ಪಾಕ್ ಮೂಲದ ಇಂಗ್ಲೆಂಡ್ ಕ್ರಿಕೆಟಿಗ ಬಶೀರ್‌ಗೆ ಸಿಗದ ಭಾರತದ ವೀಸಾ, ತವರಿಗೆ ವಾಪಸ್!

By Suvarna NewsFirst Published Jan 24, 2024, 6:49 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಜ.25ರಿಂದ ಆರಂಭಗೊಳ್ಳುತ್ತಿದೆ. ಈಗಾಗಲೇ ಇಂಗ್ಲೆಂಡ್ ತಂಡ ಭಾರತಕ್ಕೆ ಆಗಮಿಸಿದೆ. ಆದರೆ ಇಂಗ್ಲೆಂಡ್ ತಂಡದಲ್ಲಿದ್ದ ಪಾಕಿಸ್ತಾನ ಮೂಲದ ಕ್ರಿಕೆಟಿಗ ಶೋಯಿಬ್ ಬಶೀರ್‌ಗೆ ಭಾರತದ ವೀಸಾ ಸಮಸ್ಯೆಯಾಗಿದೆ. ಹೀಗಾಗಿ ಭಾರತ ಪ್ರವಾಸ ಮಾಡಲು ಸಾಧ್ಯವಾಗದೆ ತವರಿಗೆ ಮರಳಿದ ಘಟನೆ ನಡೆದಿದೆ.
 

ನವದೆಹಲಿ(ಜ.25) ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯದ ಟೆಸ್ಟ್ ಸರಣಿ ನಾಳೆ(ಜ.25) ಆರಂಭಗೊಳ್ಳುತ್ತಿದೆ. ಭಾರತವನ್ನು ಸ್ಪಿನ್ ಅಸ್ತ್ರದಿಂದಲೇ ಮಣಿಸಲು ಇಂಗ್ಲೆಂಡ್ ತಂಡ ಪಾಕಿಸ್ತಾನ ಮೂಲದ ಇಂಗ್ಲೆಂಡ್ ಕ್ರಿಕೆಟಿಗ ಶೋಯೆಬ್ ಬಶೀರ್‌ಗೆ ತಂಡದಲ್ಲಿ ಸ್ಥಾನ ನೀಡಿತ್ತು. ಆದರೆ ಪಾಕಿಸ್ತಾನ ಮೂಲದ ಬಶೀರ್‌ಗೆ ಭಾರತ ಪ್ರವಾಸ ಮಾಡಲು ವೀಸಾ ಸಮಸ್ಯೆಯಾಗಿದೆ. ಹೀಗಾಗಿ ಅಬು ಧಾಬಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಶೋಯೆಬ್ ಬಶೀರ್ ವೀಸಾ ಸಮಸ್ಯೆಯಿಂದ ಇದೀಗ ಲಂಡನ್‌ಗೆ ಮರಳಿದ್ದಾರೆ. ಇತ್ತ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್‌ಗೆ ತೀವ್ರ ನಿರಾಸೆಯಾಗಿದ್ದರೆ, ಬ್ರಿಟನ್ ಪ್ರಧಾನಿ ರಿಶಿ ಸುನಕ್, ಭಾರತಕ್ಕೆ ವಿಶೇಷ ಮನವಿ ಮಾಡಿದ್ದಾರೆ.ಶೋಯೆಬ್ ಬಶೀರ್‌ನನ್ನು ಇಂಗ್ಲೆಂಡಿಗ ಎಂದು ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ.

ಭಾರತದ ವಿರುದ್ಧದ ಟೆಸ್ಟ್ ಪಂದ್ಯಕ್ಕ ಇಂಗ್ಲೆಂಡ್ ತಂಡ ಅಬು ಧಾಬಿಯಲ್ಲಿ ಅಭ್ಯಾಸ ಮಾಡಿದೆ. ಸಂಪೂರ್ಣ ತಂಡ ಅಬು ಧಾಬಿ ಪಿಚ್‌ನಲ್ಲಿ ಅಭ್ಯಾಸ ಮಾಡುವ ಮೂಲಕ ಭಾರತವನ್ನು ಮಣಿಸಲು ಭರ್ಜರಿ ಪ್ಲಾನ್ ಮಾಡಿತ್ತು. ಇತ್ತ ಭಾರತದ ಸ್ಪಿನ್ ಅಸ್ತ್ರಕ್ಕೆ ಪ್ರತಿಯಾಗಿ ಪಾಕಿಸ್ತಾನ ಮೂಲದ ಇಂಗ್ಲೆಂಡ್ ಕ್ರಿಕೆಟಿಗ ಶೋಯೆಬ್ ಬಶೀರ್‌ಗೆ ಸ್ಥಾನ ನೀಡಿತ್ತು. ಬಶೀರ್ ಕೂಡ ಇಂಗ್ಲೆಂಡ್ ಜೊತೆಯಲ್ಲಿ ಅಬು ಧಾಬಿಯಲ್ಲಿ ಅಭ್ಯಾಸ ಮಾಡಿದ್ದ.

Latest Videos

'ಇನ್ನಾದರೂ...?' ಶೋಯೆಬ್ ಮಲಿಕ್ ಮದುವೆಯಾಗಿದ್ದನ್ನ ಲೇವಡಿ ಮಾಡಿದ ಶಾಹಿದ್ ಅಫ್ರಿದಿ..! ಏನಂದ್ರು ನೀವೇ ನೋ

ಭಾರತ ಪ್ರವಾಸದ ದಿನಾಂಕ ಆಗಮಿಸಿದರೂ ಪಾಕ್ ಮೂಲದ ಬಶೀರ್ ವೀಸಾ ಸಮಸ್ಯೆಯಾಗಿದೆ. ಇತರ ಇಂಗ್ಲೆಂಡ್ ಕ್ರಿಕೆಟಿಗರ ವೀಸಾ ಯಾವುದೇ ಸಮಸ್ಯೆ ಇಲ್ಲದೆ ಕೈಸೇರಿದೆ. ಆದರೆ ಬಶೀರ್ ಮಾತ್ರ ವೀಸಾ ಸಿಗದೆ ಅಬು ಧಾಬಿಯಿಂದ ಲಂಡನ್‌ಗೆ ಮರಳಿದ್ದಾನೆ. ಇತ್ತ ಇಂಗ್ಲೆಂಡ್ ತಂಡ ಭಾರತಕ್ಕೆ ಬಂದಿಳಿದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನಾಯಕ ಬೆನ್ ಸ್ಟೋಕ್ಸ್, ವೀಸಾ ಕಾರಣದಿಂದ ಪ್ರತಿಭಾನ್ವಿತ ಯುವ ಆಟಗಾರನಿಗೆ ಪ್ರವಾಸ ಮಾಡಲು ಸಾಧ್ಯವಾಗಿಲ್ಲ ಅನ್ನೋದು ತೀವ್ರ ಬೇಸರ ತಂದಿದೆ. ಯುವ ಕ್ರಿಕೆಟಿಗ, ತಂಡದ ಪ್ರಮುಖ ಸದಸ್ಯನ ಅನುಪಸ್ಥಿತಿ ಬೇಸರ ತಂದಿದೆ. ಹಲವು ಬಾರಿ ಇಂತಹ ಸಂದರ್ಭ ಎದುರಾಗಿದೆ. ಪ್ರತಿ ಬಾರಿ ಈ ಘಟನೆಗಳು ಮರುಕಳಿಸಿದಾಗ ವ್ಯವಸ್ಛೆಯೇ ಬೇಸರ ತರಿಸುತ್ತದೆ ಎಂದು ಸ್ಟೋಕ್ಸ್ ಭಾರತದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಶೋಯೆಬ್ ಬಶೀರ್ ಮೂಲ ಪಾಕಿಸ್ತಾನ. ಆದರೆ ಬಶೀರ್ ಇಂಗ್ಲೆಂಡ್ ಪ್ರಜೆಯಾಗಿ ತಂಡದಲ್ಲಿದ್ದಾರೆ. ಇಂಗ್ಲೆಂಡ್ ಕ್ರಿಕೆಟಿಗರನ್ನು ಸಮಾನದಿಂದ ಕಾಣಬೇಕು. ಕ್ರಿಕೆಟಿಗ ಬಶೀರ್‌ನನ್ನು ಇಂಗ್ಲೆಂಡ್ ಕ್ರಿಕೆಟಿಗ ಎಂದು ಪರಿಗಣಿಸಬೇಕು ಎಂದು ಇಂಗ್ಲೆಂಡ್ ಪ್ರಧಾನಿ ರಿಶಿ ಸುನಕ್ ಹೇಳಿದ್ದಾರೆ. ವೀಸಾ ನಿರಾಕರಣೆಯಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.

ಇಂಗ್ಲೆಂಡ್‌ಗೆ ಮೊದಲ ಟೆಸ್ಟಲ್ಲೇ ಭಾರತದಿಂದ ಸ್ಪಿನ್‌ ಪರೀಕ್ಷೆ? ರಾಹುಲ್ ದ್ರಾವಿಡ್‌

click me!