ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯಕ್ಕೆ ರೆಡಿಯಾಗಿದೆ. ಮೊದಲ ಪಂದ್ಯದಲ್ಲಿ ಯಾರಿಗೆ ಅವಕಾಶ ಸಿಗಲಿದೆ. ಟೀಂ ಇಂಡಿಯಾ ಆಡೋ ಹನ್ನೊಂದರ ಬಳಗ ಹೇಗಿದೆ? ಇಲ್ಲಿದೆ ವಿವರ.
ನವದೆಹಲಿ(ನ.02): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ(ಫಿರೋಜ್ ಶಾ ಕೋಟ್ಲಾ)ದಲ್ಲಿ ನಡೆಯಲಿರುವ ಮಹತ್ವದ ಪಂದ್ಯಕ್ಕೆ ತಂಡಗಳೂ ಕೂಡ ಭರ್ಜರಿ ತಯಾರಿ ನಡೆಸಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ಬಾಂಗ್ಲಾ ವಿರುದ್ದ ಅಜೇಯ ಓಟ ಮುಂದುವರಿಸಲು ರೆಡಿಯಾಗಿದೆ.
ಇದನ್ನೂ ಓದಿ: ಇಂಜುರಿ ರೋಹಿತ್ ಶರ್ಮಾ ವೈದ್ಯಕೀಯ ರಿಪೋರ್ಟ್ ಬಹಿರಂಗ!
ಬಾಂಗ್ಲಾದೇಶ ವಿರುದ್ದ ಟೀಂ ಇಂಡಿಯಾ 8 ಪಂದ್ಯಗಳನ್ನು ಆಡಿದ್ದು, 8ರಲ್ಲೂ ಗೆಲುವು ಸಾಧಿಸಿದೆ. ಹೀಗಾಗಿ ದೆಹಲಿಯಲ್ಲಿ ಆರಂಭವಾಗಲಿರುವ ದ್ವಿಪಕ್ಷೀಯ ಟಿ20 ಸರಣಿಯಲ್ಲೂ ಇದೇ ಪ್ರದರ್ಶನ ಮುಂದುವರಿಸಲು ರೋಹಿತ್ ಪಡೆ ಕಾತರಗೊಂಡಿದೆ. ಮೊದಲ ಪಂದ್ಯಕ್ಕಾಗಿ ಟೀಂ ಇಂಡಿಯಾದ ಸಂಭವನೀಯ ತಂಡ ಇಲ್ಲಿದೆ.
ಇದನ್ನೂ ಓದಿ: ಭಾರತ vs ಬಾಂಗ್ಲಾದೇಶ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!
ಭಾರತ ಸಂಭವನೀಯ ತಂಡ:
ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ಶಿವಂ ದುಬೆ, ಕ್ರುನಾಲ್ ಪಾಂಡ್ಯ, ವಾಶಿಂಗ್ಟನ್ ಸುಂದರ್, ದೀಪಕ್ ಚಹಾರ್, ಖಲೀಲ್ ಅಹಮ್ಮದ್, ಯುಜುವೇಂದ್ರ ಚೆಹಾಲ್
ಬಾಂಗ್ಲಾದೇಶ ಸಂಭವನೀಯ ತಂಡ:
ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಮುಷ್ಫಿಕರ್ ರಹೀಮ್, ಮೊಹಮ್ಮದುಲ್ಲಾ(ನಾಯಕ), ಮೊಸಾದೆಕ್ ಹುಸೈನ್, ಆಫಿಫ್ ಹುಸೈನ್, ಅಮಿನಲ್ ಇಸ್ಲಾಮ್, ಆರಾಫತ್ ಸನ್ನಿ, ತೈಜುಲ್ ಇಸ್ಲಾಂ, ಶೈಫುಲ್ ಇಸ್ಲಾಂ, ಮುಸ್ತಾಫಿಜುರ್ ರಹಮಾನ್