ಪುಣೆ ಸ್ಟೇಡಿಯಂನಲ್ಲಿ ನೀರಿಲ್ಲ: ಫ್ಯಾನ್ಸ್‌ ಪರದಾಟ, ಹಿಡಿಶಾಪ! 100 ಮಿ.ಲೀ. ನೀರಿನ ಬಾಟಲಿಗೆ ₹80 ಸುಲಿಗೆ!

By Naveen Kodase  |  First Published Oct 25, 2024, 11:03 AM IST

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪುಣೆ ಟೆಸ್ಟ್ ಪಂದ್ಯದಲ್ಲಿ ಸ್ಟೇಡಿಯಂನಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲದೆ ನೋಡಿ


ಪುಣೆ: ಭಾರತಹಾಗೂನ್ಯೂಜಿಲೆಂಡ್ ನಡುವಿನ 2ನೇ ಪಂದ್ಯ ನಡೆಯುತ್ತಿರುವ ಪುಣೆ ಕ್ರೀಡಾಂಗಣದಲ್ಲಿ ಅಭಿಮಾನಿಗಳು ನೀರಿಗಾಗಿ ಪರದಾಟ ನಡೆಸಿದ್ದಾರೆ. ಮೊದಲ ದಿನವಾದ ಗುರುವಾರ ಸುಮಾರು 18000 ಪ್ರೇಕ್ಷಕರು ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ. ಆದರೆ ಬಹುತೇಕ ಮಂದಿ ನೀರು ಸಿಗದೆ ಪರದಾಟ ನಡೆಸಿದರು.

ಪುಣೆ ಕ್ರೀಡಾಂಗಣಕ್ಕೆ ಮೇಲ್ಬಾವಣಿ ಇಲ್ಲ. ಹೀಗಾಗಿ ಸುಡು ಬಿಸಿಲಿನಲ್ಲೇ ಕೂತು ಪಂದ್ಯ ವೀಕ್ಷಿಸಬೇಕಾಗಿದೆ. ಇದರ ಮಧ್ಯೆ ಪ್ರೇಕ್ಷಕರು ನೀರಿಗೂ ಪರದಾಟ ನಡೆಸಿದ್ದು, ಸ್ಟ್ಯಾಂಡ್‌ನಲ್ಲಿ ನೀರು ಸಿಗದ ಕಾರಣ ಕ್ರೀಡಾಂಗಣದ ನೀರಿನ ಘಟಕಕ್ಕೆ ದೌಡಾಯಿಸಿದ್ದಾರೆ. ಆದರೆ ಅಲ್ಲೂ ನೀರು ಸಿಗದಿದ್ದಕ್ಕೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ(ಎಂಸಿಎ)ಗೆ ಹಿಡಿಶಾಪ ಹಾಕಿದ್ದಾರೆ. ಈ ನಡುವೆ ಮಾರಾಟಗಾರರು 100 ಮಿ.ಲೀ. ಬಾಟಲಿಗೆ 80 ರು.ಸುಲಿಗೆ ಮಾಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.

Latest Videos

undefined

ಎಮರ್ಜಿಂಗ್‌ ಏಷ್ಯಾಕಪ್ ಟೂರ್ನಿ: ಇಂದು ಭಾರತ vs ಆಫ್ಘನ್‌ ಸೆಮೀಸ್‌ ಫೈಟ್

ಅವ್ಯವಸ್ಥೆ, ಪ್ರೇಕ್ಷಕರ ತೀವ್ರ ಆಕ್ರೋಶದ ಬಳಿಕ ಎಂಸಿಎ ಕ್ಷಮೆಯಾಚಿಸಿದ್ದು, ಪಂದ್ಯದ ಉಳಿದ ದಿನಗಳಲ್ಲಿ ಯಾವುದೇ ಸಮಸ್ಯೆ ನೋಡಿಕೊಳ್ಳುವುದಾಗಿ ಉಂಟಾಗದಂತೆ ಭರವಸೆ ನೀಡಿದೆ.

531: ಗರಿಷ್ಠ ವಿಕೆಟ್‌ನಲ್ಲಿ ಅಶ್ವಿನ್‌ ಏಳನೇ ಸ್ಥಾನಕ್ಕೆ

ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಭಾರತದ ತಾರಾ ಸ್ಪಿನ್ನರ್‌ ಆರ್‌.ಅಶ್ವಿನ್‌ 7ನೇ ಸ್ಥಾನಕ್ಕೇರಿದ್ದಾರೆ. ಗುರುವಾರ 3 ವಿಕೆಟ್‌ ಪಡೆದ 38 ವರ್ಷದ ಅಶ್ವಿನ್‌, ಒಟ್ಟಾರೆ ವಿಕೆಟ್‌ ಗಳಿಕೆಯನ್ನು 531ಕ್ಕೆ ಹೆಚ್ಚಿಸಿದರು. ಈ ಮೂಲಕ ಆಸ್ಟ್ರೇಲಿಯಾದ ನೇಥನ್‌ ಲಯನ್‌ (530)ರನ್ನು ಹಿಂದಿಕ್ಕಿದರು. ಇನ್ನು, ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ನ ಗರಿಷ್ಠ ವಿಕೆಟ್‌ ಸರದಾರರ ಪಟ್ಟಿಯಲ್ಲಿ ಅಶ್ವಿನ್‌ ಅಗ್ರಸ್ಥಾನಕ್ಕೇರಿದರು. ಅವರು 39 ಪಂದ್ಯಗಳಲ್ಲಿ 188 ವಿಕೆಟ್‌ ಪಡೆದಿದ್ದಾರೆ. 43 ಪಂದ್ಯಗಳಲ್ಲಿ 187 ವಿಕೆಟ್‌ ಪಡೆದಿರುವ ನೇಥನ್‌ ಲಯನ್‌ರನ್ನು ಅಶ್ವಿನ್ ಹಿಂದಿಕ್ಕಿದರು.

Pune Test: ವಾಷಿಂಗ್ಟನ್ ಸುಂದರ್ ದಾಳಿಗೆ ಕಿವೀಸ್ ಛಿದ್ರ; ಮೊದಲ ದಿನವೇ ನ್ಯೂಜಿಲೆಂಡ್ ಆಲೌಟ್

ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್‌(ಟಾಪ್‌-7)

ಆಟಗಾರ ಪಂದ್ಯ ವಿಕೆಟ್‌

ಮುರಳೀಧರನ್‌ 133 800

ಶೇನ್‌ ವಾರ್ನ್‌ 145 708

ಆ್ಯಂಡರ್‌ಸನ್‌ 188 704

ಅನಿಲ್‌ ಕುಂಬ್ಳೆ 132 619

ಸ್ಟುವರ್ಟ್‌ ಬ್ರಾಡ್‌ 167 604

ಮೆಗ್ರಾಥ್‌ 124 563

ಅಶ್ವಿನ್‌ 104 531
 

click me!