'ಚೆನ್ನೈ ಅಥವಾ ಕೋಲ್ಕತ್ತಾದಲ್ಲಿ ಆಡೋದಾದ್ರೆ ಮಾತ್ರ ವಿಶ್ವಕಪ್‌ಗೆ ಬರ್ತೇವೆ..' ಐಸಿಸಿಗೆ ತಿಳಿಸಿದ ಪಾಕ್‌!

By Santosh NaikFirst Published Apr 11, 2023, 8:07 PM IST
Highlights

ಇದೇ ವರ್ಷದ ಕೊನೆಯಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಪಾಕಿಸ್ತಾನ ತನ್ನ ನಿರ್ಧಾರವನ್ನು ತಿಳಿಸಿದೆ. ಕೋಲ್ಕತ್ತಾ ಅಥವಾ ಚೆನ್ನೈನಲ್ಲಿ ಪಂದ್ಯ ನಡೆಯುವುದಾದರೆ, ವಿಶ್ವಕಪ್‌ನಲ್ಲಿ ಆಡುತ್ತೇವೆ ಎಂದು ಪಾಕಿಸ್ತಾನ ಐಸಿಸಿಗೆ ತಿಳಿಸಿದೆ.
 

ನವದೆಹಲಿ (ಏ.11): ಈ ವರ್ಷದ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಪಾಕಿಸ್ತಾನ ತನ್ನ ನಿರ್ಧಾರವನ್ನು ತಿಳಿಸಿದೆ. ಭಾರತದ ಎರಡು ಐತಿಹಾಸಿಕ ಸ್ಥಳವಾದ ಚೆನ್ನೈನ ಚೆಪಾಕ್‌ ಮೈದಾನ ಹಾಗೂ ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನ ತಮ್ಮ ಪಂದ್ಯಗಳನ್ನು ಆಡಲು ಮೊದಲ ಆಯ್ಕೆ ಎಂದು ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಗೆ ತಿಳಿಸಿದೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಈಗಾಗಲೇ ಭಾರತದಲ್ಲಿ ತನ್ನ ಪಂದ್ಯಗಳನ್ನು ಆಡಲು ಸ್ಥಳಗಳನ್ನು ನಿರ್ಧಾರ ಮಾಡಲಿದೆ. ಆದರೆ. ಇದರ ಅಂತಿಮ ನಿರ್ಧಾರವನ್ನು ಬಿಸಿಸಿಐ ಮಾಡಬೇಕಿದೆ. ಐಸಿಸಿ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಈ ಸುದ್ದಿ ವರದಿ ಮಾಡಿದೆ. ಅಕ್ಟೋಬರ್‌ 5 ರಿಂದ ಭಾರತದ ಆತಿಥ್ಯದಲ್ಲಿ ವಿಶ್ವಕಪ್‌ ಟೂರ್ನಿ ಆರಂಭವಾಗಲಿದ್ದು, ಈಗಾಗಲೇ 12 ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ ಚೆನ್ನೈ ಹಾಗೂ ಕೋಲ್ಕತ್ತದ ಹೆಸರುಗಳು ಕೂಡ ಸೇರಿವೆ. ಉಳಿದಂತೆ ಅಹಮದಾಬಾದ್‌, ಲಖನೌ, ಮುಂಬೈ, ರಾಜ್‌ಕೋಟ್‌, ಬೆಂಗಳೂರು, ದೆಹಲಿ, ಇಂದೋರ್‌, ಗುವಾಹಟಿ, ಹೈದರಾಬಾದ್‌ ಹಾಗೂ ಧರ್ಮಶಾಲಾದಲ್ಲಿ ಪಂದ್ಯಗಳು ನಡೆಯಲಿದೆ.  ವರದಿಗಳ ಪ್ರಕಾರ, ಈ ಚರ್ಚೆಗಳು ಬಿಸಿಸಿಐ ಮಟ್ಟಕ್ಕೆ ಇನ್ನೂ ಬಂದಿಲ್ಲ. ತನ್ನ ಪಂದ್ಯಗಳು ಆಡುವ ಸ್ಥಳವನ್ನು ಆಯ್ಕೆ ಮಾಡಿ ಪಾಕಿಸ್ತಾನ, ಐಸಿಸಿಗೆ ಮಾಹಿತಿ ನೀಡಿದೆ.

ಪಾಕಿಸ್ತಾನದ ವಿಶ್ವಕಪ್ ಪಂದ್ಯಗಳನ್ನು ಎರಡು ಅಥವಾ ಮೂರು ನಗರಗಳಲ್ಲಿ ಮಾತ್ರ ನಡೆಸಬೇಕೆಂದು ಭಾರತೀಯ ಕ್ರಿಕೆಟ್‌ ಮಂಡಳಿ ಕೂಡ ಬಯಸುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಸಿಸಿಐ ಇದಕ್ಕಾಗಿ ಉತ್ತರದಲ್ಲಿ ಒಂದು ಸ್ಥಳ ಮತ್ತು ದಕ್ಷಿಣದಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡಬಹುದು.

ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ: ಕೊನೆಗೂ ನಿಟ್ಟುಸಿರು ಬಿಟ್ಟ ಆರೋಪಿ

ಹಾಗೇನಾದರೂ ಪಾಕಿಸ್ತಾನದ ಪಂದ್ಯಗಳಿಗೆ ದಕ್ಷಿಣದ ಕೇಂದ್ರ ಆಯ್ಕೆ ಮಾಡಿದಲ್ಲಿ ಖಂಡಿತವಾಗಿ ಈ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿದೆ. ಹಾಗೇನಾದರೂ ಉತ್ತರದಲ್ಲಿ ನಡೆದಲ್ಲಿ ದೆಹಲಿಯಲ್ಲಿ ಪಂದ್ಯಗಳು ನಡೆಯಲಿದೆ. ಕೋಲ್ಕತ್ತಾ ಪೂರ್ವ ಭಾರತದಲ್ಲಿ ಇರುವ ಕಾರಣ, ಆ ಸ್ಥಳವನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿದೆ.

ಲಖನೌ ವಿರುದ್ಧ ಮುಗ್ಗರಿಸಿದ ಆರ್‌ಸಿಬಿ ಟ್ರೋಲ್ ಮಾಡಿದ ಮುಂಬೈ ಇಂಡಿಯನ್ಸ್ ಫ್ಯಾನ್ಸ್!

ಪಾಕಿಸ್ತಾನ ತಂಡ 2016ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಈಡನ್ ಗಾರ್ಡನ್‌ನಲ್ಲಿ ಆಡಿತ್ತು. ಪಾಕಿಸ್ತಾನ ಭಾರತದ ವಿರುದ್ಧ ಈ ಪಂದ್ಯದಲ್ಲಿ ಕಣಕ್ಕಿಳಿದಿತ್ತು. ಇದರಲ್ಲಿ ಭಾರತ 6 ವಿಕೆಟ್‌ಗಳ ಜಯ ಸಾಧಿಸಿತ್ತು.

click me!