ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪುಣೆ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಮೊದಲ ಸೆಂಚುರಿ ಸಿಡಿಸಿದ ಕೊಹ್ಲಿ, ಕೆಲ ದಾಖಲೆ ನಿರ್ಮಿಸಿದ್ದಾರೆ.
ಪುಣೆ(ಅ.11): ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ದಿನವೂ ಭಾರತ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದೆ. ಮೊದಲ ದಿನ ಕನ್ನಡಿಗ ಮಯಾಂಕ್ ಅಗರ್ವಾಲ್ ಸೆಂಚುರಿ ಸಿಡಿಸಿದ್ದರೆ, 2ನೇ ದಿನ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 26ನೇ ಸೆಂಚುರಿ ಪೂರೈಸಿದರು. ಇಷ್ಟೇ ಅಲ್ಲ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದ್ದಾರೆ.
ಇದನ್ನೂ ಓದಿ: INDvSA ಪಣೆ ಟೆಸ್ಟ್; ಹಾಫ್ ಸೆಂಚುರಿ ಸಿಡಿಸಿದ ಅಜಿಂಕ್ಯ ರಹಾನೆ!
undefined
ನಾಯಕನಾಗಿ ಗರಿಷ್ಠ ಶತಕ ಸಿಡಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್ ಜೊತೆ 2ನೇ ಸ್ಥಾನ ಹಂಚಿಕೊಂಡಿದ್ದಾರೆ. ಕೊಹ್ಲಿ ಹಾಗೂ ಪಾಂಟಿಂಗ್ 19 ಟೆಸ್ಟ್ ಶತಕ ಸಿಡಿಸಿದ್ದಾರೆ. ಸೌತ್ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ 25 ಶತಕದ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಕಾಡು ಕಡಿಯದಂತೆ ರೋಹಿತ್ ಟ್ವೀಟ್: ಉಲ್ಟಾ ಹೊಡೆದ ಫ್ಯಾನ್ಸ್!
ನಾಯಕನಾಗಿ ಗರಿಷ್ಠ ಟೆಸ್ಟ್ ಶತಕ
ಗ್ರೇಮ್ ಸ್ಮಿತ್ - 25 (ಶತಕ)
ರಿಕಿ ಪಾಂಟಿಂಗ್/ ವಿರಾಟ್ ಕೊಹ್ಲಿ 19 (ಶತಕ)
ಅಲನ್ ಬಾರ್ಡರ್/ ಸ್ಟೀವ್ ವ್ಹಾ/ ಸ್ಟೀವ್ ಸ್ಮಿತ್ 15(ಶತಕ)
3 ವಿಕೆಟ್ ನಷ್ಟಕ್ಕೆ 273 ರನ್‌ಗಳೊಂದಿಗೆ 2ನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ವೇಗವಾಗಿ ರನ್ ಕಲೆಹಾಕಿತು. ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಜೊತೆಯಾಟದಿಂದ ತಂಡ ಬೃಹತ್ ಮೊತ್ತದತ್ತ ಹೆಜ್ಜೆ ಇಟ್ಟಿತ್ತು. ಇತ್ತ ಉತ್ತಮ ಪ್ರದರ್ಶನ ನೀಡಿದ ಕೊಹ್ಲಿ, ಟೂರ್ನಿಯಲ್ಲಿ ಮೊದಲ ಶತಕ ದಾಖಲಿಸಿದರು.
ಕಡಿಮೆ ಇನಿಂಗ್ಸ್‌ನಲ್ಲಿ 26 ಟೆಸ್ಟ್ ಶತಕ ಸಿಡಿಸಿದ ಸಾಧಕರು:
ಡಾನ್ ಬ್ರಾಡ್ಮನ್(AUS) 69 ಇನಿಂಗ್ಸ್
ಸ್ಟೀವ್ ಸ್ಮಿತ್ (AUS)121 ಇನಿಂಗ್ಸ್
ಸಚಿನ್ ತೆಂಡುಲ್ಕರ್(IND) 136 ಇನಿಂಗ್ಸ್
ವಿರಾಟ್ ಕೊಹ್ಲಿ(IND) 138 ಇನಿಂಗ್ಸ್
ಸುನಿಲ್ ಗವಾಸ್ಕರ್(IND) 144 ಇನಿಂಗ್ಸ್
ಮ್ಯಾಥ್ಯೂ ಹೇಡನ್(AUS) 145 ಇನಿಂಗ್ಸ್
ವಿರಾಟ್ ಕೊಹ್ಲಿ ಶತಕ ಸಾಧನೆ(ಪುಣೆ ಟೆಸ್ಟ್)