ಭಾರತ-ಇಂಗ್ಲೆಂಡ್ ಟಿ20: ಪುಣೆಯಲ್ಲಿಂದು ಟೀಂ ಇಂಡಿಯಾಗೆ ಸರಣಿ ಗೆಲ್ಲುವ ಟಾರ್ಗೆಟ್

Published : Jan 31, 2025, 10:37 AM IST
ಭಾರತ-ಇಂಗ್ಲೆಂಡ್ ಟಿ20: ಪುಣೆಯಲ್ಲಿಂದು ಟೀಂ ಇಂಡಿಯಾಗೆ ಸರಣಿ ಗೆಲ್ಲುವ ಟಾರ್ಗೆಟ್

ಸಾರಾಂಶ

ಭಾರತ-ಇಂಗ್ಲೆಂಡ್ ನಾಲ್ಕನೇ ಟಿ20 ಪಂದ್ಯ ಶುಕ್ರವಾರ ನಡೆಯಲಿದೆ. ಸರಣಿ ಗೆಲ್ಲುವ ಉತ್ಸಾಹದಲ್ಲಿರುವ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ ಫಾರ್ಮ್ ಕಳವಳಕಾರಿ. ಗಾಯಗೊಂಡಿದ್ದ ರಿಂಕು ಸಿಂಗ್ ಪುನರಾಗಮನ ಸಂಭವ. ಶಮಿ ಲಯ ಕಂಡುಕೊಳ್ಳುವತ್ತ ಗಮನ. ಇಂಗ್ಲೆಂಡ್ ಸಮಬಲ ಸಾಧಿಸುವ ಗುರಿಯಲ್ಲಿದೆ.

ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ರನ್ ಹೊಳೆ ಹರಿಯಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆಈಡೇರದೆ ಇದ್ದರೂ ಸರಣಿಯಲ್ಲಿ ರೋಚಕತೆಗೆ ಯಾವುದೇ ಕೊರತೆ ಆಗಿಲ್ಲ. ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗಿದ್ದ ಭಾರತ, 3ನೇ ಪಂದ್ಯವನ್ನೂ ಜಯಿಸಿ ಸರಣಿ ವಶಪಡಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲಿತ್ತು. ಶುಕ್ರವಾರ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಕ್ರೀಡಾಂಗಣದಲ್ಲಿ 4ನೇ ಪಂದ್ಯ ನಡೆಯಲಿದ್ದು, ಸರಣಿ ವಶಪಡಿಸಿಕೊಳ್ಳಲು ಟೀಂ ಇಂಡಿಯಾ ಕಾತರಿಸುತ್ತಿದೆ.

ಈ ದ್ವಿಪಕ್ಷೀಯ ಸರಣಿ ಅಷ್ಟಾಗಿ ಮಹತ್ವ ಪಡೆಯದಿದ್ದರೂ, ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಸೂಕ್ತ ಆಟಗಾರರನ್ನು ಗುರುತಿಸಲು ಸಹಕಾರಿಯಾಗಲಿದೆ. ಕಳೆದ ವರ್ಷ ದ.ಆಫ್ರಿಕಾ ಪ್ರವಾಸದಲ್ಲಿ ಅಬ್ಬರಿಸಿ ಭಾರತ ಟಿ20 ತಂಡದಲ್ಲಿ ಕಾಯಂ ಸ್ಥಾನ ಪಡೆದಿದ್ದ ಸಂಜು ಸ್ಯಾಮನ್, ಈ ಸರಣಿಯಲ್ಲಿ ತಮ್ಮ ಲಯ ಕಾಯ್ದುಕೊಳ್ಳಲು ವಿಫಲರಾಗಿದ್ದಾರೆ. ಇಂಗ್ಲೆಂಡ್‌ನ ಎಕ್ಸ್‌ಪ್ರೆಸ್ ವೇಗಿಗಳಾದ ಜೋಫ್ರಾ ಆರ್ಚರ್, ಮಾರ್ಕ್ ವುಡ್‌ ವೇಗದ ಎದುರು ಸ್ಯಾಮನ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲು ವಿಫಲರಾಗುತ್ತಿದ್ದಾರೆ. ಹೀಗಾಗಿ, ಸ್ಯಾಮ್ನನ್‌ಗೆ ಮೇಲೆ ಭಾರಿ ಒತ್ತಡವಿದೆ.

ರಣಜಿ ಟ್ರೋಫಿ ಕಮ್‌ಬ್ಯಾಕ್‌ನಲ್ಲಿ ರಾಹುಲ್ ಕೇವಲ 26ಕ್ಕೆ ಔಟ್!

ಮತ್ತೊಂದೆಡೆ, ಗಾಯದಿಂದಾಗಿ 2, 3ನೇ ಟಿ20 ಪಂದ್ಯಗಳಿಗೆ ಗೈರಾಗಿದ್ದ ರಿಂಕುಸಿಂಗ್, ಫಿಟ್ ಆಗಿದ್ದು ಈ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ. ಧೃವ್ ಜುರೆಲ್ ತಮ್ಮ ಸ್ಥಾನವನ್ನು ರಿಂಕುಗೆ ಬಿಟ್ಟುಕೊಡಬೇಕಾಗಬಹುದು. ಇನ್ನು ವಾಷಿಂಗ್ಟನ್ ಸುಂದರ್ ಬದಲು ವೇಗದ ಬೌಲಿಂಗ್ ಆಲ್ರೌಂಡರ್‌ಗಳಾದ ಶಿವಂ ದುಬೆ ಅಥವಾ ರಮಣ್‌ ದೀಪ್ ಸಿಂಗ್ ಗೆ ಅವಕಾಶ ಸಿಗಬಹುದು.

ರಾಜ್‌ಕೋಟ್‌ನಲ್ಲಿ ನಡೆದ 3ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 14 ತಿಂಗಳುಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ವೇಗಿ ಮೊಹಮದ್ ಶಮಿ, ಈ ಪಂದ್ಯದಲ್ಲಿ ಲಯ ಕಂಡುಕೊಳ್ಳಲು ಕಾತರಿಸುತ್ತಿದ್ದಾರೆ. ಮತ್ತೊಮ್ಮೆ ವರುಣ್ ಚಕ್ರವರ್ತಿಯೇ ಭಾರತದ ಪಾಲಿಗೆ ಟ್ರಂಪ್ ಕಾರ್ಡ್ ಎನಿಸಲಿದ್ದಾರೆ.

ಚೋಲೆ ಬಟೋರೆ, ಬಟರ್ ಚಿಕನ್ ಅಲ್ಲ, ಕೊಹ್ಲಿಗೆ ಈ ಸಲ ಲಂಚ್‌ನಲ್ಲಿ ಸಿಗುತ್ತೆ ಫೇವರೇಟ್ ಫುಡ್

ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಗೆದ್ದು, ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ಇಂಗ್ಲೆಂಡ್, ಈ ಪಂದ್ಯವನ್ನೂ ಗೆದ್ದು ಸಮಬಲ ಸಾಧಿಸುವ ನಿರೀಕ್ಷೆಯಲ್ಲಿದೆ. ಒಂದುವೇಳೆ ಇಂಗ್ಲೆಂಡ್ ಗೆದ್ದರೆ, ಮುಂಬೈನಲ್ಲಿ ನಡೆಯಲಿರುವ 5ನೇ ಪಂದ್ಯ ಎರಡೂ ತಂಡಗಳಿಗೆ ಸರಣಿ ಗೆಲ್ಲಲು ವೇದಿಕೆ ಒದಗಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ ಅಭಿಷೇಕ್, ಸ್ಯಾನ್ಸನ್, ಸೂರ್ಯ (ನಾಯಕ), ತಿಲಕ್, ಹಾರ್ದಿಕ್, ರಿಂಕು ಸಿಂಗ್, ಅಕ್ಷ‌ ಪಟೇಲ್, ರಮಣ್ ದೀಪ್, ವಾಷಿಂಗ್ಟನ್ ಶಮಿ, ಬಿಷ್ಣೋಯ್, ವರುಣ್.

ಇಂಗ್ಲೆಂಡ್ ಸಾಲ್ಟ್, ಡಕೆಟ್, ಬಟ್ಲರ್ (ನಾಯಕ), ಬ್ರೂಕ್, ಲಿವಿಂಗ್ ಸ್ಟೋನ್, ಸ್ಮಿತ್ /ಬೆಥ್ ಹೆಲ್, ಓವರ್‌ನ್‌, ಕಾರ್ಸ್, ಆರ್ಚರ್, ಮಾರ್ಕ್‌ವುಡ್, ಆದಿಲ್ ರಶೀದ್.

ಪಂದ್ಯ ಆರಂಭ: ಸಂಜೆ 7ಕ್ಕೆ, 
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್‌‌
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ