ಅಯೋಧ್ಯೆಯಲ್ಲಿ ವಿರಾಟ್ ಕೊಹ್ಲಿ ಎಂದು ಭಾವಿಸಿ ಆತನ ಡೋಪಲ್ ಗ್ಯಾಂಗರ್‌ಗೆ ಫೋಟೋಗಾಗಿ ಮುತ್ತಿದ ಜನ; ವಿಡಿಯೋ ವೈರಲ್

By Suvarna News  |  First Published Jan 24, 2024, 2:37 PM IST

ರಾಮಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭದ ಹಿಂದಿನ ದಿನ ಅಯೋಧ್ಯೆಯಲ್ಲಿ ವಿರಾಟ್ ಕೊಹ್ಲಿಯನ್ನು ಹೋಲುವ ವ್ಯಕ್ತಿಯನ್ನು ಕೊಹ್ಲಿಯೇ ಎಂದು ಭಾವಿಸಿ ಅಭಿಮಾನಿಗಳು ಫೋಟೋಗಾಗಿ ಮುತ್ತಿಗೆ ಹಾಕಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ.


ರಾಮಮಂದಿರದಲ್ಲಿ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಹಿಂದಿನ ದಿನ ಅಯೋಧ್ಯೆಯಲ್ಲಿ ವಿರಾಟ್ ಕೊಹ್ಲಿಯ ಬೆಂಗಾವಲು ಪಡೆ ಕಂಡುಬಂದಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಅದಾಗಿ ಕೊಂಚ ಹೊತ್ತಿನಲ್ಲೇ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ಟೀಮ್‌ನ ಜೆರ್ಸಿ ಹಾಕಿಕೊಂಡು ದೇವಾಲಯದ ಬಳಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಪಡೆಯೇ ಅವರನ್ನು ಮುತ್ತಿಕೊಂಡಿತು. ಎಲ್ಲ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದ ಕೊಹ್ಲಿ, ಜನ ಹೆಚ್ಚಾಗುತ್ತಿದ್ದಂತೆ ಜಾಗ ಖಾಲಿ ಮಾಡಿದ್ದಾರೆ. ನಂತರವೇ ಜನರಿಗೆ ತಿಳಿದಿದ್ದು ಅದು ವಿರಾಟ್ ಕೊಹ್ಲಿಯಲ್ಲ, ಅವರ ಡೋಪಲ್ ಗ್ಯಾಂಗರ್‌ ಎಂದು !

ವಿರಾಟ್ ಕೊಹ್ಲಿ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಿದರೋ ಇಲ್ಲವೋ ತಿಳಿದು ಬಂದಿಲ್ಲ. ಆದರೆ, ಅವರನ್ನೇ ಹೋಲುವ ವ್ಯಕ್ತಿ ಆ ದಿನ ಜನರನ್ನು ಆಕರ್ಷಿಸಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕೊಂಚ ಹೊತ್ತು ಉತ್ಸಾಹ ಹೆಚ್ಚಿಸಿದರು, ಅಷ್ಟೇ ಅಲ್ಲ ಸ್ಟಾರ್ ಡಂ ರುಚಿ ನೋಡದರು. ಭಾರತ ಕ್ರಿಕೆಟ್ ಟೀಂನ ಜೆರ್ಸಿ, ಸನ್ ಗ್ಲಾಸ್ ಧರಿಸಿ ಕಾಣಿಸಿಕೊಂಡ ಈ ಕೊಹ್ಲಿ ಹೋಲುವ ವ್ಯಕ್ತಿ, ಆರಂಭದಲ್ಲಿ ಜನರೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಾನೆ. ಗುಂಪು ದೊಡ್ಡದಾಗುತ್ತಿದ್ದಂತೆ, ಅವನು ಓಡಿಹೋಗಲು ಪ್ರಯತ್ನಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Tap to resize

Latest Videos

undefined

ಈಸ್‌ ಮೈ ಟ್ರಿಪ್ ಸಂಸ್ಥಾಪಕನ ಜೊತೆ ಕಂಗನಾ ಡೇಟಿಂಗ್?; ನಿಶಾಂತ್ ಜೊತೆಗಿನ ನಟಿಯ ಫೋಟೋ ವೈರಲ್

ಪ್ರಯತ್ನಗಳ ಹೊರತಾಗಿಯೂ, ಆತ ಗುಂಪನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಈ ಘಟನೆಯು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿ ಗಮನವನ್ನು ಗಳಿಸಿತು. ಇಷ್ಟೇ ಸಾಲದೆಂಬಂತೆ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಹೋಲುವ ಮತ್ತೊಬ್ಬರು ಕೂಡಾ ಅಯೋಧ್ಯೆಯಲ್ಲಿ ಕಾಣಿಸಿಕೊಂಡರು. 

ಅಯೋಧ್ಯೆಯಲ್ಲಿನ ಭವ್ಯವಾದ ರಾಮಮಂದಿರ ಸಮಾರಂಭವು ವಿವಿಧ ಶ್ರೇಣಿಯ ಪ್ರಸಿದ್ಧ ವ್ಯಕ್ತಿಗಳು ಸೇರಿದಂತೆ ಸಾವಿರಾರು ಭಕ್ತರನ್ನು ಸೆಳೆಯಿತು.

 

This is what happened to duplicate Virat Kohli in Ayodhya. pic.twitter.com/LdHJhQzKqX

— Piyush Rai (@Benarasiyaa)
click me!