ಅಶ್ವಿನ್‌, ಶ್ರೇಯಸ್ ಬ್ಯಾಟಿಂಗ್ ಅಬ್ಬರ: ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 3 ವಿಕೆಟ್‌ಗಳ ಗೆಲುವು; ಸರಣಿ ಕ್ಲೀನ್‌ಸ್ವೀಪ್

By BK Ashwin  |  First Published Dec 25, 2022, 11:45 AM IST

4ನೇ ದಿನದಂದೇ ಬಾಂಗ್ಲಾದೇಶದ ಮಿರ್‌ಪುರದಲ್ಲಿ ನಡೆದ ಟೆಸ್ಟ್‌ ಪಂದ್ಯ ಅಂತ್ಯಗೊಂಡಿದ್ದು, ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ ತಂಡ ಕ್ಲೀನ್‌ಸ್ವೀಪ್‌ ಸಾಧಿಸಿದೆ.


ಭಾರತ (India) - ಬಾಂಗ್ಲಾದೇಶ (Bangladesh) ನಡುವಣ 2ನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್‌ಗಳ ಗೆಲುವು ಸಾದಿಸಿದ್ದು, ಈ ಮೂಲಕ ಕ್ರಿಸ್ಮಸ್‌ (Christmas) ಹಬ್ಬಕ್ಕೆ ಭಾರತ ಟೆಸ್ಟ್‌ ತಂಡ ಸಂಭ್ರಮವನ್ನು ಹೆಚ್ಚಿಸಿದೆ. 4ನೇ ದಿನದಂದೇ ಬಾಂಗ್ಲಾದೇಶದ ಮಿರ್‌ಪುರದಲ್ಲಿ (Mirpur) ನಡೆದ ಟೆಸ್ಟ್‌ ಪಂದ್ಯ ಅಂತ್ಯಗೊಂಡಿದ್ದು, ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ ತಂಡ ಕ್ಲೀನ್‌ಸ್ವೀಪ್‌ ಸಾಧಿಸಿದೆ. ಎರಡನೇ ಇನ್ನಿಂಗ್ಸ್‌ ಬ್ಯಾಟಿಂಗ್‌ನಲ್ಲಿ ಆರಂಭದಲ್ಲಿ ಸಂಕಷ್ಟದಲ್ಲಿದ್ದ ಭಾರತ ತಂಡ ಶ್ರೇಯಸ್‌ ಅಯ್ಯರ್‌ (Shreyas Iyer) ಹಾಗೂ ರವಿಚಂದ್ರನ್‌ ಅಶ್ವಿನ್ (Ravichandran Ashwin) ಅವರ ಉತ್ತಮ 8 ನೇ ವಿಕೆಟ್‌ ಜತೆಯಾಟದಿಂದ ಗೆಲುವು ಸಾಧಿಸಿದೆ. ಈ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ (World Test Championship Final) ಆಸೆಯನ್ನು ಭಾರತ ತಂಡ ಜೀವಂತವಾಗಿರಿಸಿಕೊಂಡಿದೆ.

ಏಕದಿನ ಸರಣಿಯಲ್ಲಿ 1 - 2 ಅಂತರದಲ್ಲಿ ಸೋಲನುಭವಿಸಿದ್ದ ಭಾರತ ತಂಡ, ಟೆಸ್ಟ್‌ ಸರಣಿಯಲ್ಲಿ 2 - 0 ಅಂತರದಿಂದ ಗೆದ್ದು ಸೇಡು ತೀರಿಸಿಕೊಂಡಿದೆ. ಅಲ್ಲದೆ, ಕ್ರಿಸ್ಮಸ್‌ ಸಂಭ್ರಮವನ್ನು ಹೆಚ್ಚಿಸಿದೆ. 145 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭಿಕ ಕುಸಿತವನ್ನು ಅನುಭವಿಸಿತ್ತು. 

Tap to resize

Latest Videos

ಇದನ್ನು ಓದಿ: Ind vs Ban: 231 ರನ್‌ಗಳಿಗೆ ಬಾಂಗ್ಲಾ ಆಲೌಟ್, ಎರಡನೇ ಟೆಸ್ಟ್ ಗೆಲ್ಲಲು ಟೀಂ ಇಂಡಿಯಾಗೆ ಸಾಧಾರಣ ಗುರಿ

ಮೂರನೇ ದಿನದ ಅಂತ್ಯದಲ್ಲಿ 45 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಟೀಂ ಇಂಡಿಯಾ ಸಂಕಷ್ಟದಲ್ಲಿತ್ತು. ಅಲ್ಲದೆ, ಬಾಂಗ್ಲಾದೇಶ ತಂಡ ಸಹ 2 ಪಂದ್ಯಗಳ ಸರಣಿಯನ್ನು ಸಮಬಲ ಸಾಧಿಸುವ ಆಸೆ ಜೀವಂತವಾಗಿರಿಸಿಕೊಂಡಿತ್ತು. ಆದರೆ, ತಂಡದ ಪರವಾಗಿ ರವಿಚಂದ್ರನ್‌ ಅಶ್ವಿನ್‌ 45 ರನ್‌ ಸಿಡಿಸಿ ಟಾಪ್‌ ಸ್ಕೋರರ್‌ ಎನಿಸಿಕೊಂಡರೆ, ಇವರ ಜತೆಗೆ ಶ್ರೇಯಸ್‌ ಅಯ್ಯರ್‌ 29 ರನ್‌ ಗಳಿಸಿ ನಾಟೌಟ್‌ ಆಗುವ ಮೂಲಕ ಉತ್ತಮ ಆಟವಾಡಿ ತಂಡದ ಗೆಲುವಿಗೆ ಕಾರಣರಾಗಿದ್ದು, ಬಾಂಗ್ಲಾದ ಆಸೆಗೆ ತಣ್ಣೀರೆರಚಿದರು. ಇನ್ನು, ಭಾರತದ ಆರಂಭಿಕ ಆಟಗಾರರನ್ನು ಬಿಟ್ಟೂಬಿಡದೆ ಕಾಡಿದ ಬಾಂಗ್ಲಾ ಸ್ಪಿನ್ನರ್‌ ಮೆಹಿದಿ ಹಸನ್‌ 5 ವಿಕೆಟ್‌ ಪಡೆದು ಮಿಂಚಿದರು. 

A cracking unbeaten 71-run stand between (29*) & (42*) power to win in the second Test and 2⃣-0⃣ series victory 👏👏

Scorecard - https://t.co/CrrjGfXPgL pic.twitter.com/XVyuxBdcIB

— BCCI (@BCCI)

ತಂಡದ ನಾಯಕ ಕೆ.ಎಲ್‌,. ರಾಹುಲ್‌ 2 ರನ್‌ಗೆ ಮುಗ್ಗರಿಸಿದರೆ, ಬಳಿಕ ಮೆಹಿದಿ ಚೇತೇಶ್ವರ ಪೂಜಾರ (6), ಶುಭಮನ್ ಗಿಲ್ (7), ವಿರಾಟ್ ಕೊಹ್ಲಿ (1) ಅವರನ್ನು ತ್ವರಿತವಾಗಿ ಔಟ್‌ ಮಾಡಿದರು. ಈ ವೇಳೆ ಭಾರತ ತಂಡ ಸಂಕಷ್ಟದಲ್ಲಿತ್ತು. ಬಳಿಕ 3ನೇ ದಿನದಂತ್ಯಕ್ಕೆ ಜಯದೇವ್ ಉನದ್ಕತ್ ಜೊತೆಯಲ್ಲಿ ಅಕ್ಸರ್ ಪಟೇಲ್ ಅವರನ್ನು ನಾಲ್ಕನೇ ಸ್ಥಾನಕ್ಕೆ ಬಡ್ತಿ ನೀಡಿತ್ತು. ಇಂದು ಅಂದರೆ, 4 ನೇ ದಿನದಂದು, ಭಾರತದ ರಾತ್ರಿ ಕಾವಲುಗಾರ ಉನದ್ಕತ್ ಅವರನ್ನು ಶಕೀಬ್ 13 ರನ್‌ಗಳಿಗೆ ಬಲೆಗೆ ಬೀಳಿಸಿದರು. ನಂತರ, 9 ಎಸೆತಗಳ ಅಂತರದಲ್ಲಿ ರಿಷಬ್ ಪಂತ್ (9) ಮತ್ತು ಅಕ್ಸರ್ (34) ಸಹ ಔಟಾದರು.

 

ಇದನ್ನೂ ಓದಿ: Ind vs Ban: ಕುಸಿದ ಟೀಂ ಇಂಡಿಯಾಗೆ ಪಂತ್, ಶ್ರೇಯಸ್ ಅಯ್ಯರ್‌, ಬಾಂಗ್ಲಾ ಎದುರು ಭಾರತ ಮೇಲುಗೈ

ಇದಕ್ಕೂ ಮೊದಲು ಲಿಟ್ಟನ್ ದಾಸ್ ಮತ್ತು ಝಾಕಿರ್ ಹಸನ್ ಅವರ ಅರ್ಧಶತಕಗಳು ಬಾಂಗ್ಲಾದೇಶವನ್ನು ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ 231 ರನ್‌ ಕಲೆ ಹಾಕುವಂತೆ ಮಾಡಿದವು. ಮೊದಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಝಾಕಿರ್, ಎರಡನೇ ಪಂದ್ಯದಲ್ಲೂ ಮಿಂಚಿದರು. 

ಇನ್ನೊಂದೆಡೆ, ಭಾರತದ ವೇಗದ ಬೌಲರ್‌ಗಳಾದ ಉಮೇಶ್ ಯಾದವ್, ಜಯದೇವ್ ಉನಾದ್ಕತ್ ಮತ್ತು ಮೊಹಮ್ಮದ್ ಸಿರಾಜ್ ಆತಿಥೇಯರನ್ನು ಹೆಚ್ಚು ರನ್‌ ಕಲೆ ಹಾಕದಂತೆ ಕಟ್ಟಿ ಹಾಕಿದರು. ಬಳಿಕ ಲಿಟ್ಟನ್‌ ಅವರನ್ನು ಸಿರಾಜ್ ಔಟ್‌ ಮಾಡಿದರೆ, ನಂತರ ಅಕ್ಸರ್ ಮತ್ತು ಅಶ್ವಿನ್ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್‌ಗಳನ್ನು ಗಳಿಸಿ ಬಾಂಗ್ಲಾದೇಶ ತಂಡದ ಕೆಳ ಕ್ರಮಾಂಕದ ಆಟಗಾರರನ್ನು ಔಟ್‌ ಮಾಡುವಲ್ಲಿ ಯಶಸ್ವಿಯಾದರು. 

click me!