ICC

(Search results - 787)

Shikhar Dhawan

CricketJul 22, 2021, 11:26 AM IST

ಏಕದಿನ ರ‍್ಯಾಂಕಿಂಗ್‌‌: 16ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಶಿಖರ್ ಧವನ್

ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಂ ನಂ.1 ಸ್ಥಾನದಲ್ಲೇ ಭದ್ರವಾಗಿದ್ದಾರೆ. ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

• undefined

CricketJul 16, 2021, 5:37 PM IST

ಐಸಿಸಿ ಟಿ20 ವಿಶ್ವಕಪ್‌: ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ-ಪಾಕಿಸ್ತಾನ..!

ದುಬೈ: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆರಂಭದಲ್ಲೇ ಹೈವೋಲ್ಟೇಜ್‌ ಪಂದ್ಯಗಳು ಪ್ರೇಕ್ಷಕರಿಗೆ ನೋಡಲು ಸಿಗಲಿದ್ದು, ಟೂರ್ನಿಗೆ ಆತಿಥ್ಯ ವಹಿಸಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಐಸಿಸಿ ಅಧಿಕೃತವಾಗಿ ಟೂರ್ನಿಯಲ್ಲಿ ತಂಡಗಳನ್ನು ಎರಡು ಭಾಗಗಳಾಗಿ ವಿಭಾಗಿಸಿದೆ. ಇದೇ ವೇಳೆ ಅರ್ಹತಾ ಸುತ್ತಿನ ಪಂದ್ಯಗಳಿಗೆ ತಂಡಗಳನ್ನು ವಿಭಾಗಿಸಲಾಗಿದೆ. ಸೂಪರ್‌ 12 ಹಂತದಲ್ಲಿ ಯಾವ ತಂಡಗಳು ಯಾವ ಗುಂಪಿನಲ್ಲಿವೆ, ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಯಾವೆಲ್ಲಾ ತಂಡಗಳು ಕಾದಾಟ ನಡೆಸಲಿವೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Virat Kohli

CricketJul 14, 2021, 3:04 PM IST

ಇಂಡೋ-ಇಂಗ್ಲೆಂಡ್ ಸರಣಿಯಿಂದಲೇ 2ನೇ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭ

2021-2023ನೇ ಸಾಲಿನ ಎರಡನೇ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯ ಅಂಕಗಳ ಹಂಚಿಕೆಯ ವಿಚಾರವನ್ನು ಖಚಿತಪಡಿಸಿದೆ. ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯ ಪ್ರತಿ ಪಂದ್ಯಕ್ಕೂ 12 ಅಂಕಗಳನ್ನು ನಿಗದಿಪಡಿಸಲಾಗಿದೆ. ಟೆಸ್ಟ್ ಗೆಲುವು ದಾಖಲಿಸಿದ ತಂಡ 12 ಅಂಕ ಪಡೆಯಲಿದೆ, ಪಂದ್ಯ ಡ್ರಾ ಆದರೆ 4 ಅಂಕ, ಟೈ ಆದರೆ  ಉಭಯ ತಂಡಗಳು ತಲಾ 8 ಅಂಕಗಳನ್ನು ಪಡೆಯಲಿವೆ ಎಂದು ಐಸಿಸಿ ತಿಳಿಸಿದೆ.

KL Rahul Virat Kohli

CricketJul 8, 2021, 10:42 AM IST

ಟಿ20 ರ‍್ಯಾಂಕಿಂಗ್‌: ಟಾಪ್ 10 ಪಟ್ಟಿಯೊಳಗೆ ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸ್ಥಾನ

ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್‌ ಹೊರತು ಪಡಿಸಿ ಭಾರತದ ಇನ್ಯಾವ ಕ್ರಿಕೆಟ್ ಆಟಗಾರರು ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಆಲ್‌ರೌಂಡರ್‌ ವಿಭಾಗದಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ. ಟಿ20 ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನ ಅಗ್ರ 5 ಆಟಗಾರರ ಸ್ಥಾನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

• undefined

CricketJul 3, 2021, 12:21 PM IST

ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ಗಿಂದು 41 ಹುಟ್ಟುಹಬ್ಬದ ಸಡಗರ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ವಿವಿಎಸ್‌ ಲಕ್ಷ್ಮಣ್‌, ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಹಿರಿ-ಕಿರಿಯ ಕ್ರಿಕೆಟಿಗರು ಹರ್ಭಜನ್ ಸಿಂಗ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣವಾದ ಟ್ವೀಟ್‌ ಮೂಲಕ ಶುಭ ಕೋರಿದೆ.

New Zealand Cricket

CricketJul 2, 2021, 10:12 AM IST

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ

ಈ ಮೊದಲು ಪ್ರತಿ ಸರಣಿಗೆ 120 ಅಂಕಗಳನ್ನು ನಿಗದಪಡಿಸಲಾಗಿತ್ತು. ಸರಣಿಯಲ್ಲಿ 5 ಪಂದ್ಯವಿದ್ದರೂ 120 ಅಂಕ, 2 ಪಂದ್ಯವಿದ್ದರೂ 120 ಅಂಕಕ್ಕೆ ತಂಡಗಳು ಸ್ಪರ್ಧಿಸುತ್ತಿದ್ದವು. ಇದೀಗ ಐಸಿಸಿ ತನ್ನ ನಿಯಮಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ.

T20 World Cup

CricketJun 29, 2021, 5:23 PM IST

ಟಿ20 ವಿಶ್ವಕಪ್ ವೇಳಾಪಟ್ಟಿ ಖಚಿತಪಡಿಸಿದ ಐಸಿಸಿ

ಸೋಮವಾರವಷ್ಟೇ(ಜೂ.28) ಟಿ20 ವಿಶ್ವಕಪ್‌ ಟೂರ್ನಿಯನ್ನು ಭಾರತದಿಂದ ಯುಎಇಗೆ ಸ್ಥಳಾಂತರಿಸಿರುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಸಿಸಿಗೆ ತಿಳಿಸಿದ್ದರು. ಕೋವಿಡ್ 19 ಕಾರಣದಿಂದಾಗಿ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯು ಯುಎಇಗೆ ಸ್ಥಳಾಂತರವಾಗಿದೆ.

T20 World Cup

CricketJun 28, 2021, 6:49 PM IST

ಐಸಿಸಿ ಟಿ20 ವಿಶ್ವಕಪ್‌ ಭಾರತದಿಂದ ಯುಎಇಗೆ ಸ್ಥಳಾಂತರಿಸಿದ ಬಿಸಿಸಿಐ

ಭಾರತ 2021ನೇ ಸಾಲಿನ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಆತಿಥ್ಯದ ಹಕ್ಕು ಪಡೆದುಕೊಂಡಿತ್ತು. ಭಾರತದಲ್ಲೇ ಟಿ20 ವಿಶ್ವಕಪ್ ಆಯೋಜಿಸಲು ಬಿಸಿಸಿಐ ಎಲ್ಲಾ ದಾರಿಗಳ ಅನ್ವೇಷಣೆ ನಡೆಸಲು ಇದೇ ಜೂನ್‌ 28ರ ವರೆಗೆ ಐಸಿಸಿಯಿಂದ ಗಡುವು ಪಡೆದುಕೊಂಡಿತ್ತು. ಇದೀಗ ಟಿ20 ವಿಶ್ವಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ತೀರ್ಮಾನ ತೆಗೆದುಕೊಂಡಿದೆ.

• undefined

NewsJun 26, 2021, 4:59 PM IST

ಅಯೋಧ್ಯೆ ಅಭಿವೃದ್ಧಿ ಪರಿಶೀಲಿಸಿದ ಮೋದಿ, ಸುಗಮವಾಯ್ತಾ ಡಿಕೆಶಿ ಹಾದಿ?ಜೂ.26ರ ಟಾಪ್ 10 ಸುದ್ದಿ!

ಯುಪಿ ಎಲೆಕ್ಷನ್‌ಗೂ ಮುನ್ನ 20 ಸಾವಿರ ಕೋಟಿ ರೂ. ಅಭಿವೃದ್ಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 17ರಿಂದ ಯುಎಇನಲ್ಲಿ ನಡೆಯಲಿದೆ. ಲಡಾಖ್‌ಗೆ ನಾಳೆ ರಾಜನಾಥ್ ಸಿಂಗ್ ಭೇಟಿ ನೀಡುತ್ತಿದ್ದಾರೆ. ಆಯೋಗ್ಯ ಹಾಡಿಗೆ ಫಿದಾ ಆದ ರಮ್ಯಾ, ಮಾಜಿ ಬಿಗ್‌ಬಾಸ್‌ ಸ್ಪರ್ಧಿಗೆ ಲೈಂಗಿಕ ಕಿರುಕುಳ ಸೇರಿದಂತೆ ಜೂನ್ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Team India Test

CricketJun 26, 2021, 11:32 AM IST

2021-23ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವೇಳಾಪಟ್ಟಿ ಪ್ರಕಟ

ಇದೀಗ ಎರಡನೇ ಆವೃತ್ತಿಯ ಅಂದರೆ 2021-23ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ಒಟ್ಟು 6 ಸರಣಿಗಳನ್ನು ಆಡಲಿದೆ. ತವರಿನಲ್ಲಿ ಮೂರು ಟೆಸ್ಟ್‌ ಸರಣಿ ಹಾಗೂ ತವರಿನಾಚೆ 3 ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಆಡಲಿದೆ.

T20 World Cup

CricketJun 26, 2021, 9:56 AM IST

ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಐಸಿಸಿ ಟಿ20 ವಿಶ್ವಕಪ್‌ ಆರಂಭದ ದಿನಾಂಕ ಪ್ರಕಟ..!

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೋವಿಡ್ ವಕ್ರದೃಷ್ಟಿ ಬೀರಿತ್ತು. ಬಯೋ ಬಬಲ್‌ನೊಳಗಿದ್ದ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ ಮಿಲಿಯನ್‌ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಬಳಿಕ ನಡೆದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಐಪಿಎಲ್ ಭಾಗ 2 ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

New Zealand Cricket Team

CricketJun 26, 2021, 8:38 AM IST

ಟೆಸ್ಟ್‌ ವಿಶ್ವಕಪ್‌ ಗೆದ್ದ ಮೇಲೆ ಕಿವೀಸ್‌ ರಾತ್ರಿಯಿಡೀ ಪಾರ್ಟಿ!

ವಿಮಾನದಲ್ಲಿ ಕಿವೀಸ್‌ ತಂಡ ಐಸಿಸಿ ಬಹುಮಾನವಾಗಿ ನೀಡಿದ ಮೇಸ್‌ (ಗದೆ) ಅನ್ನು ಪ್ರತ್ಯೇಕ ಆಸನದಲ್ಲಿ ಇಡಲಾಗಿತ್ತು. ಅಲ್ಲದೇ ಆ ಗದೆಗೆ ಮೈಕಲ್‌ ಮೇಸನ್‌ ಎಂದು ಹೆಸರು ಕೂಡ ಇಡಲಾಗಿದೆ.

Ross Taylor

CricketJun 24, 2021, 8:36 AM IST

ರಾಸ್ ಟೇಲರ್‌ ವಿರುದ್ಧ ನಿಂದನೆ: 2 ಪ್ರೇಕ್ಷಕರನ್ನು ಹೊರದಬ್ಬಿದ ಐಸಿಸಿ !

ಟೇಲರ್‌ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಕೆ ಮಾಡುತ್ತಿರುವುದನ್ನು ನ್ಯೂಜಿಲೆಂಡ್‌ನಲ್ಲಿದ್ದ ಅಭಿಮಾನಿಗಳು ಟೀವಿಯಲ್ಲಿ ಕೇಳಿಸಿಕೊಂಡು, ಐಸಿಸಿಗೆ ಟ್ವೀಟ್‌ ಮೂಲಕ ದೂರು ನೀಡಿದ್ದರು.

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಸ್ಫರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು.

CricketJun 23, 2021, 5:05 PM IST

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲುವಿಗೆ 8 ವರ್ಷ ಭರ್ತಿ; ಧೋನಿ ನಾಯಕತ್ವಕ್ಕೆ ಐಸಿಸಿ ಸೆಲ್ಯೂಟ್

50 ಓವರ್‌ಗಳ ಏಕದಿನ ಪಂದ್ಯವನ್ನು ಮಳೆಯ ಕಾರಣದಿಂದ 20 ಓವರ್‌ಗೆ ಮಿತಿಗೊಳಿಸಲಾಗಿತ್ತು. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ವಿರಾಟ್ ಕೊಹ್ಲಿ ಬಾರಿಸಿದ ಸಮಯೋಚಿತ 43 ರನ್‌ಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 129 ರನ್‌ ಕಲೆಹಾಕಿತ್ತು.

• undefined

CricketJun 22, 2021, 10:49 AM IST

ಇಂಗ್ಲೆಂಡ್‌ನಲ್ಲಿ ಮಹತ್ವದ ಐಸಿಸಿ ಕ್ರಿಕೆಟ್‌ ಪಂದ್ಯಗಳನ್ನು ನಡೆಸಬಾರದು: ಕೆವಿನ್ ಪೀಟರ್‌ಸನ್

ಸದ್ಯ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಗಿ 4 ದಿನಗಳು ಕಳೆದಿದ್ದು, ಈ ಪೈಕಿ ಎರಡು ದಿನ ಒಂದೂ ಎಸೆತ ಕಾಣದೇ ದಿನದಾಟ ರದ್ದಾಗಿದೆ. ಕ್ರಿಕೆಟ್‌ ಅಭಿಮಾನಿಗಳು ಸಹಾ ಇಂಗ್ಲೆಂಡ್‌ನಲ್ಲಿ ಈ ಟೂರ್ನಿ ಆಯೋಜಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.