ಧೋನಿ ವಿರುದ್ಧ ದಾಖಲಾಯ್ತು ದೂರು; ಟೀಂ ಇಂಡಿಯಾಗೆ ಮೆಂಟರ್ ಸೇವೆ ಸಿಗುವುದು ಅನುಮಾನ!

By Suvarna NewsFirst Published Sep 9, 2021, 7:27 PM IST
Highlights
  • ಟಿ20 ವಿಶ್ವಕಪ್ ಟೂರ್ನಿ, ಭಾರತ ತಂಡಕ್ಕೆ ಧೋನಿ ಮೆಂಟರ್
  • ಎಂ.ಎಸ್.ಧೋನಿ ವಿರುದ್ಧ ದಾಖಲಾಯಿತು ದೂರು
  • ಧೋನಿ ಮೆಂಟರ್ ಸೇವೆಗೆ ಎದುರಾಯ್ತು ಅಡತೆಡೆ

ಮುಂಬೈ(ಸೆ.09): ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ತಂಡ ಪ್ರಕಟಗೊಂಡ ಬೆನ್ನಲ್ಲೇ ಭಾರತೀಯ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಈ ಬಾರಿ ಟ್ರೋಫಿ ಸಾಧ್ಯತೆಯನ್ನು ಖಚಿತಪಡಿಸಿದ್ದರು. ಕಾರಣ ಆಯ್ಕೆ ಸಮಿತಿ ಟೀಂ ಇಂಡಿಯಾ ಮೆಂಟರ್ ಆಗಿ ಮಾಜಿ ಯಶಸ್ವಿ ನಾಯಕ ಎಂ.ಎಸ್.ಧೋನಿಯನ್ನು ಆಯ್ಕೆ ಮಾಡಿತ್ತು. ಧೋನಿ ಮಾರ್ಗದರ್ಶನ, ಕೊಹ್ಲಿ ನಾಯಕತ್ವದಲ್ಲಿ ತಂಡ ಟ್ರೋಫಿ ಗೆಲ್ಲಲಿದೆ ಅನ್ನೋದು ಅಭಿಮಾನಿಗಳ ಅಚಲ ವಿಶ್ವಾಸ. ಆದರೆ ಟೀಂ ಇಂಡಿಯಾಗೆ ಧೋನಿ ಮೆಂಟರ್ ಸೇವೆ ಸಿಗುವುದು ಅನುಮಾನವಾಗತೊಡಗಿದೆ. ಇದಕ್ಕೆ ಕಾರಣ ಧೋನಿ ವಿರುದ್ಧ ದೂರು ದಾಖಲಾಗಿದೆ.

ಟಿ20 ವಿಶ್ವಕಪ್‌ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ; ಎಂ.ಎಸ್. ಧೋನಿ ಮೆಂಟರ್

ಸ್ವಹಿತಾಸಕ್ತಿ ಆರೋಪ ಧೋನಿ ವಿರುದ್ಧ ಕೇಳಿಬಂದಿದೆ. ಆಯ್ಕೆ ಸಮಿತಿ ಧೋನಿಯನ್ನು ಟೀಂ ಇಂಡಿಯಾ ಮೆಂಟರ್ ಆಗಿ ಆಯ್ಕೆ ಮಾಡಿದ ಬೆನ್ನಲ್ಲೇ ಧೋನಿ ವಿರುದ್ಧ ಬಿಸಿಸಿಐ ಅಪೆಕ್ಸ್ ಕೌನ್ಸಿಲ್‌ನಲ್ಲಿ ದೂರು ದಾಖಲಾಗಿದೆ. ಧೋನಿ ಮೆಂಟರ್ ಆಗಿ ಆಯ್ಕೆ ಮಾಡಿರುವುದೇ ಸ್ವಹಿತಾಸಕ್ತಿ ಆರೋಪಕ್ಕೆ ಕಾರಣವಾಗಿದೆ.

ಲೋಧ ಸಮಿತಿ ನೀಡಿರುವ ಶಿಫಾರಸಿನ ಪ್ರಕಾರ, ಕ್ರಿಕೆಟಿಗ ಏಕಕಾಲಕ್ಕೆ ಎರಡೆರಡು ಹುದ್ದೆ ಹೊಂದುವಂತಿಲ್ಲ. ಹೀಗಾದಲ್ಲಿ ಕಾನ್‌ಫ್ಲಿಕ್ಟ್ ಆಫ್ ಇಂಟ್ರೆಸ್ಟ್(ಸ್ವಹಿತಾಸಕ್ತಿ) ಆರೋಪ ಎದುರಾಗಲಿದೆ. ಸದ್ಯ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ, ಇದೇ ವೇಳೆ ಧೋನಿ ಟೀಂ ಇಂಡಿಯಾ ಮೆಂಟರ್ ಆಗಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ. ಇದು ಲೋಧ ಸಮಿತಿ ಶಿಫಾರಸು ಉಲ್ಲಂಘನೆಯಾಗಲಿದೆ ಎಂದು ಧೋನಿ ವಿರುದ್ಧ ದೂರು ದಾಖಲಾಗಿದೆ.

T20 World Cup ಎಂ ಎಸ್ ಧೋನಿ ಟೀಂ ಇಂಡಿಯಾದ ಮುಂದಿನ ಪ್ರಧಾನ ಕೋಚ್‌?

ದೂರು ದಾಖಲಾಗಿರುವ ಕಾರಣ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಈ ಕುರಿತು ತನಿಖೆ ನಡೆಸಲಿದೆ. ಅಪೆಕ್ಸ್ ಕೌನ್ಸಿಲ್ ಧೋನಿಗೆ ಕ್ಲೀನ್ ಚಿಟ್ ನೀಡಿದರೆ ಮಾತ್ರ ಮೆಂಟರ್ ಆಗಿ ಸೇವೆ ಸಲ್ಲಿಸಲು ಸಾಧ್ಯವಾಗಲಿದೆ. ಸದ್ಯ ಧೋನಿ ದುಬೈನಲ್ಲಿ ಐಪಿಎಲ್ ಟೂರ್ನಿ       ತಯಾರಿಯಲ್ಲಿದ್ದಾರೆ. ಹೀಗಾಗಿ ವಿಚಾರಣೆ ಕಷ್ಟವಾಗಲಿದೆ. ಹೀಗಾಗಿ ಬಿಸಿಸಿಐ ಕಾನೂನು ತಜ್ಞರ ಮೊರೆ ಹೋಗಿದೆ. ಶೀಘ್ರದಲ್ಲಿ ಪರಿಹಾರ ಒದಗಿಸಲು ಬಿಸಿಸಿಐ ಮುಂದಾಗಿದೆ.
 

click me!