IND vs SL: ಎರಡನೇ ಪಂದ್ಯದಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ: ಸರಣಿ ಕೈವಶದತ್ತ ಟೀಂ ಇಂಡಿಯಾ..!

By BK AshwinFirst Published Jan 12, 2023, 1:27 PM IST
Highlights

ಈಗಾಗಲೇ ಮೊದಲ ಪಂದ್ಯದಲ್ಲಿ ಗೆಲುವಿನ ಆರಂಭ ಮಾಡಿದ್ದು, ಈ ಪಂದ್ಯದಲ್ಲಿ ಸಹ ಗೆಲ್ಲುವ ಮೂಲಕ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ ಟೀಂ ಇಂಡಿಯಾ.
 

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಶುನ್ ಶನಕ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಇನ್ನು ಕೇವಲ 10 ತಿಂಗಳಿನಲ್ಲಿ ತವರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ದತೆ ಆರಂಭಿಸಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಮೊದಲ ಪಂದ್ಯದಲ್ಲಿ ಗೆಲುವಿನ ಆರಂಭ ಮಾಡಿದ್ದು, ಈ ಪಂದ್ಯದಲ್ಲಿ ಸಹ ಗೆಲ್ಲುವ ಮೂಲಕ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ. 

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ನಲ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಭಾರತ ಆತಿಥ್ಯವನ್ನು ವಹಿಸಿದೆ. ಟೀಂ ಇಂಡಿಯಾ ತನ್ನ ಅಂತಿಮ ಹನ್ನೊಂದರ ತಂಡದಲ್ಲಿ ಒಂದು ಬದಲಾವಣೆ ಮಾಡಿದೆ. ಯಜುವೇಂದ್ರ ಚಾಹಲ್‌ ಗಾಯಗೊಂಡಿದ್ದು, ಅವರ ಬದಲು ಕುಲದೀಪ್‌ ಯಾದವ್‌ ಸ್ಥಾನ ಪಡೆದುಕೊಂಡಿದ್ದಾರೆ. 

ಇದನ್ನು ಓದಿ: ಮಿಷನ್‌ 2023: ಇಂದಿನಿಂದ ಭಾರತ ತಯಾರಿ, ಇಂಡೋ-ಲಂಕಾ ಮೊದಲ ಒನ್‌ಡೇ ಕದನ

Sri Lanka have opted to bat at the Eden Gardens 🏏 | 📝: https://t.co/q1Pjk60ZeG pic.twitter.com/cvuShi3Cxe

— ICC (@ICC)

ಅಂತಿಮ 11 ಆಟಗಾರರ ಪಟ್ಟಿ
ಭಾರತ: ರೋಹಿತ್‌ ಶರ್ಮಾ (ನಾಯಕ), ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆ. ಎಲ್‌. ರಾಹುಲ್‌ (ವಿಕೆಟ್‌ ಕೀಪರ್‌) ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಮೊಹಮ್ಮದ್‌ ಶಮಿ, ಕುಲದೀಪ್‌ ಯಾದವ್‌, ಉಮ್ರಾನ್‌ ಮಲಿಕ್‌ ಹಾಗೂ ಮೊಹಮ್ಮದ್‌ ಸಿರಾಜ್‌

2ND ODI. India XI: R Sharma (c), S Gill, V Kohli, KL Rahul (wk), S Iyer, H Pandya, A Patel, U Malik, K Yadav, M Shami, M Siraj. https://t.co/MY3Wc5253b

— BCCI (@BCCI)

ಶ್ರೀಲಂಕಾ: ಕುಶಲ್‌ ಮೆಂಡಿಸ್‌ (ವಿಕೆಟ್‌ ಕೀಪರ್‌), ಅವಿಷ್ಕಾ ಫರ್ನಾಂಡೋ, ಚರಿತ್‌ ಅಸಲಂಕಾ, ಧನಂಜಯ ಡೀ ಸಿಲ್ವಾ, ನುವಾನಿಡು ಫರ್ನಾಂಡೋ,  ದಶುನ್ ಶನಕ  (ನಾಯಕ), ವನಿಂದು ಹಸರಂಗ, ಚಮಿಕ ಕರುಣರತ್ನೆ, ದುನಿತ್‌ ವೆಲ್ಲಲಗೆ, ಲಹಿರು ಕುಮಾರ, ಕಸುನ್‌ ರಜಿತಾ 

2ND ODI. Sri Lanka XI: A Fernando, K Mendis (wk), D D Silva, N Fernando, C Asalanka, D Shanaka (c), W Hasaranga, C Karunaratne, D Wellalage, K Rajitha, L Kumara. https://t.co/MY3Wc5253b

— BCCI (@BCCI)

 

ಇದನ್ನೂ ಓದಿ: ಕಿಂಗ್ ಕೊಹ್ಲಿ ಖಾತೆಗೆ ಮತ್ತೊಂದು ಶತಕ, ಬೃಹತ್ ಮೊತ್ತದತ್ತ ಭಾರತ

ಪಂದ್ಯ: ಮಧ್ಯಾಹ್ನ 1.30ರಿಂದ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1, ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ

click me!