
ಬೆಂಗಳೂರು(ಜೂ.25): ಐಸಿಸಿ ಟಿ20 ವಿಶ್ವಕಪ್ (ICC T20 World Cup) ಆಡೋದು ಪ್ರತಿಯೊಬ್ಬ ಕ್ರಿಕೆಟಿಗನ ಬಿಗ್ ಡ್ರೀಮ್. ಸದ್ಯ ಈ ಬಿಗ್ ಡ್ರೀಮ್ ನನಸಾಗಿಸಿಕೊಳ್ಳಲು ಟೀಂ ಇಂಡಿಯಾದಲ್ಲಿ ಭಾರಿ ಪೈಪೋಟಿನೇ ಏರ್ಪಟ್ಟಿದೆ. ದಿನೇಶ್ ಕಾರ್ತಿಕ್ ಐಪಿಎಲ್ಗೂ ಮುನ್ನ ಟಿ20 ವಿಶ್ವಕಪ್ ಆಡುವುದೇ ನನ್ನ ಮುಂದಿನ ಗುರಿ ಅಂದ್ರು. ಅದ್ರಂತೆ ಅತ್ಯಾದ್ಭುತ ಆಟವಾಡಿ ಭಾರತ ತಂಡಕ್ಕೆ ಮರಳಿದ್ದು, ವಿಶ್ವಕಪ್ನಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳೋದು ಬಹುತೇಕ ಖಚಿತವಾಗಿದೆ. ಈಗ ಖಾಯಂ ಆಟಗಾರನಲ್ಲದ ಸಂಜು ಸ್ಯಾಮ್ಸನ್ ಕೂಡ ಟಿ20 ಮಹಾಸಮರ ಆಡಿಯೇ ತೀರುವ ಪಣ ತೊಟ್ಟಿದ್ದು, ಇದಕ್ಕಾಗಿ ಅವರು ಡಿಕೆ ಹಾದಿಯನ್ನೇ ತುಳಿದಿದ್ದಾರೆ.
ಐರ್ಲೆಂಡ್ ಸರಣಿಗಾಗಿ ಸ್ಯಾಮ್ಸನ್ ಸ್ಪೆಷಲ್ ಟ್ರೈನಿಂಗ್ :
ಸಂಜು ಸ್ಯಾಮ್ಸನ್ ಟ್ಯಾಲೆಂಟ್ ಕ್ರಿಕೆಟರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಅಸ್ಥಿರ ಫಾರ್ಮ್ ಟೀಂ ಇಂಡಿಯಾದ (Team India) ಖಾಯಂ ಸ್ಥಾನ ಕಸಿದಿದೆ. 2015 ರಿಂದ ಆಗೊಂದು, ಹೀಗೊಂದು ಚಾನ್ಸ್ ಸಿಕ್ಕಿದೆ. ಸಿಕ್ಕ ಅವಕಾಶದಲ್ಲೂ ಸಂಜು ಎಡವಿದ್ದಾರೆ. ಈಗ ಸೂಕ್ತ ಅವಕಾಶಗಳಿಗಾಗಿ ಕೇರಳದ ಆಟಗಾರ ಎದುರು ನೋಡ್ತಿದ್ದು, ಅದಕ್ಕಾಗಿ ಹೊಸ ಅವತಾರದಲ್ಲಿ ಘರ್ಜಿಸಲು ರೆಡಿಯಾಗಿದ್ದಾರೆ. ಅದಕ್ಕಾಗಿ ಸ್ಪೆಷಲ್ ಟ್ರೈನಿಂಗ್ ಪಡೆದು ಐರ್ಲೆಂಡ್ ನಲ್ಲಿ ವಿರುದ್ಧ ರನ್ ಹೊಳೆ ಹರಿಸಲು ಎದುರು ನೋಡ್ತಿದ್ದಾರೆ.
ಭಾನುವಾರದಿಂದ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆರಂಭಗೊಳ್ಳಲಿದೆ. ಈ ಚುಟುಕು ಸಮರದಲ್ಲಿ ಸ್ಥಾನ ಪಡೆದಿರೋ ಸಂಜು ಸ್ಯಾಮ್ಸನ್ ಬಿಗ್ ಇನ್ನಿಂಗ್ಸ್ ಕಟ್ಬಬೇಕಾದ ಒತ್ತಡವಿದೆ. ಹೀಗಾಗಿ ಬಿಗ್ ಬಿಟ್ಟರ್ ದುಬೈಗೆ ತೆರಳಿ ಸ್ಪೆಷನ್ ಟ್ರೈನಿಂಗ್ ಪಡೆದಿದ್ದಾರೆ. ಐರ್ಲೆಂಡ್ ಪಿಚ್ಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಬ್ಯಾಕ್ಪುಟ್ ಹಾಗೂ ಬ್ಯಾಟಿಂಗ್ ಕೌಶಲ್ಯ ಹೆಚ್ಚಿಸಿಕೊಳ್ಳುವ ತರಬೇತಿ ಪಡೆದ್ದಾರೆ. ಇಲ್ಲಿ ಟ್ರೈನಿಂಗ್ ಪಡೆದ ಬಳಿಕ ಸ್ಯಾಮ್ಸನ್ ನೇರವಾಗಿ ಡಬ್ಲಿಂಗ್ ಹಾರಿದ್ದಾರೆ.
ಡು ಆರ್ ಡೈ ಸಿರೀಸ್ನಲ್ಲಿ ಫೇಲಾದ್ರೆ ಕೆರಿಯರ್ ಖತಂ:
ಹೌದು, ಐರ್ಲೆಂಡ್ ಸರಣಿಗೆ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ಗೆ ಕೊನೆ ಚಾನ್ಸ್. ಸೀನಿಯರ್ ಕ್ರಿಕೆಟರ್ಸ್ ಇಂಗ್ಲೆಂಡ್ ಸಿರೀಸ್ನಲ್ಲಿ ಬ್ಯುಸಿ ಇರೋದ್ರಿಂದ ಸಂಜುಗೆ ಈ ಅವಕಾಶ ಸಿಕ್ಕಿದೆ. ಇಲ್ಲಿ ಇಂಪ್ರೆಸ್ಸಿವ್ ಆಟವಾಡಿದರಷ್ಟೇ ಟಿ20 ವಿಶ್ವಕಪ್ ರೇಸ್ನಲ್ಲಿ ಉಳಿದುಕೊಳ್ಳಲಿದ್ದಾರೆ. ಅದು ಅಂದುಕೊಂಡಷ್ಟು ಸುಲಭವಿಲ್ಲ. ಯಾಕಂದ್ರೆ ಕೀಪರ್ಗಳಾದ ಇಶನ್ ಕಿಶನ್ ಹಾಗೂ ಪಂತ್ ದೊಡ್ಡ ಸವಾಲಾಗಿದ್ದಾರೆ. ರೇಸ್ನಲ್ಲಿ ಇವರನ್ನೇ ಹಿಂದಿಕ್ಕಬೇಕಾದ್ರೆ ಡು ಆರ್ ಡೈ ಸಿರೀಸ್ನಲ್ಲಿ ತನ್ನ ಸಾಮರ್ಥ್ಯ ಕ್ಕೂ ಮೀರಿದ ಪ್ರದರ್ಶನ ನೀಡಲೇಬೇಕಿದೆ.
ಈ ಮೂವರಲ್ಲಿ ದಿನೇಶ್ ಕಾರ್ತಿಕ್ಗೆ ಟೀಂ ಇಂಡಿಯಾಗೆ ಸ್ಥಾನ ಬಿಟ್ಟುಕೊಡೋರ್ಯಾರು..?
ಒಂದು ವೇಳೆ ಸ್ಯಾಮ್ಸನ್ ಐರ್ಲೆಂಡ್ ಸರಣಿಯಲ್ಲಿ ರನ್ ಹೊಳೆ ಹರಿಸಿದ್ರೆ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ಗಳ ಸರಣಿಗೂ ಸ್ಥಾನ ಪಡೆಯಲಿದ್ದಾರೆ. ಅಲ್ಲೂ ದಮ್ದಾರ್ ಪರ್ಫಾಮೆನ್ಸ್ ನೀಡಿ ಸೈ ಅನ್ನಿಸಿಕೊಂಡ್ರೆ ಟಿ20 ವಿಶ್ವಕಪ್ ಆಡುವ ಬಿಗ್ ಡ್ರೀಮ್ ಜೀವಂತ. ಇಲ್ಲವಾದ್ರೆ ಈ ಮಹಾದಾಸೆ ಜೊತೆ ಕೆರಿಯರ್ ಕೂಡ ಖತಂ ಆಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.