
ಹೋಬರ್ಟ್(ನ.02): ಆಸ್ಟ್ರೇಲಿಯಾದ ಜಾರ್ಜ್ ಬೈಲಿ ವಿಚಿತ್ರ ಬ್ಯಾಟಿಂಗ್ ಶೈಲಿಯೊಂದಿಗೆ ಆಗ್ಗಾಗೆ ಗಮನ ಸೆಳೆಯುತ್ತಿರುತ್ತಾರೆ. ಶುಕ್ರವಾರ ಇಲ್ಲಿ ನಡೆದ ದೇಶಿ ಟೂರ್ನಿ ಶೆಫೀಲ್ಡ್ ಶೀಲ್ಡ್‌ನ ವಿಕ್ಟೋರಿಯಾ ವಿರುದ್ಧದ ಪಂದ್ಯದಲ್ಲಿ ಟಾಸ್ಮೇನಿಯಾದ ಬೈಲಿ, ಚೆಂಡನ್ನು ಎದುರಿಸುವಾಗ ವಿಕೆಟ್ ಕೀಪರ್ ನತ್ತ ಮುಖ ಮಾಡಿದ್ದರು.
ಅತಿ ಹೆಚ್ಚು ಎಸೆತಗಳನ್ನೆದುರಿಸಿದ ಕ್ರಿಕೆಟಿಗರು; ಐವರಲ್ಲಿ ನಾಲ್ವರು ಕ್ಯಾಪ್ಟನ್..!
ಬೌಲರ್ ಇನ್ನೇನು ಚೆಂಡನ್ನು ಎಸೆಯಬೇಕು ಎನ್ನುವಾಗ ಸಹಜ ಸ್ಥಿತಿಗೆ ಮರಳಿ ಚೆಂಡನ್ನು ಬಾರಿಸಿದರು. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ವೆಬ್‌ಸೈಟ್‌ನಲ್ಲಿ ಈ ವಿಡಿಯೋವನ್ನು ಹಾಕಿದ್ದು, ವಿಡಿಯೋ ವೈರಲ್ ಆಗಿದೆ.
ಹೀಗಿತ್ತು ನೋಡಿ ಆ ಕ್ಷಣ:
ಮೊದಲು ಬ್ಯಾಟ್ ಮಾಡಿದ ವಿಕ್ಟೋರಿಯಾ ತಂಡವು 41.5 ಓವರ್’ಗಳಲ್ಲಿ 127 ರನ್’ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಟಾಸ್ಮೇನಿಯಾ 226 ರನ್ ಕಲೆಹಾಕಿದ್ದು, ಒಟ್ಟಾರೆ 99 ರನ್’ಗಳ ಮುನ್ನಡೆ ಸಾಧಿಸಿದೆ. ಇನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಳಿದ ಜಾರ್ಜ್ ಬೈಲಿ 67 ಎಸೆತಗಳಲ್ಲಿ 41 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ವಿನೂತನ ಬ್ಯಾಟಿಂಗ್ ಶೈಲಿ ಪರಿಚಯಿಸಿದ ಜಾರ್ಜ್ ಬೈಲಿ
ಕಳೆದ ವರ್ಷ ಜಾರ್ಜ್ ಬೈಲಿ, ನ್ಯೂಜಿಲೆಂಡ್ ವಿರುದ್ಧವೂ ಇದೇ ರೀತಿ ವಿಚಿತ್ರವಾಗಿ ಕ್ರಿಕೆಟ್ ಸ್ಟ್ಯಾನ್ ತೆಗೆದುಕೊಂಡು ಬ್ಯಾಟ್ ಬೀಸಿದ್ದರು. ಇದೀಗ ಮತ್ತೊಂದು ರೀತಿ ಬ್ಯಾಟ್ ಸ್ಟ್ಯಾನ್ಸ್ ತೆಗೆದುಕೊಳ್ಳುವುದನ್ನು ತೋರಿಸಿಕೊಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.