನ್ ಪೊವೆಲ್ ಉತ್ತಮ ಸಾಥ್ ನೀಡಿದರು. ಪೊವೆಲ್ 14 ಎಸೆತದಲ್ಲಿ 25 ರನ್ ಸಿಡಿಸಿ ಔಟಾದರು. ಪೂರನ ಹೋರಾಟ ಮುಂದುವರಿಸಿದರು. ಆದರೆ ನಾಯಕ ಕೀರನ್ ಪೊಲಾರ್ಡ್ ಕೇವಲ 5 ರನ್ ಸಿಡಿಸಿ ಔಟಾದರು. ಇತ್ತ ಜೇಸನ್ ಹೋಲ್ಡರ್ ಕೇವಲ 2 ರನ್ ಸಿಡಿಸಿ ಔಟಾದರು.
ರೋಸ್ಟನ್ ಚೇಸ್ 12 ರನ್ ಸಿಡಿಸಿ ನಿರ್ಗಮಿಸಿದರು. ದೀಪಕ್ ಚಹಾ್, ವೆಂಕಟೇಶ್ ಅಯ್ಯರ್ ಹಾಗೂ ಹರ್ಷಲ್ ಪಟೇಲ್ ಮಿಂಚಿನ ದಾಳಿಯಿಂದ ವೆಸ್ಟ್ ಇಂಡೀಸ್ ರನ್ ಚೇಸಿಂಗ್ ಮತ್ತಷ್ಟು ಕಠಿಣವಾಯಿತು. ಆದರೆ ಪೂರನ್ ಏಕಾಂಗಿ ಹೋರಾಟ ಮುಂದುವರಿಯಿತು.
ದಿಟ್ಟ ಹೋರಾಟ ನೀಡಿದ ಪೂರನ್ ಆಕರ್ಷಕ ಅರ್ಧಶತಕ ಸಿಡಿಸಿದರು. ಇತ್ತ ಪೂರನ್‌ಗೆ ರೋಮಾರಿಯೋ ಶೆಫರ್ಡ್ ಉತ್ತಮ ಸಾಥ್ ನೀಡಿದರು. ಪಂದ್ಯ ರೋಚಕ ಘಟ್ಟ ತಲುಪತ್ತಿದ್ದಂತೆ ಪೂರನ್ ವಿಕೆಟ್ ಪತನಗೊಂಡಿತು. ಪೂರನ್ 61 ರನ್ ಸಿಡಿಸಿ ಔಟಾದರು. ಇದು ಪಂದ್ಯದ ಗತಿಯನ್ನು ಬದಲಿಸಿತು. ವೆಸ್ಟ್ ಇಂಡೀಸ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 31 ರನ್ ಅವಶ್ಯಕತೆ ಇತ್ತು.
Indi vs Sri Lanka Series : ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ ನಾಯಕ, ಬುಮ್ರಾ ಉಪನಾಯಕ!
ಇದರ ನಡುವೆ ಶೆಫರ್ಡ್ 29 ರನ್ ಸಿಡಿಸಿ ಔಟಾದರು. ಇದರೊಂದಿಗೆ ವಿಂಡೀಸ್ ಸೋಲಿನ ಸುಳಿಗೆ ಸಿಲುಕಿತು. ಅಂತಿಮ ಹಂತದಲ್ಲಿ ವೆಸ್ಟ್ ಇಂಡೀಸ್ 9 ವಿಕೆಟ್ ನಷ್ಟಕ್ಕೆ 167 ರನ್ ಸಿಡಿಸಿತು . ಇದರೊಂದಿಗೆ ಟೀಂ ಇಂಡಿಯಾ 17 ರನ್ ಗೆಲುವು ಕಂಡಿತು. ಸರಣಿ 3-0 ಅಂತರದಲ್ಲಿ ಕೈವಶವಾಯಿತು.
ಭಾರತದ ಇನ್ನಿಂಗ್ಸ್:
ಬ್ಯಾಟಿಂಗ್ ಆರ್ಡರ್‌ನಲ್ಲಿ ಕೆಲ ಬದಲಾವಣೆ ಮಾಡಿದ ಟೀಂ ಇಂಡಿಯಾಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಕೆಳಕ್ರಮಾಂದಲ್ಲಿ ಆಡಿದರೆ ರುತುರಾಜ್ ಗಾಯಕ್ವಾಡ್‌ಗೆ ಆರಂಭಿಕ ಸ್ಥಾನ ನೀಡಲಾಗಿತ್ತು. ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಜೊತೆಯಾಟದಿಂದ ಕೇವಲ 10 ರನ್ ಮಾತ್ರ ಹರಿದುಬಂತು. ಗಾಯಕ್ವಾಡ್ 4 ರನ್ ಸಿಡಿಸಿ ಔಟಾದರು. ಇತ್ತ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಜೊತೆಯಾಟ ತಂಡಕ್ಕೆ ನೆರವಾಯಿತು. ಈ ಜೋಡಿ 53 ರನ್ ಜೊತೆಯಾಟ ನೀಡಿತು.
ಶ್ರೇಯಸ್ ಅಯ್ಯರ್ 25 ರನ್ ಕಾಣಿಕೆ ನೀಡಿದರೆ, ಇಶಾನ್ ಕಿಶನ್ 34 ರನ್ ಕಾಣಿಕೆ ನೀಡಿದರು. ಆರಂಭಿಕ ಸ್ಥಾನ ಬಿಟ್ಟುಕೊಟ್ಟು ಕಳೆಕ್ರಮಾಂಕದಲ್ಲಿ ಆಡಿದ ರೋಹಿತ್ ಶರ್ಮಾ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಆದರೆ ಸೂರ್ಯಕುಮಾರ್ ಯಾದವ್ ಹಾಗೂ ವೆಂಕಟೇಶ್ ಅಯ್ಯರ್ ಹೋರಾಟ ಟೀಂ ಇಂಡಿಯಾಗೆ ಬೃಹತ್ ಮೊತ್ತ ತಂದುಕೊಟ್ಟಿತು.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ 31 ಎಸೆತದಲ್ಲಿ 65 ರನ್ ಸಿಡಿಸಿ ಔಟಾದರು. ವೆಂಕಟೇಶ್ ಅಯ್ಯರ್ ಅಜೇಯ 35 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 184 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.