ನೀ ಹುಟ್ಟುವ ಮೊದಲೇ ಸೆಂಚುರಿ ಸಿಡಿಸಿದ್ದೇನೆ; ಲಂಕಾ ಲೀಗ್‌ನಲ್ಲಿ ಆಫ್ರಿದಿ-ನವೀನ್ ಕಿತ್ತಾಟ!

By Suvarna NewsFirst Published Dec 1, 2020, 8:16 PM IST
Highlights

ಲಂಕಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಹೇಳಿದ ಮಾತು ಇದೀಗ ಪರ ವಿರೋಧಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆಫ್ರಿದಿ ಕಿತ್ತಾಡಲು ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.

ಕೊಲೊಂಬೊ(ಡಿ.01): ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಆಯೋಜಿಸಿರುವ ಲಂಕಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಕ್ಯಾಂಡಿ ಟಸ್ಕರ್ಸ್ ಹಾಗೂ ಗಾಲೆ ಗ್ಲಾಡಿಯೇಟರ್ಸ್ ನಡುವಿನ ಪಂದ್ಯದಲ್ಲಿ ಸ್ಲೆಡ್ಜಿಂಗ್ ನಡೆದಿದೆ.  ಟಸ್ಕರ್ಸ್ ತಂಡದ ವೇಗಿ ನವೀನ್ ಉಲ್ ಹಕ್ ಹಾಗೂ ಗ್ಲಾಡಿಯೇಟರ್ಸ್ ತಂಡದ ವೇಗಿ ಮೊಹಮ್ಮದ್ ಅಮೀರ್ ನಡುವಿನ ಕಿತ್ತಾಟ ಮತ್ತೊಂದು ಸ್ವರೂಪ ಪಡೆದುಕೊಂಡು ವೈರಲ್ ಆಗಿದೆ.

ಇಂಡೋ-ಆಸೀಸ್ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ 3 ಬದಲಾವಣೆ..?.

ಗಾಲೆ ಗ್ಲಾಡಿಯೇಟರ್ಸ್ ವಿರುದ್ದ ಕ್ಯಾಂಡಿ ಟಸ್ಕರ್ಸ್ ಗೆಲುವು ದಾಖಲಿಸಿತು. ಪಂದ್ಯದ ಅಂತಿಮ ಹಂತದಲ್ಲಿ ಕ್ರೀಸ್‌ನಲ್ಲಿದ್ದ ನವೀನ್ ಉಲ್ ಹಕ್, ಗ್ಲಾಡಿಯೇಟರ್ಸ್ ತಂಡದ ವೇಗಿ ಮೊಹಮ್ಮದ್ ಅಮೀರ್ ವಿರುದ್ಧ ಸ್ಲೆಡ್ಜಿಂಗ್ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಇದರ ಜೊತೆಗೆ ಗ್ಲಾಡಿಯೇಟರ್ಸ್ ಗೆಲುವಿನ ನಗೆ ಬೀರಿದೆ.

 

Smiles from Afridi - and then a scowl! 😁😠

What a character! 🤣

Tempers flaring a little after Afridi's Galle Gladiators beaten by Kandy Tuskers in

Tuskers' Naveen-ul-Haq had shared words with Mohammad Amir - and Afridi wasn't amused! pic.twitter.com/h9u2l6OvQC

— Sky Sports Cricket (@SkyCricket)

ಸೋಲು ಹಾಗೂ ಸ್ಲೆಡ್ಜಿಂಗ್ ಹತಾಶೆಯಲ್ಲಿದ್ದ ಗ್ಲಾಡಿಯೇಟರ್ಸ್ ತಂಡದ ನಾಯಕ ಶಾಹಿದ್ ಆಫ್ರಿದಿ ಮತ್ತೆ ಇದೇ ಕಿತ್ತಾಟವನ್ನು ಮುಂದುವರಿಸುವ ಯತ್ನ ಮಾಡಿದ್ದಾರೆ. ಉಭಯ ತಂಡದ ಕ್ರಿಕೆಟಿಗರು ಕೈಕುಲುಕುವ ವೇಳೆ ಶಾಹಿದಿ ಆಫ್ರಿದಿ, ನವೀನ್ ಉಲ್ ಹಕ್ ಕೈಹಿಡಿದು, ನಾನು ನೀನು ಹುಟ್ಟುವ ಮೊದಲೇ ಸೆಂಚುರಿ ಸಿಡಿಸಿದ್ದೇನೆ ಎಂದು ಅಫ್ರಿದಿ ಹೇಳಿದ್ದಾರೆ.

ಹಿರಿಯ ಕ್ರಿಕೆಟಿಗ ಹಾಗೂ ಮಾಜಿ ಕ್ರಿಕೆಟಿಗ ಆಫ್ರಿದಿ ಈ ರೀತಿ ಪರಿಸ್ಥಿತಿಗಳನ್ನು ತಿಳಿಗೊಳಿಸಬೇಕು. ಆದರೆ ತುಪ್ಪು ಸುರಿಯಬಾರದು ಅನ್ನೋ ಅಭಿಪ್ರಾಯವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

click me!