* ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ನಿಯಮ ಪ್ರಕಟಿಸಿದ ಐಸಿಸಿ
* ಜೂನ್ 18ರಿಂದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆರಂಭ
* ಪ್ರಶಸ್ತಿಗಾಗಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಫೈಟ್
ದುಬೈ(ಮೇ.28): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದ ನಿಯಮ ಹಾಗೂ ಷರತ್ತುಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಗುರುವಾರ(ಮೇ.28) ಘೋಷಿಸಿದೆ. ಈ ಮೂಲಕ ಹಲವು ಗೊಂದಲ ಹಾಗೂ ಅನುಮಾನಗಳಿಗೆ ಐಸಿಸಿ ತೆರೆ ಎಳೆಯುವ ಪ್ರಯತ್ನ ಮಾಡಿದೆ.
ಹೌದು, ಜೂನ್ 18ರಿಂದ ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ಆರಂಭವಾಗಿರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಒಂದು ವೇಳೆ ಡ್ರಾ ಅಥವಾ ಟೈ ಆದರೆ ಭಾರತ ಹಾಗೂ ನ್ಯೂಜಿಲೆಂಡ್ ಎರಡು ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುವುದು ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ವೇಳೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ (ಮೇ.23) ಹೆಚ್ಚುವರಿಯಾಗಿ ಒಂದು ದಿನವನ್ನು ಮೀಸಲು ದಿನವನ್ನಾಗಿ ಇಡಲಾಗಿದ್ದು, ನಿಗದಿತ 5 ದಿನಗಳ ಅವಧಿಯಲ್ಲಿ ಮಳೆ ಅಡ್ಡಿ ಪಡಿಸಿದರೆ, ಅಥವಾ ತಾಂತ್ರಿಕ ದೋಷಗಳಿಂದ ಸಮಯ ವ್ಯರ್ಥವಾದರೇ ಹೆಚ್ಚುವರಿ ದಿನದಲ್ಲಿ ಪಂದ್ಯವನ್ನು ನಡೆಸಲು ಐಸಿಸಿ ತೀರ್ಮಾನಿಸಿದೆ.
ಟೆಸ್ಟ್ ವಿಶ್ವಕಪ್ ಫೈನಲ್ ಡ್ರಾ ಆದರೆ ಕಪ್ ಯಾರ ಪಾಲಾಗುತ್ತೆ?
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ನಿಯಮಗಳು ಹೀಗಿವೆ ನೋಡಿ:
* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಗ್ರೇಡ್ 1 ಡ್ಯೂಕ್ ಬಾಲನ್ನು ಬಳಸಲಾಗುತ್ತದೆ.
* ಸದ್ಯ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಸೀಮಿತ ಓವರ್‌ಗಳ ಸರಣಿಯು ಐಸಿಸಿ ಮೆನ್ಸ್ ಕ್ರಿಕೆಟ್ ವರ್ಲ್ಡ್ ಕಪ್ ಸೂಪರ್ ಲೀಗ್ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಟೂರ್ನಿಯಲ್ಲಿ ಐಸಿಸಿ ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ಎಲ್ಲಾ ನಿಯಮಗಳು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೂ ಅನ್ವಯವಾಗಲಿದೆ. ಅವುಗಳೆಂದರ,
* ಶಾರ್ಟ್ ರನ್: ಒಂದು ವೇಳೆ ಬ್ಯಾಟ್ಸ್‌ಮನ್ ಶಾರ್ಟ್ ರನ್ ಓಡಿದರೆ, ಥರ್ಡ್ ಅಂಪೈರ್ ವಿಡಿಯೋ ಮೂಲಕ ವೀಕ್ಷಿಸಿ ಮರು ಎಸೆತ ಹಾಕುವ ಮುನ್ನವೇ ಆನ್ ಫೀಲ್ಡ್ ಅಂಪೈರ್‌ಗೆ ಮಾಹಿತಿ ನೀಡುತ್ತಾರೆ.
* ಆಟಗಾರರ ರಿವ್ಯೂ: ಫೀಲ್ಡಿಂಗ್ ಕ್ಯಾಪ್ಟನ್ ಇಲ್ಲವೇ ಬ್ಯಾಟ್ಸ್‌ಮನ್ ಡಿಆರ್‌ಎಸ್ ಪಡೆಯಬಹುದಾಗಿದೆ.