ಪುಣೆ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವೇಗಿ ಕಾಗಿಸೋ ರಬಾಡ ಹಾಗೂ ಚೇತೇಶ್ವರ್ ಪೂಜಾರ ನಡುವಿನ ಸ್ಲೆಡ್ಜಿಂಗ್ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪದೇ ಪದೇ ಸ್ಲೆಡ್ಜಿಂಗ್ ಮಾಡುತ್ತಿದ್ದರೂ ಪೂಜಾರ ತಾಳ್ಮೆ ಕಳೆದುಕೊಳದೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಪುಣೆ(ಅ.11): ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಸ್ಲೆಡ್ಜ್ ಮಾಡಿದರೂ ನಾನು ಏಕಾಗ್ರತೆಯಿಂದ ಬ್ಯಾಟ್ ಮಾಡುತ್ತಿದ್ದೆ ಎಂದು ಚೇತೇಶ್ವರ್ ಪೂಜಾರ ದಿನದಂತ್ಯದ ಬಳಿಕ ಹೇಳಿದರು. ರಬಾಡ ಎಸೆತಕ್ಕೆ ಪೂಜಾರ ಖಾತೆ ತೆರೆಯದೆ ಔಟಾಗಬೇಕಿತ್ತು. ಆದರೆ ಪೂಜಾರಗೆ ಆಫ್ರಿಕಾ ಜೀವದಾನ ನೀಡಿದ್ದರಿಂದ ರಬಾಡ ಹತಾಶೆಯಾಗಿ ಸ್ಲೆಡ್ಜ್ ಮಾಡಿದರು.
ಇದನ್ನೂ ಓದಿ: ಸೆಹ್ವಾಗ್ ಹಾದಿಯಲ್ಲಿ ಮಯಾಂಕ್; ಕನ್ನಡಿಗನನ್ನು ಕೊಂಡಾಡಿದ ಟ್ವಿಟರಿಗರು..!
undefined
ಪೂಜಾರ ಆಫ್ರಿಕಾ ವೇಗಿ ರಬಾಡಗೆ ಉತ್ತರಿಸಲು ಹೋಗಿಲ್ಲ. 58 ರನ್ ಗಳಿಸಿ ಪೂಜಾರ ವಿಕೆಟ್ ಒಪ್ಪಿಸಿದಾಗ ರಬಾಡ ಪುನಃ ಏನೋ ಹೇಳಿದ್ದರು. ‘ರಬಾಡ ಏನು ಹೇಳಿದರೋ ನೆನಪಿಲ್ಲ. ಬ್ಯಾಟ್ಸ್ಮನ್ಗೆ ಏನಾದರು ಹೇಳುವುದು ರಬಾಡಗೆ ಇಷ್ಟ. ನನ್ನ ಏಕಾಗ್ರತೆ ತಪ್ಪಿಸಲು ರಬಾಡ ಯತ್ನಿಸುವ ನಿರೀಕ್ಷೆಯಿತ್ತು. ಹಾಗಾಗಿ ರಬಾಡ ಹೇಳಿದ್ದನ್ನು ಕೇಳಿಸಿಕೊಳ್ಳಲಿಲ್ಲ’ ಎಂದು ಪೂಜಾರ ತಿಳಿಸಿದರು.
ಇದನ್ನೂ ಓದಿ: ಅಪ್ಪನ ಅಗಲಿಕೆಯಿಂದ ಬಡತನ, ಒಂದೇ Tಶರ್ಟ್‌ನಲ್ಲಿ ಆಡಿದ್ದ ಬುಮ್ರಾ ಈಗ ಕೋಟ್ಯಾಧಿಪತಿ!
ವಿಶಾಖಪಟ್ಟಣಂ ಟೆಸ್ಟ್ ಪಂದ್ಯ ಸೋತಿರುವ ಸೌತ್ ಆಪ್ರಿಕಾ, ಪುಣೆ ಟೆಸ್ಟ್ ಪಂದ್ಯ ಗೆಲ್ಲಲೇಬೇಕಾದ ಒತ್ತಡಲ್ಲಿದೆ. ಹೀಗಾಗಿ ಸ್ಲೆಡ್ಜಿಂಗ್ ಮೂಲಕ ಭಾರತವನ್ನು ಕಟ್ಟಿ ಹಾಕಲು ರಣತಂತ್ರ ಹೆಣೆದಿದೆ. ಆದರೆ ದಿಟ್ಟ ಹೋರಾಟ ನೀಡುತ್ತಿರುವ ಭಾರತ, 2ನೇ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ.