
ಕಟಕ್: ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು 4-1ರಲ್ಲಿ ಗೆದ್ದುಕೊಂಡಿರುವ ಟೀಂ ಇಂಡಿಯಾ ಈಗ ಪ್ರವಾಸಿ ತಂಡದ ವಿರುದ್ಧ ಏಕದಿನ ಸರಣಿಯನ್ನೂ ಕೈವಶಪಡಿಸಿಕೊಳ್ಳುವ ಕಾತರದಲ್ಲಿದೆ. ನಾಗ್ಪುರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ರೋಹಿತ್ ಶರ್ಮಾ ನಾಯಕತ್ವದ ಭಾರತ, ಕಟಕ್‌ನಲ್ಲೂ ಇಂಗ್ಲೆಂಡ್‌ನ ಕಟ್ಟಿಹಾಕುವ ವಿಶ್ವಾಸದಲ್ಲಿದೆ.
ಭಾರತಕ್ಕೆ ಸದ್ಯ ಸರಣಿ ಗೆಲುವಿಗಿಂತಲೂ ಹೆಚ್ಚು ಆಟಗಾರರ ಲಯದ್ದೇ ಚಿಂತೆಯಾಗಿದೆ. ಅದರಲ್ಲೂ ನಾಯಕ ರೋಹಿತ್ ಶರ್ಮಾ ಕಳಪೆ ಪ್ರದರ್ಶನ ತಂಡದ ಆಡಳಿತಕ್ಕೆ ಹೆಚ್ಚಿನ ತಲೆನೋವು ತಂದಿಟ್ಟಿದೆ. ಟೆಸ್ಟ್ ಸರಣಿಯಲ್ಲಿ ತೀರಾ ಕಳಪೆಯಾಗಿ ಆಡಿದ್ದ ರೋಹಿತ್ ಶರ್ಮಾ, ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನದಲ್ಲಿ ಕೇವಲ 2 ರನ್‌ಗೆ ಔಟಾಗಿದ್ದರು. ಚಾಂಪಿಯನ್ಸ್ ಟ್ರೋಫಿಗೆ ಇನ್ನು ಕೆಲ ದಿನಗಳಿರುವಾಗಲೇ ರೋಹಿತ್ ಲಯಕ್ಕೆ ಮರಳಲು ಹೆಣಗಾಡುತ್ತಿರುವುದು ತಂಡದ ಆತ್ಮವಿಶ್ವಾಸ ಕುಗ್ಗಿಸುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿರುವುದು ತುರ್ತು ಅಗತ್ಯ.
ಕರುಣ್ ನಾಯರ್ ಮತ್ತೆ ಶತಕ: ತಮಿಳುನಾಡು ವಿರುದ್ಧ ಕ್ವಾರ್ಟರ್‌ನಲ್ಲಿ ಅಬ್ಬರದ ಆಟ
ಕೊಹ್ಲಿ ಕಮ್‌ಬ್ಯಾಕ್: ಮಂಡಿ ನೋವಿನಿಂದಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಆಡಲಿದ್ದಾರೆ. ಟೆಸ್ಟ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಕೊಹ್ಲಿ ಕೂಡಾ ಲಯಕ್ಕೆ ಮರಳಲು ಕಾಯುತ್ತಿದ್ದಾರೆ. ಆದರೆ ಕೊಹ್ಲಿಗೆ ಯಾರು ಜಾಗ ಬಿಟ್ಟುಕೊಡಲಿದ್ದಾರೆ ಎಂಬ ಕುತೂಹಲವಿದೆ.
ಕೊಹ್ಲಿ ಆಡದಿದ್ದಾಗ ಅವರ ಬದಲು ತಮಗೆ ಸ್ಥಾನ ಸಿಕ್ಕಿತ್ತು ಎಂದು ಶ್ರೇಯಸ್ ಅಯ್ಯರ್ ಮೊದಲ ಪಂದ್ಯದ ಬಳಿಕ ಹೇಳಿದ್ದರು. ಆದರೆ ಶ್ರೇಯಸ್ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. ಹೀಗಾಗಿ 2ನೇ ಪಂದ್ಯದಲ್ಲಿ ಶ್ರೇಯಸ್‌ರನ್ನು ಹೊರಗಿಡುವುದು ಹೇಗೆ ಎಂಬ ಪ್ರಶ್ನೆ ಈಗ ತಂಡದ ಆಡಳಿತದ ಮುಂದಿದೆ. ಆರಂಭಿಕ ಪಂದ್ಯದ ಮೂಲಕ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದ ಯಶಸ್ವಿ ಜೈಸ್ವಾಲ್‌ರನ್ನು ಈ ಪಂದ್ಯದಿಂದ ಕೈಬಿಡುವ ಸಾಧ್ಯತೆ ಹೆಚ್ಚು. ಹೀಗಾದರೆ ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯಬೇಕಾಗುತ್ತದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಈ 3 ತಂಡಗಳು ಸೆಮೀಸ್ ಪ್ರವೇಶಿಸಲಿವೆ: ಅಚ್ಚರಿ ಭವಿಷ್ಯ ನುಡಿದ ಶೋಯೆಬ್ ಅಖ್ತರ್
ಪುಟಿದೇಳುತ್ತಾ ಇಂಗ್ಲೆಂಡ್?: ಮತ್ತೊಂದೆಡೆ ಇಂಗ್ಲೆಂಡ್ ಟಿ20 ಸರಣಿ ಸೋಲಿನ ಆಘಾತದಲ್ಲಿದ್ದು, ಏಕದಿನ ಸರಣಿ ಉಳಿಸಿಕೊಳ್ಳುವ ಒತ್ತಡದಲ್ಲಿದೆ.
ಸಂಭವನೀಯ ಆಟಗಾರರು
ಭಾರತ
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ
ಇಂಗ್ಲೆಂಡ್
ಫಿಲ್ ಸಾಲ್ಟ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜೇಕೊಬ್ ಬೆಥೆಲ್, ಕಾರ್ಸ್, ಜೋಫ್ರಾ ಆರ್ಚರ್, ಸಾಕಿಬ್ ಮೊಹಮದ್, ಆದಿಲ್ ರಶೀದ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಹಾಟ್‌ಸ್ಟಾರ್.
ಪಿಚ್ ರಿಪೋರ್ಟ್
ಕಟಕ್ ಕ್ರೀಡಾಂಗಣದ ಪಿಚ್ ಸ್ಪರ್ಧಾತ್ಮಕವಾಗಿದ್ದು, ದೊಡ್ಡ ಮೊತ್ತ ದಾಖಲಾದ ಉದಾಹರಣೆ ಕಡಿಮೆ. ಇಲ್ಲಿ ಒಟ್ಟು 38 ಇನ್ನಿಂಗ್ಸ್‌ಗಳಲ್ಲಿ 6 ಬಾರಿ ಮಾತ್ರ 300+ ರನ್ ದಾಖಲಾಗಿದೆ. ಇಲ್ಲಿ ಮಂಜು ಬೀಳುವ ಸಾಧ್ಯತೆ ಇರುವುದರಿಂದ ಟಾಸ್ ಗೆಲ್ಲುವ ತಂಡ ಚೇಸಿಂಗ್ ಆಯ್ಕೆ ಮಾಡಿಕೊಳ್ಳಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.