ಫೆ.9ರಿಂದ ಭಾರತ ಆಸ್ಟ್ರೇಲಿಯಾ ಸರಣಿ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ, ತಂಡದಲ್ಲಿ ಯಾರಿಗಿದೆ ಸ್ಥಾನ?

By Suvarna NewsFirst Published Feb 4, 2023, 8:24 PM IST
Highlights

ನ್ಯೂಜಿಲೆಂಡ್ ಸರಣಿ ಮುಗಿಸಿರುವ ಟೀಂ ಇಂಡಿಯಾ ಇದೀಗ ಆಸ್ಟ್ರೇಲಿಯಾ ವಿರುದ್ದ ಮಹತ್ವದ ಸರಣಿಗೆ ಸಜ್ಜಾಗುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಹಾಗೂ ಏಕದಿನ ಸರಣಿ ವೇಳಾಪಟ್ಟಿ, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಆಟಗಾರರ ವಿವರ ಇಲ್ಲಿದೆ.

ಮುಂಬೈ(ಫೆ.04): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಫೆಬ್ರವರಿ 9 ರಿಂದ ಆರಂಭಗೊಳ್ಳುತ್ತಿದೆ. ಇದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈಗಾಗಲೇ ಟೀಂ ಇಂಡಿಯಾ ಭರ್ಜರಿ ತಯಾರಿ ಆರಂಭಿಸಿದೆ. ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಈ ಬಾರಿ ಟೀಂ ಇಂಡಿಯಾ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಕಳೆದ 3 ಸರಣಿಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಇದರಲ್ಲಿ ಎರಡು ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಗೆಲುವಿನ ಸಿಹಿ ಕಂಡಿದೆ. ಬರೋಬ್ಬರಿ 6 ವರ್ಷಗಳ ಬಳಿಕ ಭಾರತ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡುತ್ತಿದೆ. 2017ರಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಮಾಡಿತ್ತು. 

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ವೇಳಾಪಟ್ಟಿ
ಭಾರತ- ಆಸ್ಟ್ರೇಲಿಯಾ ಮೊದಲ ಟೆಸ್ಟ್, ಫೆಬ್ರವರಿ 9 ರಿಂದ 13, ವಿದರ್ಭ ಕ್ರಿಕೆಟ್ ಕ್ರೀಡಾಂಗಣ, ನಾಗ್ಪುರ
ಭಾರತ- ಆಸ್ಟ್ರೇಲಿಯಾ 2ನೇ ಟೆಸ್ಟ್, ಫೆಬ್ರವರಿ 17 ರಿಂದ 21, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
ಭಾರತ- ಆಸ್ಟ್ರೇಲಿಯಾ 3ನೇ ಟೆಸ್ಟ್, ಮಾರ್ಚ್ 1 ರಿಂದ 5,  ಹಿಮಾಚಲ ಪ್ರದೇಶ ಕ್ರೀಡಾಂಗಣ, ಧರ್ಮಶಾಲಾ
ಭಾರತ- ಆಸ್ಟ್ರೇಲಿಯಾ 4ನೇ ಟೆಸ್ಟ್,ಮಾರ್ಟ್ 9 ರಿಂದ 13, ನರೇಂದ್ರ ಮೋದಿ ಕ್ರೀಡಾಂಗಣ, ಅಹಮ್ಮದಾಬಾದ್

ಧೋನಿ ಭೇಟಿಯಾದ ದಾದಾ; ಐಪಿಎಲ್ ಟೂರ್ನಿಗೂ ಮುನ್ನ 'ಖಾಸ್ ಬಾತ್'..?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ವೇಳಾಪಟ್ಟಿ
ಭಾರತ- ಆಸ್ಟ್ರೇಲಿಯಾ ಮೊದಲ ಏಕದಿನ, ಮಾರ್ಚ್ 17, ವಾಂಖೆಡೆ ಕ್ರೀಡಾಂಗಣ ಮುಂಬೈ
ಭಾರತ- ಆಸ್ಟ್ರೇಲಿಯಾ 2ನೇ ಏಕದಿನ, ಮಾರ್ಚ್ 19, ರಾಜಶೇಕರ ರೆಡ್ಡಿ ಕ್ರೀಡಾಂಗಣ, ವಿಶಾಖಪಟ್ಟಣಂ
ಭಾರತ- ಆಸ್ಟ್ರೇಲಿಯಾ 3ನೇ ಏಕದಿನ, ಮಾರ್ಟ್ 22, ಎಂಎ ಚಿದಂರಬಂ ಕ್ರೀಡಾಂಗಣ, ಚೆನ್ನೈ

ಆಸೀಸ್ ವಿರುದ್ಧದ ಮೊದಲೆರೆಡು ಟೆಸ್ಟ್ ಪಂದ್ಯಕ್ಕೆ ಭಾರತ ತಂಡ
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್(ಉಪ ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್, ಇಶಾನ್ ಕಿಶನ್, ಆರ್ ಅಶ್ವಿನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಸೂರ್ಯಕುಮಾರ್ ಯಾದವ್ 

ಭಾರತ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಕ್ಕೆ ಹಾಜರಾಗಲಿದ್ದಾರೆ ಮೋದಿ ಹಾಗೂ ಆಸೀಸ್ ಪ್ರಧಾನಿ!

ಆಸ್ಟ್ಪೇಲಿಯಾ ತಂಡ
ಪ್ಯಾಟ್ ಕಮಿನ್ಸ್(ನಾಯಕ), ಆಶ್ಟನ್ ಅಗರ್, ಸ್ಕಾಟ್ ಬೊಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ನಥನ್ ಲಿಯೋನ್, ಲ್ಯಾನ್ಸ್ ಮೊರಿಸ್, ಟೊಡ್ ಮುರ್ಪಿ, ಮ್ಯಾಥ್ಯೂ ರೇನ್ಶಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸೆಪ್ಸನ್, ಡೇವಿಡ್ ವಾರ್ನರ್  

ಆಸ್ಟ್ರೇಲಿಯಾ ವಿರುದ್ದದ 4 ಪಂದ್ಯಗಳ ಸರಣಿಯು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತ ಅರ್ಹತೆ ಪಡೆಯಲಿದೆಯೋ ಇಲ್ಲವೋ ಎನ್ನುವುದನ್ನು ನಿರ್ಧರಿಸಲಿದೆ. ಹೀಗಾಗಿ ಆಸೀಸ್ ವಿರುದ್ದ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಕಳೆದ 3 ಬಾರಿಯ ಮುಖಾಮುಖಿಯಲ್ಲಿ ಭಾರತ ಸರಣಿ ಗೆದ್ದುಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಹೆಚ್ಚು ಆತ್ಮವಿಶ್ವಾಸದಿಂದ ತಯಾರಿ ನಡೆಸುತ್ತಿದೆ. ಇತ್ತ ಆಸ್ಟ್ರೇಲಿಯಾ ಸತತ ಸೋಲು ತಪ್ಪಿಸಲು ತಯಾರಾಗಿದೆ.
 

click me!