ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ತಂಡದಲ್ಲಿ 4 ಬದಲಾವಣೆ..!

By Suvarna NewsFirst Published Dec 2, 2020, 8:57 AM IST
Highlights

ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಭಾರತ ತಂಡದಲ್ಲಿ 4 ಹಾಗೂ ಆಸ್ಟ್ರೇಲಿಯಾ ತಂಡದಲ್ಲಿ 2 ಬದಲಾವಣೆಗಳಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕ್ಯಾನ್‌ಬೆರಾ(ಡಿ.02): ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದು, ಮಹತ್ವದ ಬದಲಾವಣೆಯೊಂದಿಗೆ ತಂಡ ಕಣಕ್ಕಿಳಿದಿದೆ.

ಹೌದು, 3 ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತು ಸರಣಿ ಕೈಚೆಲ್ಲಿರುವ ಟೀಂ ಇಂಡಿಯಾ ಕೊನೆಯ ಪಂದ್ಯದಲ್ಲಿ 4 ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಕೊನೆಯ ಏಕದಿನ ಪಂದ್ಯದಲ್ಲಿ ಶುಭ್‌ಮನ್ ಗಿಲ್, ಶಾರ್ದೂಲ್ ಠಾಕೂರ್. ಕುಲ್ದೀಪ್ ಯಾದವ್ ಕಮ್‌ಬ್ಯಾಕ್ ಮಾಡಿದ್ದು, ಟಿ ನಟರಾಜನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. 

Tails was the call and tails it is. Captain has won the toss and are batting first in the 3rd ODI. pic.twitter.com/ei4x2aqpAt

— BCCI (@BCCI)

ಇನ್ನು ಆಸ್ಟ್ರೇಲಿಯಾ ತಂಡದಲ್ಲಿಯೂ 2 ಬದಲಾವಣೆಗಳಾಗಿದ್ದು, ವಾರ್ನರ್ ಹಾಗೂ ಕಮಿನ್ಸ್ ಬದಲಿಗೆ ಕ್ಯಾಮರೋನ್ ಗ್ರೀನ್ ಹಾಗೂ ಆಸ್ಟನ್ ಅಗರ್ ತಂಡ ಕೂಡಿಕೊಂಡಿದ್ದಾರೆ. ಮಾರ್ನಸ್ ಲಬುಶೇನ್ ಆಸ್ಟ್ರೇಲಿಯಾ ಪರ ಫಿಂಚ್ ಜತೆಗೆ ಇನಿಂಗ್ಸ್ ಆರಂಭಿಸಲಿದ್ದಾರೆ.

ತಂಡಗಳು ಹೀಗಿವೆ:

ಆಸ್ಟ್ರೇಲಿಯಾ:

3rd ODI. Australia XI: A Finch, M Labuschagne, S Smith, M Henriques, G Maxwell, A Carey, C Green, A Agar, S Abbott, A Zampa, J Hazlewood https://t.co/V0mKhkiOZw

— BCCI (@BCCI)

ಭಾರತ:

3rd ODI. India XI: S Dhawan, S Gill, V Kohli, S Iyer, KL Rahul, H Pandya, R Jadeja, S Thakur, K Yadav, J Bumrah, T Natarajan https://t.co/V0mKhkiOZw

— BCCI (@BCCI)

 

 

click me!