* ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ದಿನಗಣನೆ ಆರಂಭ
* ಕೊರೋನಾದಿಂದ ಸ್ಥಗಿತಗೊಂಡಿದ್ದ ಇಂಗ್ಲೆಂಡ್-ಭಾರತ ನಡುವಿನ ಕೊನೆಯ ಟೆಸ್ಟ್
* ಜುಲೈ 01ರಿಂದ ಆರಂಭವಾಗಲಿದೆ ಮಹತ್ವದ ಟೆಸ್ಟ್ ಪಂದ್ಯ
ಬೆಂಗಳೂರು(ಜೂ.25): 2021ರ ಆಗಸ್ಟ್-ಸೆಪ್ಟೆಂಬರ್ನಲ್ಲಿ ಟೀಂ ಇಂಡಿಯಾ(Team India), ಇಂಗ್ಲೆಂಡ್ ಟೂರ್ಗೆ ಹೋಗಿತ್ತು (India Tour of England). ಜುಲೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ವರ್ಲ್ಡ್ಕಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ಗಳ ಸರಣಿ ಆಡಲು ಹೋಗಿದ್ದರು. ಮೊದಲ ನಾಲ್ಕು ಟೆಸ್ಟ್ಗಳು ಸರಾಗವಾಗಿ ನಡೆಯಿತು. ಭಾರತ 2-1ರಿಂದ ಸರಣಿಯಲ್ಲಿ ಮುನ್ನಡೆಯನ್ನೂ ಸಾಧಿಸಿತ್ತು. ಆದರೆ 5ನೇ ಹಾಗೂ ಕೊನೆ ಟೆಸ್ಟ್ ಆರಂಭಕ್ಕೂ ಮುನ್ನವೇ ಕೊರೊನಾ ವೈರಸ್ ತನ್ನ ಅಟ್ಟಹಾಸ ಮೆರೆದಿದ್ದರಿಂದ ಆ ಟೆಸ್ಟ್ ಅನ್ನು ಮುಂದೂಡಲಾಯ್ತು. ಈಗ ಅದೇ ಟೆಸ್ಟ್ ಅನ್ನು ಭಾರತ-ಇಂಗ್ಲೆಂಡ್ ತಂಡಗಳು ಜೂನ್ 1ರಿಂದ ಆಡಲಿವೆ.
ಕೋಚ್-ಕ್ಯಾಪ್ಟನ್-ವೈಸ್ ಕ್ಯಾಪ್ಟನ್ ಎಲ್ಲರೂ ಚೇಂಜ್:
ಹೌದು, ಅಂದು ಇಂಗ್ಲೆಂಡ್ ಟೂರ್ಗೆ ಹೋಗಿದ್ದ ಟೀಂ ಇಂಡಿಯಾಗೆ ರವಿಶಾಸ್ತ್ರಿ (Ravi Shastri) ಕೋಚ್. ವಿರಾಟ್ ಕೊಹ್ಲಿ (Virat Kohli) ಕ್ಯಾಪ್ಟನ್. ಅಜಿಂಕ್ಯ ರಹಾನೆ ವೈಸ್ ಕ್ಯಾಪ್ಟನ್ ಆಗಿದ್ದರು. ಈ ತ್ರಿಮೂರ್ತಿಳ ಮುಂದಾಳತ್ವದಲ್ಲಿ ಭಾರತ ತಂಡ ಎರಡು ಟೆಸ್ಟ್ ಗೆದ್ದು, ಒಂದನ್ನ ಸೋತು, ಮತ್ತೊಂದನ್ನ ಡ್ರಾ ಮಾಡಿಕೊಂಡಿತ್ತು. ಈ ತ್ರಿವಳಿಗಳು 15 ವರ್ಷಗಳ ನಂತರ ಇಂಗ್ಲೆಂಡ್ನಲ್ಲಿ ಸರಣಿ ಗೆಲ್ಲೋ ಉತ್ಸಾಹದಲ್ಲಿದ್ದರು. ಆದ್ರೆ ಕೊರೊನಾ ವಕ್ಕರಿಸಿದ್ದರಿಂದ ಅದು ಸಾಧ್ಯವಾಗಲಿಲ್ಲ. ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದರೂ ಟ್ರೋಫಿ ಇಲ್ಲದೆ ಬರಿಗೈಯಲ್ಲಿ ಭಾರತಕ್ಕೆ ವಾಪಾಸ್ ಆಗಿದ್ದರು.
9 ತಿಂಗಳ ನಂತರ ಆ ಏಕೈಕ ಟೆಸ್ಟ್ ಆಡಲು ಟೀಂ ಇಂಡಿಯಾ ಇಂಗ್ಲೆಂಡ್ಗೆ ಹೋಗಿದೆ. ಈಗ ಭಾರತ ತಂಡ ಸಂಪೂರ್ಣ ಬದಲಾಗಿದೆ. ರಾಹುಲ್ ದ್ರಾವಿಡ್ (Rahul Dravid) ಕೋಚ್. ರೋಹಿತ್ ಶರ್ಮಾ (Rohit Sharma) ಕ್ಯಾಪ್ಟನ್. ರಿಷಭ್ ಪಂತ್ (Rishabh Pant) ವೈಸ್ ಕ್ಯಾಪ್ಟನ್ ಆಗಿದ್ದಾರೆ. ಈ ಮೂವರು ಮುಂದಾಳತ್ವದಲ್ಲಿ ತವರಿನಲ್ಲಿ ಟೀಂ ಇಂಡಿಯಾ ಸರಣಿ ಗೆದ್ದಿದೆ. ಆದ್ರೆ ವಿದೇಶದಲ್ಲಿ ಗೆದ್ದಿಲ್ಲ. ಈ ಏಕೈಕ ಟೆಸ್ಟ್ ಗೆದ್ದು, ಟ್ರೋಫಿ ಗೆಲ್ಲಿಸೋ ಒತ್ತಡದಲ್ಲಿ ಈ ತ್ರಿಮೂರ್ತಿಗಳಿದ್ದಾರೆ. ಒಂದು ಪಕ್ಷ ಈ ಟೆಸ್ಟ್ ಸೋತರೆ ಸರಣಿ ಡ್ರಾ ಆಗಲಿದೆ. ಆಗ ರವಿಶಾಸ್ತ್ರಿ & ಟೀಂ ಮಾಡಿದ ಸಾಧನೆ ಮಣ್ಣು ಪಾಲಾಗಲಿದೆ.
ಲಾರ್ಡ್ಸ್ ಟೆಸ್ಟ್ ಗೆಲ್ಲಿಸಿದವರೇ ಟೀಮ್ನಲ್ಲಿಲ್ಲ:
ಹೌದು, ಲಾರ್ಡ್ಸ್ ಟೆಸ್ಟ್ (Lords Test) ಗೆಲ್ಲಿಸಿ ಸರಣಿ ಮುನ್ನಡೆ ಪಡೆಯಲು ಕಾರಣರಾದ ಆಟಗಾರರೇ ಈ ಸಲದ ಟೂರ್ನಲ್ಲಿ ಟೀಂ ಇಂಡಿಯಾದಲ್ಲಿಲ್ಲ. ಕೆ ಎಲ್ ರಾಹುಲ್ (KL Rahul) ಸೆಂಚುರಿ ಬಾರಿಸಿದ್ದರು. ರಹಾನೆ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಅರ್ಧಶತಕ ದಾಖಲಿಸಿದ್ದರು. ಇಶಾಂತ್ ಶರ್ಮಾ (Ishant Sharma) 5 ವಿಕೆಟ್ ಪಡೆದಿದ್ದರು. ಆದರೆ ಈ ತ್ರಿಮೂರ್ತಿಗಳು ಈಗ ಟೀಂನಲ್ಲೇ ಇಲ್ಲ. ರಾಹುಲ್ ಗಾಯಾಳುವಾಗಿದ್ದರೆ, ರಹಾನೆ ಹಾಗೂ ಇಶಾಂತ್ ಅವರನ್ನ ಡ್ರಾಪ್ ಮಾಡಲಾಗಿದೆ.
Warm up Match:ಲೀಸಸ್ಟರ್‌ಶೈರ್ ಎದುರು ಟೀಂ ಇಂಡಿಯಾ ಮೇಲುಗೈ
ಈ ಮೂವರ ಜೊತೆ ಮಯಾಂಕ್ ಅಗರ್ವಾಲ್ (Mayank Agarwal), ಅಕ್ಷರ್ ಪಟೇಲ್ (Axar Patel), ಅಭಿಮನ್ಯು ಈಶ್ವರನ್, ವೃದ್ಧಿಮಾನ್ ಸಾಹ, ಪೃಥ್ವಿ ಶಾ, ಅವೇಶ್ ಖಾನ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್ ಸಹ ಕಳೆದ ಟೂರ್ನಲ್ಲಿ ಟೀಂ ಇಂಡಿಯಾದಲ್ಲಿದ್ದರೂ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದ್ರೆ ಈ ಸಲ ಇವರು ಟೀಮ್ನಲ್ಲಿಲ್ಲ. ಒಟ್ನಲ್ಲಿ 9 ತಿಂಗಳಲ್ಲಿ ಟೀಂ ಇಂಡಿಯಾದಲ್ಲಿ ಎಲ್ಲವೂ ಬದಲಾಗಿದೆ. ಆಗಿನ ತಂಡ ಸರಣಿ ಮುನ್ನಡೆ ಪಡೆದುಕೊಟ್ಟಿತ್ತು. ಈಗಿನ ತಂಡ ಸರಣಿ ಗೆಲ್ಲಿಸಿಕೊಡುತ್ತಾ ಅನ್ನೋದು ಇನ್ನು 10 ದಿನಗಳಲ್ಲಿ ಗೊತ್ತಾಗಲಿದೆ.