
ಮುಂಬೈ: ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿರುವ ಭಾರತ, ಭಾನುವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ 5ನೇ ಪಂದ್ಯವನ್ನೂ ಗೆದ್ದು ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.
ಮೊದಲೆರಡು ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಪಡೆದಿದ್ದ ಭಾರತ, 3ನೇ ಪಂದ್ಯದಲ್ಲಿ ಸೋಲುಂಡಿತ್ತು. ಆದರೆ ಪುಣೆಯಲ್ಲಿ ನಡೆದ 4ನೇ ಪಂದ್ಯದಲ್ಲಿ ಗೆಲುವು ಸಾಧಿಸಿ, ಸರಣಿ ಜಯಿಸಿದ ಭಾರತ ಈ ಪಂದ್ಯದಲ್ಲಿ ಕೆಲ ಪ್ರಯೋಗಗಳಿಗೆ ಮುಂದಾಗಬಹುದು. ಜೊತೆಗೆ ರನ್ ಬರ ಎದುರಿಸುತ್ತಿರುವ ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್, ಲಯಕ್ಕೆ ಮರಳಲು ಎದುರು ನೋಡುತ್ತಿದ್ದಾರ. ಮತ್ತೊಂದೆಡೆ, ಕೊನೆಯ ಪಂದ್ಯವನ್ನು ಗೆದ್ದು ಏಕದಿನ ಸರಣಿಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಇಂಗ್ಲೆಂಡ್ ಕಾತರಿಸುತ್ತಿದೆ.
ಭಾರತದ ಶ್ರೀಮಂತ ಕ್ರಿಕೆಟಿಗ: ಕೊಹ್ಲಿ, ಧೋನಿ ಅಲ್ಲವೇ ಅಲ್ಲ! ಹಾಗಿದ್ರೆ ಮತ್ತೆ ಯಾರು?
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಅಭಿಷೇಕ್, ಸ್ಯಾಮ್ಸನ್, ಸೂರ್ಯ (ನಾಯಕ), ತಿಲಕ್, ಹಾರ್ದಿಕ್, ರಿಂಕು ಸಿಂಗ್, ಅಕ್ಷ ಪಟೇಲ್, ರಮಣ್ ದೀಪ್, ವಾಷಿಂಗ್ಟನ್ ಶಮಿ, ಬಿಷ್ಣೋಯ್, ವರುಣ್.
ಇಂಗ್ಲೆಂಡ್: ಸಾಲ್ಟ್, ಡಕೆಟ್, ಬಟ್ಲರ್ (ನಾಯಕ), ಬ್ರೂಕ್, ಲಿವಿಂಗ್ ಸ್ಟೋನ್, ಸ್ಮಿತ್ /ಬೆಥ್ ಹೆಲ್, ಓವರ್‌ನ್, ಕಾರ್ಸ್, ಆರ್ಚರ್, ಮಾರ್ಕ್‌ವುಡ್, ಆದಿಲ್ ರಶೀದ್.
ಪಂದ್ಯ ಆರಂಭ: ಸಂಜೆ 7ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್
ಅಂಡರ್-19 ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಸತತ 2ನೇ ವಿಶ್ವಕಪ್ ಗುರಿ
ಕೌಲಾಲಂಪುರ: ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿರುವ ಭಾರತ, ಭಾನುವಾರ ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಸತತ 2ನೇ ವಿಶ್ವಕಪ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಭಾರತ, ಟೂರ್ನಿಯುದ್ದಕ್ಕೂ ಅಧಿಕಾರಯುತ ಗೆಲುವುಗಳನ್ನು ಸಾಧಿಸಿದೆ.
ಗುಂಪು ಹಂತದಲ್ಲಿ 3, ಸೂಪರ್-6ನಲ್ಲಿ 2 ಹಾಗೂ ಸೆಮಿಫೈನಲ್‌ನಲ್ಲಿ ನಿರಾಯಾಸವಾಗಿ ಗೆದ್ದಿರುವ ಭಾರತ, ಮತ್ತೊಮ್ಮೆ ಭರ್ಜರಿ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.
'ನಾನಂತೂ ಒಪ್ಪಲ್ಲ'; ಟಿ20 ಸರಣಿ ಸೋಲಿನ ಬೆನ್ನಲ್ಲೇ ಭಾರತದ ಎದುರು ತಿರುಗಿ ಬಿದ್ದ ಬಟ್ಲರ್!
ಕರ್ನಾಟಕದ ನಿಕಿ ಪ್ರಸಾದ್ ನೇತೃತ್ವದ ತಂಡ, ಎಲ್ಲಾ ಮೂರೂ ವಿಭಾಗಗಳಲ್ಲಿ ಅತ್ಯುತ್ತಮ ಲಯದಲ್ಲಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದೆ. ಬ್ಯಾಟರ್‌ಗಳಾದ ತ್ರಿಶಾ, ಕಮಲಿನಿ, ಸ್ಪಿನ್ನರ್‌ಗಳಾದ ವೈಷ್ಣವಿ, ಪಾರುಣಿಕಾ, ಆಯುಷಿ ತಂಡದ ಟ್ರಂಪ್‌ಕಾರ್ಡ್‌ಗಳೆನಿಸಿದ್ದಾರೆ.
ಇನ್ನು, ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ಚೊಚ್ಚಲ ಪ್ರಶಸ್ತಿ ಗೆಲುವಿಗೆ ಕಾತರಿಸುತ್ತಿದೆ.
ಪಂದ್ಯ ಆರಂಭ: ಮಧ್ಯಾಹ್ನ 12ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.