ಕೊಹ್ಲಿ ಸೈನ್ಯಕ್ಕೆ ಕೊರೋನಾ ಆತಂಕ; ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯ ರದ್ದು!

Published : Sep 10, 2021, 03:20 PM ISTUpdated : Sep 10, 2021, 03:30 PM IST
ಕೊಹ್ಲಿ ಸೈನ್ಯಕ್ಕೆ ಕೊರೋನಾ ಆತಂಕ; ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯ ರದ್ದು!

ಸಾರಾಂಶ

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯಕ್ಕೆ ಕೊರೋನಾ ಸಂಕಟ, ಪಂದ್ಯ ರದ್ದು ಇಂಗ್ಲೆಂಡ್ ಹಾಗೂ ಬಿಸಿಸಿಐ ಮಂಡಳಿಯಿಂದ ಒಮ್ಮತದ ನಿರ್ಧಾರ ಕೊರೋನಾ ಪ್ರಕರಣ ಮತ್ತೆ ಪಸರಿಸದಂತೆ ತಡೆಯಲು ಪಂದ್ಯ ರದ್ದು

ಮ್ಯಾಂಚೆಸ್ಟರ್(ಸೆ.10): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ದಿಢೀರ್ ಅಂತ್ಯಗೊಂಡಿದೆ. ಮೊದಲ ಪಂದ್ಯಕ್ಕೆ ಮಳೆ ಕಾಟ ನೀಡಿದರೆ ಅಂತಿಮ ಪಂದ್ಯಕ್ಕೆ ಕೊರೋನಾ ಶಾಕ್ ನೀಡಿದೆ. ಹೀಗಾಗಿ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರದ್ದಾಗಿದೆ.  ಟೆಸ್ಟ್ ಪಂದ್ಯಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಆತಂಕ ಕಾಡುತ್ತಿದೆ. 

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯ ಅನುಮಾನ; ಅಭ್ಯಾಸ ರದ್ದು!

ಓಲ್ಡ್ ಟ್ರಾಫೋರ್ಡ್ ಟೆಸ್ಟ್ ಪಂದ್ಯ ಇಂದಿನಿಂದ(ಸೆ.10) ಆರಂಭಗೊಳ್ಳಬೇಕಿತ್ತು. ನಿನ್ನೆ ಟೀಂ ಇಂಡಿಯಾ ಸಹಾಯಕ ಸಿಬ್ಬಂದಿ(ಫಿಸಿಯೋ) ಯೋಗೇಶ್ ಪಾರ್ಮರ್‌ಗೆ ಕೊರೋನಾ ದೃಢಪಟ್ಟಿತು. ಇದರ ಬೆನ್ನಲ್ಲೇ ಏಷ್ಯಾನೆಟ್ ಸುವರ್ಣನ್ಯೂಸ್ ಅಂತಿಮ ಪಂದ್ಯ ಅನುಮಾನ ಕುರಿತು ವರದಿ ಪ್ರಕಟಿಸಿತ್ತು. ಇದೀಗ ನಿರ್ಧಾರ ಹೊರಬಿದ್ದಿದೆ. 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರದ್ದಾಗಿದೆ.

 

4ನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಕೋಚ್‌ಗಳಾದ ರವಿ ಶಾಸ್ತ್ರಿ, ಭರತ್ ಅರುಣ್ ಹಾಗೂ ಆರ್ ಶ್ರೀಧರ್‌ಗೆ ಕೊರೋನಾ ದೃಢಪಟ್ಟಿತು. ಹೀಗಾಗಿ ಈ ಮೂವರು ಕೋಚ್ ಕ್ವಾರಂಟೈನ್‌ಗೆ ಒಳಗಾಗಿದ್ದರು. ಇತ್ತ ಕಠಿಣ ಕೊರೋನಾ ನಿಯಮ ಪಾಲನೆ ಮೂಲಕ 4ನೇ ಪಂದ್ಯ ಯಶಸ್ವಿಯಾಗಿ ಮುಗಿದಿತ್ತು. ಟೀಂ ಇಂಡಿಯಾ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು.

ಪೀಪಿ ಟ್ರೋಲ್‌: ಕೊಹ್ಲಿ ಪರ ಬ್ಯಾಟ್‌ ಬೀಸಿದ ಇಂಗ್ಲೆಂಡ್ ಮಾಜಿ ನಾಯಕ ವಾನ್‌..!

ಅಂತಿಮ ಪಂದ್ಯ ಗೆಲುವಿನ ವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ಫಿಸಿಯೋಗೆ ಕೊರೋನಾ ಆಘಾತ ತಂದಿತ್ತು. ಹೀಗಾಗಿ ಮ್ಯಾಂಚೆಸ್ಟರ್ ಬಂದಿಳಿದ ಆಟಗಾರರ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪಂದ್ಯ ರದ್ದು ಮಾಡುವ ಕುರಿತು ಬಿಸಿಸಿಐ ಜೊತೆ ಮಾತುಕತೆ ನಡೆಸಿತ್ತು. ಆದರೆ ಬಿಸಿಸಿಐ ಆಟಗಾರರ ಫಲಿತಾಂಶದ ಬಳಿಕ ನಿರ್ಧರಿಸುವುದು ಸೂಕ್ತ ಎಂದಿತ್ತು. ಇದೀಗ ಪಂದ್ಯ ರದ್ದು ಮಾಡಲಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಗೆ ಪ್ರತಿ ಟೆಸ್ಟ್ ಪಂದ್ಯ ಅತೀ ಮುಖ್ಯವಾಗಿದೆ. ಹೀಗಾಗಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಮುಂದುವರಿಸುವ ಕುರಿತು ಉಭಯ ತಂಡಗಳು ಮಾತುಕತೆ ನಡೆಸುತ್ತಿದೆ. ಮುಂದಿನ ವರ್ಷದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಪಂದ್ಯ ಆಡಿಸುವ ಕುರಿತು ಚರ್ಚೆಗಳು ನಡೆಯುತ್ತಿದೆ. ಇನ್ನು ಸರಣಿ ಅಂತ್ಯಗೊಳಿಸಿ ಅಂತಿಮ ಪಂದ್ಯದ ಅಂಕ ಹಂಚಬೇಕು ಅನ್ನೋ ವಾದವೂ ಇದೆ. ಸದ್ಯ ಟೀಂ ಇಂಡಿಯಾ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?