ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಇದೀಗ ವಾರ್ನಿಂಗ್ ಸಿಕ್ಕಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಪುಣೆ: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲು ಆಸ್ಟ್ರೇಲಿಯಾ ಸರಣಿಗೂ ಮುನ್ನ ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ. ಆಸೀಸ್ ವಿರುದ್ಧ 5 ಪಂದ್ಯಗಳ ಸರಣಿಗೆ ಈಗಾಗಲೇ ತಂಡವನ್ನು ಪ್ರಕಟಿಸಲಾಗಿದ್ದು, ಹಲವು ಹೊಸ ಮುಖಗಳಿವೆ. ಆದರೆ ಕಿವೀಸ್ ಸರಣಿಯಲ್ಲಿ ಹಿರಿಯ ಆಟಗಾರರೇ ವೈಫಲ್ಯ ಅನುಭವಿಸಿದ್ದು ತಂಡವನ್ನು ಮಾನಸಿಕವಾಗಿ ಕುಗ್ಗಿಸಿದೆ.
ತಂಡಕ್ಕೆ ತವರಿನಲ್ಲೇ ಸರಣಿ ಸೋತಿರುವ ಆಘಾತ ಒಂದೆಡೆಯಾದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ಬಹುತೇಕ ಎಲ್ಲಾ ಪಂದ್ಯ ಗೆಲ್ಲಲೇಬೇಕಾದ ಒತ್ತಡ ಮತ್ತೊಂದೆಡೆ. ಜೊತೆಗೆ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಳಪೆ ಲಯದಲ್ಲಿದ್ದಾರೆ.
undefined
ಬೆಂಗಳೂರಿನಲ್ಲಿ ಕಿವೀಸ್‌ನ ವೇಗದ ಬೌಲಿಂಗ್ ಮುಂದೆ ತತ್ತರಿಸಿ ಹೋಗಿದ್ದ ಭಾರತ ತಂಡ ಆಸ್ಟ್ರೇಲಿಯಾದ ಬೌನ್ಸಿ ಪಿಚ್‌ಗಳಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲವಿದೆ. ಹೀಗಾಗಿ ಆಟಗಾರರು ಆಸೀಸ್ ಪ್ರವಾಸಕ್ಕೂ ಮುನ್ನ ಮಾನಸಿಕವಾಗಿ ಸಜ್ಜುಗೊಳ್ಳಬೇಕಾದ ಅನಿವಾರ್ಯತೆಯಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಪುಣೆ ಟೆಸ್ಟ್ ಸೋಲುತ್ತಿದ್ದಂತೆ ಭಾರತದ ಫೈನಲ್ ಹಾದಿ ಮತ್ತಷ್ಟು ಕಠಿಣ!
ತವರಲ್ಲಿ ವರ್ಷದಲ್ಲಿ 3 ಸೋಲು: 83ರ ನಂತರ ಇದೇ ಮೊದಲು
1983ರ ಬಳಿಕ ತವರಿನಲ್ಲಿ ಭಾರತ ತಂಡ ಒಂದು ವರ್ಷದಲ್ಲಿ 3 ಟೆಸ್ಟ್ ಪಂದ್ಯಗಳನ್ನು ಸೋತಿರುವುದು ಇದೇ ಮೊದಲು. ಈ ವರ್ಷ ಜನವರಿಯಲ್ಲಿ ಹೈದ್ರಾಬಾದ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯ ಸೋತಿದ್ದ ಭಾರತ, ಇದೀಗ ನ್ಯೂಜಿಲೆಂಡ್ ವಿರುದ್ಧ 2 ಪಂದ್ಯದಲ್ಲಿ ಸೋಲುಂಡಿದೆ.
ಈ ವರ್ಷ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 3ರಲ್ಲಿ ಸೋತಿದೆ. 1983ರಲ್ಲಿ ಭಾರತ ತವರಿನಲ್ಲಿ ಆಡಿದ್ದ 9 ಟೆಸ್ಟ್‌ಗಳಲ್ಲಿ 3ರಲ್ಲಿ ಸೋತು 6 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು. ಅದಕ್ಕೂ ಮುನ್ನ 1969ರಲ್ಲಿ 8 ಪಂದ್ಯಗಳಲ್ಲಿ 2 ಗೆದ್ದು, 4 ಸೋಲುಂಡಿತ್ತು. 2 ಪಂದ್ಯ ಡ್ರಾಗೊಂಡಿತ್ತು.
ಪುಣೆಯಲ್ಲೂ ಸೋತು 12 ವರ್ಷ ಬಳಿಕ ಟೆಸ್ಟ್ ಸರಣಿ ಕೈಚೆಲ್ಲಿದ ಟೀಂ ಇಂಡಿಯಾಗೆ ಮತ್ತೊಂದು ಶಾಕ್!
ಭಾರತ ವಿರುದ್ಧ 7ನೇ ಬಾರಿ ಸರಣಿ ಗೆಲುವು
ಕಿವೀಸ್ ತಂಡ ಭಾರತ ವಿರುದ್ಧ 7ನೇ ಬಾರಿ ಟೆಸ್ಟ್ ಸರಣಿ ಗೆಲುವು ಸಾಧಿಸಿತು. ಇತ್ತಂಡಗಳ ನಡುವೆ ಇದು 23ನೇ ಸರಣಿ. ಈ ಪೈಕಿ 12ರಲ್ಲಿ ಭಾರತ ಗೆದ್ದಿದ್ದರೆ, 4 ಸರಣಿ ಡ್ರಾಗೊಂಡಿವೆ.
ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದ 6ನೇ ತಂಡ ಕಿವೀಸ್
ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ 6ನೇ ತಂಡ ನ್ಯೂಜಿಲೆಂಡ್. ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ತಲಾ 5 ಬಾರಿ, ಆಸ್ಟ್ರೇಲಿಯಾ 4 ಬಾರಿ, ಪಾಕಿಸ್ತಾನ, ದ.ಆಫ್ರಿಕಾ, ನ್ಯೂಜಿಲೆಂಡ್ ತಲಾ 1 ಬಾರಿ ಸರಣಿ ಗೆದ್ದಿವೆ.
15ನೇ ಸೋಲು: ತವರಿನಲ್ಲಿ 300+ ರನ್ ಗುರಿ ಸಿಕ್ಕ 26 ಪಂದ್ಯಗಳಲ್ಲಿ ಭಾರತಕ್ಕಿದು 15ನೇ ಸೋಲು. ಕೇವಲ ಒಂದು ಪಂದ್ಯ ಗೆದ್ದಿದೆ. 9 ಡ್ರಾಗೊಂಡಿದ್ದು, 1 ಟೈ ಆಗಿತ್ತು.